News Karnataka Kannada
Thursday, May 02 2024
ಮಂಗಳೂರು

ಜ.5ರಿಂದ ಮಡಗಾವ್ ಮಂಗಳೂರು ಮೆಮೋ ರೈಲು ಓಡಾಟ ಪ್ರಾರಂಭ

Madgaon-Mangaluru memo train to start running from January 5
Photo Credit : News Kannada

ಮಂಗಳೂರು: ಕೊಂಕಣ ರೈಲ್ವೆ ಮಾರ್ಗದಲ್ಲಿ ಮಡಗಾವ್ ಮಂಗಳೂರು ಮೆಮೋ ರೈಲು ಓಡಾಟ ಜನವರಿ 5 ರಿಂದ ಪ್ರಾರಂಭವಾಗಿದ್ದು ಈ ಹಿಂದೆ ಸಂಚರಿಸುತ್ತಿದ್ದ ಡೀಸೆಲ್ ಮಲ್ಟಿಪಲ್ ಯೂನಿಟ್ ಡೆಮೋ ರೈಲು ಕೋವಿಡ್ ಕಾರಣ ಸ್ಥಗಿತವಾಗಿತ್ತು. ಮಾರ್ಗವು ಸಂಪೂರ್ಣ ವಿದ್ಯುತ್ ಕರಣಗೊಂಡ ಬಳಿಕ ಮೇನ್ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟೆ ಓಡಾಟ ಪ್ರಾರಂಭಿಸುವಂತೆ ಪ್ರಯಾಣಿಕರ ಒತ್ತಾಯಿಸಿದರು , ಕಾರವಾರದಿಂದ ಮಂಗಳೂರು ಉಡುಪಿ ಆಸ್ಪತ್ರೆಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ ಎಂಬುದು ಜನರ ಒತ್ತಾಯವಾಗಿತ್ತು

.ಈಗ ಜನವರಿ 5 ರಿಂದ ರೈಲು ಸಂಖ್ಯೆ 10107 ರೈಲು ಪ್ರತಿ ಸೋಮವಾರದಿಂದ ಶನಿವಾರದವರೆಗೆ ಆರು ದಿನ ಬೆಳಿಗ್ಗೆ ೫.೧೫ ಮಡಗಾವ್ ಜಂಕ್ಷನ್ ಬಿಟ್ಟು ಮಂಗಳೂರು ಸೆಂಟ್ರಲ್ ತಲುಪಲಿದೆ ರೈಲು ಸಂಖ್ಯೆ 101 08 ಸೋಮವಾರದಿಂದ ಶನಿವಾರದವರೆಗೆ ಆರು ದಿನ ಮಧ್ಯಾಹ್ನ 2.45 ಕ್ಕೆ ಮಂಗಳೂರು ಸೆಂಟ್ರಲ್ ಬಿಟ್ಟು ರಾತ್ರಿ ೧೦ ಗಂಟೆಗೆ ಮಡಗಾವ್ ತಲುಪಲಿದೆ .ಭಾನುವಾರ ಈ ರೈಲಿನ ಸಂಚಾರ ಇರುವುದಿಲ್ಲ

08 ಕಾರ್ ಮೆಮೊ ಕೋಚ್ ಗಳನ್ನು ಈ ರೈಲು ಹೊಂದಿದ್ದು ಕಾಣಕೋಣ ,ಅಸ್ನೋಟಿ , ಕಾರವಾರ , ಅಂಕೋಲಾ , ಗೋಕರ್ಣ, ಕುಮುಟಾ, ಹೊನ್ನಾವರ ,ಮಂಕಿ ,ಮುರುಡೇಶ್ವರ ,ಭಟ್ಕಳ , ಮೂಕಾಂಬಿಕಾ ರೋಡು , ಬೈಂದೂರು, ಸೇನಾಪುರ ,ಕುಂದಾಪುರ, ಬಾರ್ಕೂರು ,ಉಡುಪಿ ,ಮುಲ್ಕಿ ,ಸುರತ್ಕಲ್ ,ನಿಲ್ದಾಣಗಳಲ್ಲಿ ಈ ರೈಲು ನಿಲ್ಲಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು