ಮಂಗಳೂರು: ಪ್ರಯಾಣಿಕರ ದಟ್ಟಣೆಯ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್ ಹಾಗೂ ಮುಂಬೈಯ ಲೋಕಮಾನ್ಯ ತಿಲಕ್ ನಡುವೆ ಶನಿವಾರ ಏಕಮುಖ ಸೂಪರ್ಫಾಸ್ಟ್ ವಿಶೇಷ ರೈಲು ಸಂಚರಿಸಲಿದೆ.
ರೈಲು ನಂ.06007 ಮಂಗಳೂರು ಜಂಕ್ಷನ್- ಲೋಕಮಾನ್ಯ ತಿಲಕ್ ನಿಲ್ದಾಣ ನಡುವೆ ಏಕಮುಖ ಸೂಪರ್ಫಾಸ್ಟ್ ವಿಶೇಷ ರೈಲು ಎ.8ರ ಶನಿವಾರ ಸಂಜೆ 6:10ಕ್ಕೆ ಮಂಗಳೂರು ಜಂಕ್ಷನ್ನಿಂದ ಪ್ರಯಾಣ ಪ್ರಾರಂಭಿಸಲಿದ್ದು, ಮರುದಿನ ಅಪರಾಹ್ನ 1:15ಕ್ಕೆ ಮುಂಬೈ ಲೋಕಮಾನ್ಯ ತಿಲಕ್ ನಿಲ್ದಾಣ ತಲುಪಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಈ ರೈಲಿಗೆ ಸುರತ್ಕಲ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ್, ಮುರ್ಡೇಶ್ವರ, ಕುಮಟಾ, ಕಾರವಾರ, ಕಣಕೋಣಾ, ಮಡಗಾಂವ್ ಜಂಕ್ಷನ್, ಕರ್ಮಾಲಿ, ತೀವಿಂ, ಕುಡಾಳ್, ಕಂಕಾವಳಿ, ರತ್ನಗಿರಿ, ಸಂಗಮೇಶ್ವರ ರೋಡ್, ಸರ್ವಾಡ, ಚಿಪ್ಪುಣ್, ಖೇಡ್, ವೀರ್, ರೋಹಾ ಪನ್ವೇಲ್ ಹಾಗೂ ಥಾಣೆ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಈ ವಿಶೇಷ ರೈಲು 19 ಬೋಗಿಗಳೊಂದಿಗೆ ಸಂಚರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.