News Karnataka Kannada
Sunday, April 28 2024
ಮಂಗಳೂರು

ಅದ್ದೂರಿಯಾಗಿ ಸಂಪನ್ನಗೊಂಡ ಮಂಗಳೂರು ದಸರಾ ಮೆರವಣಿಗೆ

Mangaluru Dasara procession concludes
Photo Credit : News Kannada

ಮಂಗಳೂರು: ಮಂಗಳೂರು ದಸರಾ ಮೆರವಣಿಗೆ ಕಳೆದ ದಿನ(ಅ.24) ಅದ್ದೂರಿಯಾಗಿ ಆರಂಭಗೊಂಡು, ಸಂಪನ್ನಗೊಂಡಿದೆ. ದಸರಾ ಮಹೋತ್ಸವ ನಡೆಯುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಸಂಜೆ ಸುಮಾರು 4 ಗಂಟೆಗೆ ದಸರಾ ಮೆರವಣಿಗೆ ಆರಂಭಗೊಂಡಿತು.

ವಿಘ್ನವಿನಾಶಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ಬೃಹತ್ ಶೋಭಾಯಾತ್ರೆ ಕೇಂದ್ರದ ಮಾಜಿ ಸಚಿವ ದಸರಾ ಮಹೋತ್ಸವದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆಯಿತು.

ಒಂದು ಸಾವಿರ ಆಕರ್ಷಕ ಕೇರಳಾ ಕೊಡೆಗಳು, ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‌ಗಳು, ಸುಮಾರು 40 ಜಾನಪದ ಕುಣಿತಗಳ ತಂಡ, ಕೇರಳಾ ಚೆಂಡೆವಾದನ, ಕೊಂಬು ಕಹಳೆ, ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 60ಕ್ಕೂ ಹೆಚ್ಚು ಸ್ಥಬ್ದ ಚಿತ್ರಗಳು ಈ ದಸರಾ ಮೆವರಣಿಗೆಗೆ ಮೆರಗು ನೀಡಿತು. ನಗರದ ಸುಮಾರು 7 ಕಿಲೋ ಮೀಟರ್ ದಾರಿಯಲ್ಲಿ ಸಾಗುವ ಈ ಮೆರವಣಿಗೆ ನಾಳೆ ಮುಂಜಾನೆ ಸಮಾಪನಗೊಂಡಿದೆ.

ಕುದ್ರೋಳಿ ಕ್ಷೇತ್ರ ಪುಷ್ಕರಣಿಯಲ್ಲಿ ಗಣಪತಿ,ಆದಿಶಕ್ತಿ,ಶಾರದೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ದೇಶ ವಿದೇಶಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು