News Karnataka Kannada
Tuesday, May 07 2024
ಮಂಗಳೂರು

ಮಂಗಳೂರು: ಕೊಂಕಣ ರೈಲ್ವೆ ಮಾರ್ಗದಲ್ಲಿ ಏಳು ತಿಂಗಳ ಬಳಿಕ ಸಂಚಾರ ಪ್ರಾರಂಭ

Railway
Photo Credit : News Kannada

ಮಂಗಳೂರು: ಸಂಪೂರ್ಣವಾಗಿ ವಿದ್ಯುದೀಕರಣಗೊಂಡ ಕೊಂಕಣ ರೈಲ್ವೆ ಮಾರ್ಗದಲ್ಲಿ ಏಳು ತಿಂಗಳ ಬಳಿಕ ಶೇ.99 ರೈಲು ಗಾಡಿಗಳು ಇಲೆಕ್ನಿಕ್ ಲೋಕೋಮೊಟಿವ್ ಮೂಲಕ ಸಂಚಾರ ಪ್ರಾರಂಭಿಸಲಿವೆ.

ಇನ್ನೆರಡು ದಿನದಲ್ಲಿ ಬೆಂಗಳೂರು-ಕಾರವಾರ ಹೊರತುಪಡಿಸಿ ಉಳಿದೆಲ್ಲ ರೈಲುಗಳೂ ವಿದ್ಯುತ್ ಚಾಲಿತವಾದಂತಾಗಿದೆ. ಈ ಮಾರ್ಗದಲ್ಲಿ ನಿತ್ಯ ಓಡಾಡುವ 50 ರಿಂದ 60 ರೈಲುಗಳಲ್ಲಿ ಎಲ್ಲ ಗೂಡ್ಸ್ ಗಾಡಿಗಳು ಇಲೆಕ್ನಿಕ್ ಇಂಜಿನ್‌ನಲ್ಲಿ ಓಡುತ್ತಿವೆ. ಹೆಚ್ಚಿನ ಪ್ರಯಾಣಿಕರ ರೈಲುಗಳೂ ವಿದ್ಯುತ್ ಚಾಲಿತವಾಗಿದ್ದು, ಫೆ. 12 ರಿಂದ ಬಾಕಿ ಉಳಿದ 12 ದೂರಗಾಮಿ ರೈಲುಗಳೂ ಇಲೆಕ್ನಿಕ್ ಲೋಕೋಮೋಟಿವ್ ಮೂಲಕವೇ ಸಂಚಾರ ಪ್ರಾರಂಭಿಸಲಿವೆ ಎಂದು ಕೊಂಕಣ ರೈಲ್ವೆ ನಿಗಮದ ಪ್ರಾದೇಶಿಕ ಪ್ರಬಂಧಕ (ಆರ್‌ಆರ್‌ಎಂ) ಬಿ.ಬಿ.ನಿಕ್ಕಂ ಮಾದ್ಯಮಕ್ಕೆ ತಿಳಿಸಿದ್ದಾರೆ.

1287 ಕೋಟಿ ರೂ. ವೆಚ್ಚದಲ್ಲಿ 741 ಕಿಮೀ ಕೊಂಕಣ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ ಕಳೆದ ಮಾರ್ಚ್ ತಿಂಗಳಲ್ಲೇ ಪೂರ್ಣಗೊಂಡಿತ್ತು. ವಿದ್ಯುದೀಕೃತ ಕಾಮಗಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 19 ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಿದ್ದರು. ಆದರೆ, ವಿದ್ಯುತ್ ಚಾಲಿತ ಇಂಜಿನ್‌ಗಳ ಕೊರತೆ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಇದುವರೆಗೂ ಕೆಲವು ಡೀಸೆಲ್ ಇಂಜಿನ್ ಚಾಲಿತ ರೈಲುಗಳೇ ಮುಂದುವರಿದಿದ್ದವು. ಹಂತ, ಹಂತವಾಗಿ ಇಲೆಕ್ನಿಕ್ ಲೋಕೋಗೆ ಪರಿವರ್ತನೆ ನಡೆದಿದ್ದು, ಮೊದಲು ಮಂಗಳೂರು-ಕಾರವಾರ ನಡುವೆ ಕೆಲವು ರೈಲು ಗಾಡಿಗಳನ್ನು ಲೋಕೋ ಇಂಜಿನ್ ಬಳಸಿ ಓಡಿಸಲಾಯಿತು.

ಡೀಸೆಲ್ ಇಂಜಿನ್‌ನಲ್ಲಿ ಓಡುವೆ ಘಟ್ಟದ ರೈಲುಗಳು:
ಕೇರಳದಿಂದ ಮುಂಬೈವರೆಗಿನ ಸಂಪೂರ್ಣ ಮಾರ್ಗ ವಿದ್ಯುದೀಕರಣವಾಗಿದೆ. ಆದರೆ, ಮಂಗಳೂರು ಬೆÀಗಳೂರು ಹಾಗೂ ಮಡಗಾಂವ- ತೀನ್ಯ ಘಾಟ್ ಮಾರ್ಗ ವಿದ್ಯುದೀಕರಣ ಪೂರ್ಣಗೊಂಡಿಲ್ಲ ಇದರಿಂದ ಕಾರವಾರ-ಬೆಂಗಳೂರು ನಡುವೆ ಓಡಾಡುವ ಐದು ರೈಲುಗಳಿಗೆ ಇದುವರೆಗೂ ಡೀಸೆಲ್ ಇಂಜಿನ್ ಬಳಸಲಾಗುತ್ತಿದೆ. ಆ ಎರಡು ಮಾರ್ಗಗಳ ವಿದ್ಯುದೀಕರಣ ಪೂರ್ಣವಾಗುವವರೆಗೆ ಡೀಸಲ್ ಇಂಜಿನ್ ಬಳಕೆ ಅನಿವಾರ್ಯ ಎನ್ನುತ್ತಾರೆ ಕೊಂಕಣ ರೈಲ್ವೆ ಅಧಿಕಾರಿಗಳು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು