News Karnataka Kannada
Friday, May 03 2024
ಮಂಗಳೂರು

ಮಂಗಳೂರು: ಕರಾವಳಿಯಲ್ಲಿ ಈ ಬಾರಿ ಸಂಭ್ರಮದ ಗಣೇಶ ಚತುರ್ಥಿಯ ಆಚರಣೆ

O.P. Ganapathi, a criminal case will be filed if he sells chemically painted Ganapati
Photo Credit : News Kannada

ಮಂಗಳೂರು: ಕರಾವಳಿಯಲ್ಲಿ ಕಳೆದ 2ವರ್ಷ ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸರಳವಾಗಿದ್ದ ಗಣೇಶೋತ್ಸವ ಈ ವರ್ಷ ಸಂಭ್ರಮ ಇಮ್ಮಡಿಯಾಗಿದೆ.

ಗಣೇಶ ಚತುರ್ಥಿ ಹಬ್ಬಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು ಗಣೇಶನ ವಿಗ್ರಹಗಳ ತಯಾರಿ ಕೆಲಸಗಳು ಬಹುತೇಕ ಪೂರ್ಣಗೊಂಡು ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಭರ್ಜರಿ ಸಿದ್ಧತೆ ನಡೆಯುತ್ತಿದೆ.

ಈ ಬಾರಿ ವೈಭವದಿಂದ ಗಣೇಶೋತ್ಸವ ಆಚರಣೆಗೆ ಉಡುಪಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಹಾಗೂ ಕೊಡಗು ಜಿಲ್ಲೆಯಾದ್ಯಂತ ತಯಾರಿ ನಡೆಯುತ್ತಿದ್ದು ವ್ಯಾಪಾರ ವಹಿವಾಟಿಗೆ ಚುಟುಕು ಬಿರುಸುಗೊಂಡಿವೆ ಉಡುಪಿ ನಗರದಲ್ಲಿ ಹೊರ ಜಿಲ್ಲೆ ಹೂವಿನ ವ್ಯಾಪಾರಿಗಳು ಬೀಡುಬಿಟ್ಟಿದ್ದಾರೆ.

ಗೌರಿ ಗಣೇಶನ ಹಬ್ಬಕ್ಕೆಂದು ಸ್ಥಳೀಯರು ಉತ್ತರ ಕರ್ನಾಟಕ ಭಾಗದವರು ನಗರದ ಹಂಪನಕಟ್ಟೆ ,ಸ್ಟೇಟ್ ಬ್ಯಾಂಕ್ , ಕಂಕನಾಡಿ , ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಮುಂಭಾಗ ಸೇರಿದಂತೆ ಕೆಲವೆಡೆಗಳಲ್ಲಿ ಹೂವು ಹಣ್ಣು ತರಕಾರಿಗಳ ವ್ಯಾಪಾರ ನಡೆಸುತ್ತಿದ್ದಾರೆ.

ಮಾರುಕಟ್ಟೆಗಳಲ್ಲಿ ವ್ಯಾಪಾರ ಬಿರುಸಿನಿಂದ ಸಾಗುತ್ತಿದೆ . ಮಂಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಹೂವಿನ ಮಾರಾಟವೂ ಜೋರಾಗಿದೆ ಗಣೇಶನಿಗೆ ಪ್ರಿಯವಾದ ಕಬ್ಬು ಗರಿಕೆ ಸಂಗ್ರಹವು ಅಂಗಡಿಗಳೆದುರು ಕಾಣಿಸಿಕೊಂಡಿದೆ.

ಗಣೇಶ ಚತುರ್ಥಿ ದಿನದಂದು ತುಳುನಾಡಿನ ಬಹುತೇಕ ಮನೆಗಳಲ್ಲಿ ಸಂಪ್ರದಾಯದಂತೆ ತೆನೆ ಇಡುವ ಸಂಪ್ರದಾಯವಿದೆ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ ಸ್ಥಳಗಳಲ್ಲಿ ಪೂಜೆಸಲಾಗುವ ಭತ್ತದ ತೆನೆಯನ್ನು ಮನೆಯ ತೋರಣಕ್ಕೆ ಕಟ್ಟಲಾಗುತ್ತದೆ.

ಕೋರೋನ ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಗಣೇಶನ ಹಬ್ಬ ಆಚರಣೆ ಮನೆ ದೇವಸ್ಥಾನಗಳಲ್ಲಿ ಮಾತ್ರ ಸೀಮಿತಗೊಂಡಿತ್ತು ಸಾರ್ವಜನಿಕವಾಗಿ ಗಣೇಶ ಮೂರ್ತಿ ಇಟ್ಟು ಪೂಜೆ ಮಾಡುವ ಕ್ರಮ ಈ ವರ್ಷ ಮತ್ತೆ ನಡೆಯಲಿದ್ದು ಗಣಪನ ಮೂರ್ತಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಹಬ್ಬದ ಸಡಗರ ಹಾಗೂ ಸ್ಥಳೀಯ ವ್ಯಾಪಾರ ವಹಿವಾಟು ವೇಗ ಪಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು