News Karnataka Kannada
Tuesday, April 30 2024
ಮಂಗಳೂರು

ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ; ಪ್ರತಿದಿನ ಸಾಂಸ್ಕೃತಿಕ ವೈಭವ

New Project (41)
Photo Credit : News Kannada

ಬೆಳ್ತಂಗಡಿ: ದೇಶವಿದೇಶಗಳ ಜನರನ್ನೂ ತನ್ನತ್ತ ಆಕರ್ಷಿಸುವ ಕ್ಷೇತ್ರವೆಂದೇ ಹೇಳಲಾಗುವ ಕರ್ನಾಟಕದ ಪವಿತ್ರ ಯಾತ್ರಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 8 ರಿಂದ 12ರವರೆಗೆ ನಡೆಯಲಿವೆ. ಅಲ್ಲದೆ 91ನೇ ವರ್ಷದ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, 12ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಡಿ.8ರ ಬೆಳಗ್ಗೆ 10.30ಕ್ಕೆ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ. ವಸ್ತುಪ್ರದರ್ಶನ ಉದ್ಘಾಟಿಸುವರು. ಸಂಜೆ 6.30ರಿಂದ 7.30ರವರೆಗೆ ಧರ್ಮಸ್ಥಳದ ಪ್ರಸೀದಾ ರಾವ್ ಮತ್ತು ಬಳಗದವರಿಂದ ಭಕ್ತಿಗಾನಾಮೃತ, ರಾತ್ರಿ 7.30ರಿಂದ ಶಿವಮೊಗ್ಗದ ಶ್ರೀಕಾಂತ ಮತ್ತು ತಂಡದವರಿಂದ ಸುಗಮ ಸಂಗೀತ, 8.30ರಿಂದ ಶ್ರೀಕಾಂತ ಮತ್ತು ತಂಡದವರಿಂದ ಕೂಚುಪುಡಿ ನೃತ್ಯ, 9.30ರಿಂದ 10.30ರವರೆಗೆ ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಸದಸ್ಯರಿಂದ ಯಕ್ಷಗಾನ ನಡೆಯಲಿದೆ. ಡಿ.9ರ ಸಂಜೆ 6ರಿಂದ ಯುವ ಕಲಾಭಾರತಿ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ 7ರಿಂದ 8ರವರೆಗೆ ಅಘರ್  ಬೆಂಗಳೂರು ನಿರ್ದೇಶನದಲ್ಲಿ ಭರತನಾಟ್ಯ, 8ರಿಂದ 9ರವರೆಗೆ ಮಂಗಳೂರು ಕೊಟ್ಟಾರದ ಭರತಾಂಜಲಿ ತಂಡದಿಂದ ಭರತನಾಟ್ಯ, 9ರಿಂದ 10ರವರೆಗೆ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಅವರಿಂದ ನೃತ್ಯ ಸಿಂಚನ ನಡೆಯಲಿದೆ.

ಡಿ.10ರ ರಾತ್ರಿ 7ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿ, ಗಾನನೃತ್ಯ ವೈವಿಧ್ಯ ಗುರುಕಿರಣ್ ನೈಟ್ ನಡೆಯಲಿದ್ದು, ಸಂಗೀತ ನಿರ್ದೇಶಕ ಗುರುಕಿರಣ್, ಅನುರಾಧಾ ಭಟ್, ಇಂದು ನಾಗರಾಜ್, ಸಂತೋಷ್ ವೆಂಕಿ ಮೊದಲಾದ ಗಾಯಕರು ಭಾಗವಹಿಸಲಿದ್ದಾರೆ. ಸಂಜೆ 5ರಿಂದ 5.45ರವರೆಗೆ ಡಾ.ಶ್ರುತಿ ಕಾಂತಾಜೆ ಅವರಿಂದ ಭಕ್ತಿ ಸಂಗೀತ, ಸಂಜೆ 5.45ರಿಂದ 6.45ರವರೆಗೆ ಬೆಂಗಳೂರಿನ ಡಾ.ರಕ್ಷಾ ಕಾರ್ತಿಕ್ ಮತ್ತು ತಂಡದಿಂದ ಭರತನಾಟ್ಯ, 6.45ರಿಂದ 7.45ರವರೆಗೆ ಬೆಂಗಳೂರಿನ ಕನ್ನಡ ಕಲಾಲಯ ಸಾಂಸ್ಕೃತಿಕ ವೇದಿಕೆಯಿಂದ ‘ಶಿವನಾದ’ ಕಾರ್ಯಕ್ರಮ ನಡೆಯಲಿದೆ.

ಡಿ.11ರ ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಸ್ಥಾಪಕ ಡಾ.ಗುರುರಾಜ ಕರ್ಜಗಿ ಉದ್ಘಾಟಿಸುವರು. ಸಿದ್ಧಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮಿ ಅಧ್ಯಕ್ಷತೆ ವಹಿಸುವರು. ಸುಪ್ರೀಂಕೋರ್ಟ್ ವಕೀಲ, ವಾಗ್ಮಿ ಡಾ.ಎಂ.ಆರ್.ವೆಂಕಟೇಶ್, ಬೆಂಗಳೂರು ವಿಭು ಅಕಾಡೆಮಿ ಸಂಸ್ಥಾಪಕ ಮುಖ್ಯಸ್ಥೆ ಡಾ.ವಿ.ಬಿ.ಆರತಿ, ವಾಗ್ಮಿ ಮಹಮ್ಮದ್ ಗೌಸ ರ.ಹವಾಲ್ದಾರ ವಿಜಯಪುರ ಉಪನ್ಯಾಸ ನೀಡುವರು.

ರಾತ್ರಿ 8.30ರಿಂದ ಸಾಂಸ್ಕೃತಿಕ ಕಾರ್ಯಕ್ರದಲ್ಲಿ ಅನುರಾಧಾ ವಿಕ್ರಾಂತ್ ಮತ್ತು ದೃಷ್ಟಿ ನೃತ್ಯ ಮೇಳ ನೃತ್ಯಸಮರ್ಪಣಂ ನಡೆಯಲಿದೆ. ಸಂಜೆ 5.30ರಿಂದ ಅನಂತನಾರಾಯಣ ಭಾಗವತರ್ ಕುಂಭಕೋಣಂ ಅವರಿಂದ ನಾಮಸಂಕೀರ್ತನಂ, 6.30ರಿಂದ 7.30ರವರೆಗೆ ಪದಯಾನ ತಂಡದವರಿಂದ ಭರತನಾಟ್ಯ, 7.30ರಿಂದ 8.30ರವರೆಗೆ ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ, 8.30ರಿಂದ 9.30ರವರೆಗೆ ಪೆರ್ಲ ಶಿವ ನಾಟ್ಯಾಂಜಲಿ ನೃತ್ಯ ವಿದ್ಯಾಲಯ ಕೇಂದ್ರದಿಂದ ನಾಟ್ಯಮಂಜರಿ, 9.30ರಿಂದ 11ರವರೆಗೆ ಬೆಂಗಳೂರಿನ ಶ್ರೀಕೃಷ್ಣ ಕಲಾಲಯ ತಂಡದಿಂದ ಭರತನಾಟ್ಯ ನಡೆಯಲಿದೆ.

ಡಿ.12ರ ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಉದ್ಘಾಟಿಸುವರು. ವಿದ್ವಾಂಸ ಮತ್ತು ಗಮಕಿ ಡಾ.ಎ.ವಿ.ಪ್ರಸನ್ನ ಬೆಂಗಳೂರು ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಧ್ಯಾಪಕ ಮತ್ತು ಬರಹಗಾರ ಶ್ರೀಪಾದ ಶೆಟ್ಟಿ ಹೊನ್ನಾವರ, ರಂಗಕರ್ವಿು ಪ್ರಕಾಶ್ ಬೆಳವಾಡಿ, ಲೇಖಕ, ಪ್ರಾಧ್ಯಾಪಕ ಡಾ.ಅಜಕ್ಕಳ ಗಿರೀಶ್ ಭಟ್ ಬಂಟ್ವಾಳ ಉಪನ್ಯಾಸ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ 8.30ರಿಂದ ವಿದುಷಿ ಅರ್ಚನಾ ಪುಣ್ಯೇಷ್ ಮತ್ತು ವಿದ್ಯಾರ್ಥಿಗಳಿಂದ ಶಿವಾರ್ಪಣಂ ಮತ್ತು ಹರಿವಿಲಾಸ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ರಿಂದ 6.30ರವರೆಗೆ ಮಂಗಳೂರಿನ ಸವಿಲಾವನಂ ನೃತ್ಯ ಕಲಾಕ್ಷೇತ್ರದಿಂದ ನೃತ್ಯ, 6.30ರಿಂದ 7.30ರವರೆಗೆ ಮೈಸೂರು ಶ್ರೀ ದುರ್ಗಾ ನೃತ್ಯ ಅಕಾಡೆಮಿಯಿಂದ ನೃತ್ಯಾರ್ಪಣಂ, 7.30ರಿಂದ 8.15ರವರೆಗೆ ಧಾರವಾಡದ ಕವನಾ ವೆಂ.ಹೆಗಡೆ ಅವರಿಂದ ಕಥಕ್ ನೃತ್ಯ, 8.15ರಿಂದ 9.15ರವರೆಗೆ ಸರಸ್ವತಿ ನಾಟ್ಯಾಲಯದಿಂದ ಶಿವ ರೂಪಕ, 9.15ರಿಂದ 11.30ರವರೆಗೆ ಪುತ್ತೂರಿನ ಪುನೀತ್ ಆರ್ಕೆಸ್ಟ್ರಾದಿಂದ ಸಂಗೀತ ರಸಮಂಜರಿ ನಡೆಯಲಿದೆ.

ಧಾರ್ವಿುಕ ಕಾರ್ಯಕ್ರಮದ ಪ್ರಯುಕ್ತ ಡಿ.8ರ ರಾತ್ರಿ 9ರಿಂದ ಹೊಸಕಟ್ಟೆ ಉತ್ಸವ, 9ರಂದು ಕೆರೆಕಟ್ಟೆ ಉತ್ಸವ, 10ರಂದು ಲಲಿತೋದ್ಯಾನ ಉತ್ಸವ, 11ರಂದು ಕಂಚಿಮಾರುಕಟ್ಟೆ ಉತ್ಸವ, 12ರಂದು ಗೌರಿಮಾರುಕಟ್ಟೆ ಉತ್ಸವ, 13ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.

ಇದರ ಜೊತೆಗೆ ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕೂಡ ಕಲ್ಪಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು