News Karnataka Kannada
Wednesday, May 08 2024
ಮಂಗಳೂರು

ಇನ್ಸ್ಟಾಗ್ರಾಮ್ ಗೆಳತಿ ಕರೆದಳೆಂದು ಹೋದ ಯುವಕನ ಮೇಲೆ ಹಲ್ಲೆ: ನಾಲ್ವರ ಬಂಧನ

Four arrested for assaulting youth for allegedly calling his Instagram friend
Photo Credit : Twitter

ಮಂಗಳೂರು: ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವತಿ ಕರೆದಳೆಂದು ಹೋದ ಯುವಕನ ಮೇಲೆ ಹಲ್ಲೆ, ಕೊಲೆ ಯತ್ನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಉತ್ತರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕದ್ರಿ ಮಲ್ಲಿಕಟ್ಟೆ ನಿವಾಸಿ ಮೊಹಮ್ಮದ್ ತುಫೈಲ್ (20), ನೀರುಮಾರ್ಗ ನಿವಾಸಿ ಮೊಹಮ್ಮದ್ ಅಫ್ರಿದ್ (19), ಮಕ್ಸುದ್ ಸಾಗ್ (21), ಬೋಳಾರ ಮುಳಿಹಿತ್ಲು ನಿವಾಸಿ ಅಬ್ದುಲ್ ಸತ್ತಾರ್ (19) ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ
ಜೂನ್ 16ರಂದು ರಾತ್ರಿ 9.45ರ ಸಮಯಕ್ಕೆ ಮಂಗಳೂರಿನ ಅಲೋಶಿಯಸ್ ಕಾಲೇಜು ಬಳಿ ಕಿನ್ನಿಗೋಳಿ ಏಳಿಂಜೆ ನಿವಾಸಿ ಪ್ರಿಯಾ ಪಿಂಟೋ ಎಂಬಾಕೆಯು ಇನ್ಸ್ಟಾಗ್ರಾಮ್‌ನಲ್ಲಿ ನಿದೀಶ್ ಎಂಬಾತನನ್ನು ಸಂಪರ್ಕ ಮಾಡಿ ಮಾತನಾಡಲು ಬರುವಂತೆ ತಿಳಿಸಿದ್ದಾಳೆ. ನಿದೀಶ್ ತನ್ನಿಬ್ಬರು ಸ್ನೇಹಿತರೊಂದಿಗೆ ಸ್ಥಳಕ್ಕೆ ಬಂದಾಗ ಕಾರಿನಲ್ಲಿ ಬಂದ ಪ್ರಿಯಾ ಮತ್ತು ಆಕೆಯ ಜತೆಯಲ್ಲಿದ್ದ ನಾಲ್ವರು ಆರೋಪಿಗಳು ನಿದೀಶ್ ಮತ್ತು ಸ್ನೇಹಿತರ ಜತೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ನಾಲ್ವರು ಆರೋಪಿಗಳು ನಿದೀಶ್‌ನಿಗೆ ಹೊಡೆದು, ಎದೆಯ ಎಡಭಾಗಕ್ಕೆ ಚೂರಿಯಿಂದ ಇರಿದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ನಿದೀಶ್‌ನ ಸ್ನೇಹಿತರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ನಿದೀಶ್ ಸ್ನೇಹಿತ ನೀಲೆಶ್ ಎಂಬಾತ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಶುಕ್ರವಾರ ಸಂಜೆ ನಗರದ ಕುಡುಪು ಬೈತುರ್ಲಿ ಪಕ್ಕದ ಫ್ಲ್ಯಾಟ್‌ನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು