News Karnataka Kannada
Thursday, May 09 2024
ಮಂಗಳೂರು

ಮಂಗಳೂರು: ಎಂಎಸ್‌ಎನ್‌ಐಎ ನಲ್ಲಿ ಗ್ರಾಜುಯೇಷನ್ ಡೇ , ಜ್ಯೋತಿ ಪ್ರಧಾನ ಸಮಾರಂಭ

Mangaluru: Graduation Day, Jyothi Pradhana ceremony at MS NIA
Photo Credit : By Author

ಮಂಗಳೂರು: ಬೊಂದೆಲ್‌ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯುಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ) ತನ್ನ ಎಂಬಿಎ ೨೨ ನೇ ಬ್ಯಾಚ್ ವಿದ್ಯರ‍್ಥಿಗಳಿಗೆ ಗ್ರಾಜುಯೇಷನ್ ಡೇ ಮತ್ತು ಜ್ಯೋತಿ ಪ್ರಧಾನ ಸಮಾರಂಭವನ್ನು ಗುರುವಾರ ಅಕ್ಟೋಬರ್ ೬, ೨೦೨೨ ರಂದು ಮಧ್ಯಾಹ್ನ ೦೨.೩೦ ಕ್ಕೆ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಆಯೋಜಿಸಿತು.

ಮುಖ್ಯ ಅತಿಥಿಗಳಾಗಿ ರ‍್ಣಾಟಕ ಬ್ಯಾಂಕ್ ಲಿಮಿಟೆಡ್ ನ ಜನರಲ್ ಮ್ಯಾನೇಜರ್ ವಿನಯ ಭಟ್ ಪಿ.ಜೆ. ಭಾಗವಹಿಸಿದರು. ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಭಾವಿ ಅಧ್ಯಕ್ಷ ಮಣೆಲ್ ಅಣ್ಣಪ್ಪ ನಾಯಕ್ ಅಧ್ಯಕ್ಷತೆ ವಹಿಸಿದರು. ಸಂಸ್ಥೆಯ ಕರೆಸ್ಪಾಂಡೆಂಟ್ ಜೀವನ್‌ದಾಸ್ ನಾರಾಯಣ್ ಮತ್ತು ಆಡಳಿತ ಮಂಡಳಿ ಸದಸ್ಯ ರಾಘವ್ ಕಾಮತ್ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾದ ವಿನಯ ಭಟ್ ಪಿ.ಜೆ.ಯವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಆಕಾಂಕ್ಷೆ, ಒಲವು ಮತ್ತು ವಿಶ್ವಾಸ ಎಂಬ ಮೂರು ಅಂಶಗಳನ್ನು ಪಾಲಿಸುವಂತೆ ಸಲಹೆ ನೀಡಿದರು. “ಜಗತ್ತು ಸವಾಲುಗಳಿಂದ ತುಂಬಿದೆ, ನಾವು ಎದುರಿಸುತ್ತಿರುವ ಸವಾಲುಗಳು ನಮಗೆ ಮುಂದುವರಿಯಲು ಅವಕಾಶಗಳನ್ನು ನೀಡುತ್ತವೆ. ಕಠಿಣ ಪರಿಶ್ರಮ, ಬದ್ಧತೆ, ಸರ‍್ಪಣೆ, ಪ್ರಾಮಾಣಿಕತೆ ಮತ್ತು ನೈತಿಕತೆಯು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಕಷ್ಟಕರ ಸಂರ‍್ಭಗಳನ್ನು ಬದಲಾಯಿಸಿ ಸಮಾಜಕ್ಕೆ ಬೇಕಾದ ವಾತಾವರಣವನ್ನು ನರ‍್ಮಿಸಿ. ಮುರಿದ ಕನಸುಗಳನ್ನು ಬಿಟ್ಟುಬಿಡಿ. ಯಶಸ್ಸಿನ ಶಿಖರವನ್ನು ತಲುಪಲು ನಿಮಗೆ ಸಹಾಯ ಮಾಡುವ ಕನಸುಗಳನ್ನು ಕಲ್ಪಿಸಿಕೊಳ್ಳಿ,” ಎಂದು ಅವರು ಹೇಳಿದರು.

ಸಂಸ್ಥೆ ಮತ್ತು ಸಮಾಜಕ್ಕೆ ಮೌಲ್ಯರ‍್ಧನೆ ಮಾಡಬೇಕು ಎಂದು ಸಂಸ್ಥೆಯ ಕರೆಸ್ಪಾಂಡೆಂಟ್ ಜೀವನ್‌ದಾಸ್ ನಾರಾಯಣ್ ವಿದ್ಯರ‍್ಥಿಗಳಿಗೆ ಸಲಹೆ ನೀಡಿದರು. ಆಳವಾದ ಬೇರುಗಳಿಗಾಗಿ ಶ್ರಮಿಸುವುದನ್ನು ಮುಂದುವರಿಸಿ. ಬೇರುಗಳು ಎಂದಿಗೂ ಕಾಣುವುದಿಲ್ಲ; ಅದರ ಫಲಗಳು ಮಾತ್ರ ಕಾಣುತ್ತವೆ ಎಂದು ಅವರು ಹೇಳಿದರು.

ಮಣೇಲ್ ಅಣ್ಣಪ್ಪ ನಾಯಕ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ವಿದ್ಯರ‍್ಥಿಗಳು ಸಂಸ್ಥೆಯ ಭವಿಷ್ಯದ ಬೆಳವಣಿಗೆಗೆ ಸಹಾಯ ಮಾಡುವ ಮೂಲಕ ತಮ್ಮ ಒಡನಾಟವನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು. “ಉತ್ತಮಅನುಭವವನ್ನು ಪಡೆಯಲು ನೀವು ಕನಿಷ್ಟ ಮೂರು ರ‍್ಷಗಳ ಕಾಲ ಸಂಸ್ಥೆಯಲ್ಲಿ ದುಡಿಯಬೇಕು. ನಿಮ್ಮ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸುವುದು ನಿಮ್ಮ ಕೌಶಲ್ಯ ಮತ್ತು ಸಾರ‍್ಥ್ಯಗಳನ್ನು ವೃದ್ಧಿಸುತ್ತದೆ,” ಎಂದು ಅವರು ಹೇಳಿದರು.

ಜ್ಯೋತಿ ಪ್ರಧಾನ ಸಮಾರಂಭವನ್ನು ಸಹಾಯಕ ಪ್ರಾಧ್ಯಾಪಕಿ ನಂದಿತಾ ಸುನಿಲ್ ನರ‍್ವಹಿಸಿದರು. ಎಲ್ಲಾ ಗಣ್ಯರು ಮತ್ತು ಅಧ್ಯಾಪಕರು ದೀಪಕ್ಕೆ ಎಣ್ಣೆಯನ್ನು ಸೇರಿಸಿ ದೀಪವನ್ನು ಬೆಳಗಿಸಿ ಜ್ಞಾನದ ದೀಪವನ್ನು ಸಂಕೇತಿಸಿದರು.

ಈ ಮುಖ್ಯ ದೀಪದಿಂದ ವಿದ್ಯರ‍್ಥಿಗಳು ತಮ್ಮ ದೀಪಗಳನ್ನು ಬೆಳಗಿಸಿ, ಜ್ಞಾನದ ಪ್ರಸಾರವನ್ನು ಸಂಕೇತಿಸಿದರು. ನಂತರ ಎಂಬಿಎ ಪ್ರಮಾಣ ವಚನವನ್ನು ಸಹಾಯಕ ಪ್ರಾಧ್ಯಾಪಕಿ ರೀಮಾ ಫ್ರಾಂಕ್ ಬೋಧಿಸಿದರು. ಅವಾಂತಿಕಾ ಪ್ರರ‍್ಥನೆ ಸಲ್ಲಿಸಿದರು. ಸಂಸ್ಥೆಯ ನರ‍್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಸ್ವಾಗತಿಸಿ ಗಣ್ಯರನ್ನು ಪರಿಚಯಿಸಿದರು.

ಸಹಾಯಕ ಪ್ರಾಧ್ಯಾಪಕಿ ನಂದಿತಾ ಸುನೀಲ್ ಕಾರ್ಯಕ್ರಮ ಪರಿಚಯಿಸಿದರು. ಸಹಪ್ರಾಧ್ಯಾಪಕ ಶರಣಕುಮಾರ್ ಶೆಟ್ಟಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಚಿತ್ರಾಂಜಲಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ರೀಮಾ ಆಗ್ನೆಸ್ ಫ್ರಾಂಕ್ ಕಾರ್ಯಕ್ರಮ ಸಂಯೋಜಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು