News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಜುವೆಲ್ಯರಿ ಸಿಬ್ಬಂದಿ ಹತ್ಯೆ ಪ್ರಕರಣ – ಆರೋಪಿಗಾಗಿ 7 ತಂಡಗಳಿಂದ ಶೋಧ

Mangaluru: 7 teams launch search for accused in jewellery staff murder case
Photo Credit : News Kannada

ಮಂಗಳೂರು: ಹಂಪನಕಟ್ಟೆಯಲ್ಲಿರುವ ಜುವೆಲ್ಯರಿ ಅಂಗಡಿಯೊಂದರಲ್ಲಿ ಸಿಬ್ಬಂದಿ ರಾಘವೇಂದ್ರ ಆಚಾರ್ಯ (55) ಅವರನ್ನು ಹತ್ಯೆ ಮಾಡಿದ ಆರೋಪಿಯ ಪತ್ತೆಗೆ 7 ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ.

ಕೊಲೆ ಮಾಡಿರುವ ಆರೋಪಿಯ ಚಹರೆ ಸಿಸಿ ಕೆಮರಾದಲ್ಲಿ ದಾಖಲಾಗಿದ್ದರೂ ಆತ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗಿದ್ದು, ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಇನ್ನು ಆರೋಪಿಯು ಜುವೆಲ್ಯರಿಯಿಂದ ಹೊರಗೆ ಬಂದ ಬಳಿಕ ಎರಡೆರಡು ರಿಕ್ಷಾಗಳಲ್ಲಿ ಹೋಗುವ ಮೂಲಕ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಆತ ಮೊದಲು ಹಂಪನಕಟ್ಟೆಯಿಂದ ವಲೆ ನ್ಸಿಯಾದವರೆಗೆ ಒಂದು ರಿಕ್ಷಾದಲ್ಲಿ ಸಾಗಿ, ಆ ಬಳಿಕ ಅಲ್ಲಿ ಇಳಿಯುತ್ತಾನೆ. ಮತ್ತೊಂದು ರಿಕ್ಷಾವನ್ನೇರಿ ಜೆಪ್ಪು ವರೆಗೂ ಹೋಗಿದ್ದಾನೆ. ಅಲ್ಲಿ ರಿಕ್ಷಾದಿಂದ ಇಳಿದು ರೈಲ್ವೇ ಹಳಿಯತ್ತ ತೆರಳಿದ್ದು, ಬಳಿಕ ಎಲ್ಲಿಗೆ ತೆರಲಿದ್ದಾನೆ ಎಂಬುದನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು