News Karnataka Kannada
Sunday, May 05 2024
ಮಂಗಳೂರು

ಮಂಗಳೂರು: ಮತ್ತೆ ತಿರುಗುತ್ತಿದೆ ಕ್ಲಾಕ್ ಟವರ್ ಗಡಿಯಾರ

Clock tower clock turns again
Photo Credit : News Kannada

ಮಂಗಳೂರು: ವಿದ್ಯುತ್ ಬಿಲ್ ಪಾವತಿಯಾಗದೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡು ನಿಂತು ಹೋಗಿದ್ದ ಕ್ಲಾಕ್ ಟವರ್ ಗಡಿಯಾರ ಮತ್ತೆ ಚಾಲೂ ಆಗಿದೆ , ಮೆಸ್ಕಾಂ ಅಧಿಕಾರಿಗಳು ಮತ್ತೆ ವಿದ್ಯುತ್ ಪೂರೈಕೆ ಮಾಡಿದ್ದು ಇದೀಗ ಕ್ಲಾಕ್ ಟವರ್ ಗಡಿಯಾರ ಮತ್ತೆ ಟಿಕ್ ಟಿಕ್ ಸದ್ದು ಮಾಡುತ್ತಿದೆ.

ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಹಂಪನಕಟ್ಟೆಯಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕ್ಲಾಕ್ ಟವರ್ ಗೆ ಕೆಲ ವರ್ಷಗಳ ಹಿಂದೆ ಗಡಿಯಾರ ಅಳವಡಿಸಲಾಗಿತ್ತು ಕ್ಲಾಕ್ ಟವರ್ ಉದ್ಘಾಟನೆಗೊಳ್ಳದಿದ್ದರೂ ಗಡಿಯಾರ ಚಾಲೂ ಆಗುತ್ತಿತ್ತು. ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಂದಿಗೆ ಮತ್ತು ಹೊಸದಾಗಿ ಮಂಗಳೂರು ಪ್ರವೇಶಿಸುವವರಿಗೆ ಈ ಗಡಿಯಾರ ಗೋಪುರ ಆಕರ್ಷಣೆಯಾಗಿತ್ತು. ವಿದ್ಯುತ್ ಪೂರೈಕೆಯ ಮೂಲಕ ಚಾಲೂ ಆಗುವ ಗಡಿಯಾರ ಇದಾಗಿದ್ದು ಸ್ಮಾರ್ಟ್ ಸಿಟಿ ಕಳೆದ ಕೆಲ ತಿಂಗಳನಿಂದ ಮೆಸ್ಕಾಂ ವಿದ್ಯುತ್ ಶುಲ್ಕ ಕಟ್ಟಿರಲಿಲ್ಲ ಇದೇ ಕಾರಣಕ್ಕೆ ಮೆಸ್ಕಾಂ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿತ್ತು . ಇದೀಗ ಕ್ಲಾಕ್ ಟವರ್ ಗಡಿಯಾರಕ್ಕೆ ಮತ್ತೆ ವಿದ್ಯುತ್ ಪೂರೈಕೆ ಆರಂಭಗೊಂಡಿದ್ದು ನಿಂತು ಹೋಗಿದ್ದ ಗಡಿಯಾರದ ಮುಳ್ಳುಗಳು ಮತ್ತೆ ಚಾಲೂ ಆಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು