News Karnataka Kannada
Tuesday, May 07 2024
ಮಂಗಳೂರು

ಉಳ್ಳಾಲ: ಮುನ್ನೂರು ಗ್ರಾ.ಪಂ.ನ ಕಮರ್ಷಿಯಲ್ ಕಾಂಪ್ಲೆಕ್ಸ್ ಕಾಮಗಾರಿಗೆ ಶಿಲನ್ಯಾಸ

Kuttaru Junction: Foundation stone laid for commercial complex to be constructed under Rs 2.5 crore grant
Photo Credit : News Kannada

ಉಳ್ಳಾಲ: ಮುನ್ನೂರು ಗ್ರಾ.ಪಂ ವ್ಯಾಪ್ತಿಗೆ ಬರುವ ಕುತ್ತಾರು ಜಂಕ್ಷನ್ನ, ತೊಕ್ಕೊಟ್ಟು ನಂತರ ಅತ್ಯಂತ ಅಭಿವೃದ್ಧಿಯ ಜಂಕ್ಷನ್ ಆಗಿ ಬದಲಾವಣೆಯಾಗಿದೆ. ರೂ. 2.5 ಕೋಟಿ ಅನುದಾನದಡಿ ಸುಸಜ್ಜಿತ ಕಮರ್ಷಿಯಲ್ ಕಾಂಪ್ಲೆಕ್ಸ್ ಶೀಘ್ರವೇ ತಲೆ ಎತ್ತಿ ನಿಲ್ಲಲಿದೆ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು.

ಅವರು ಮುನ್ನೂರು ಗ್ರಾ.ಪಂ ವ್ಯಾಪ್ತಿಯ ಕುತ್ತಾರು ಜಂಕ್ಷನ್ನಿನ ಸರಕಾರಿ ಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ ಮುನ್ನೂರು ಗ್ರಾ.ಪಂ.ನ ಕಮರ್ಷಿಯಲ್ ಕಾಂಪ್ಲೆಕ್ಸ್ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.

ಈ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸಿ ಜಂಕ್ಷನ್ನಿನ ಅಭಿವೃದ್ಧಿಯನ್ನು ನಡೆಸಲಾಗುತ್ತಿದೆ.ಆಧುನಿಕ ತಂತ್ರಜ್ಞಾನಗಳನ್ನು ನೂತನ ಪಂಚಾಯಿತಿನ ಕಾಂಪ್ಲೆಕ್ಸ್ ಒಳಗೊಂಡಿರುತ್ತದೆ. ಈ ಮೂಲಕ ಗ್ರಾಮದ ಜನರಿಗೆ ಸಹಕಾರದ ಜೊತೆಗೆ ಪಂ.ಗೆ ಆದಾಯ ತರುವ ವ್ಯವಸ್ಥೆಯೂ ಆಗಲಿದೆ. ಗ್ರಾಮದ ಜನರ ಸೌಹಾರ್ದ, ಪ್ರೀತಿ, ವಿಶ್ವಾಸದಿಂದ ಅಭಿವೃದ್ಧಿ ಸಾಧ್ಯವಾಗಿದೆ. ಚರ್ಚ್, ಮಸೀದಿ ಧರ್ಮಗುರುಗಳ ಹಾಗೂ ದೇವಸ್ಥಾನ ಅರ್ಚಕರ ಪೂಜೆ ನೆರವೇರಿಸಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಅತಿ ಶೀಘ್ರದಲ್ಲಿ ನಿಟ್ಟೆ ಸಂಸ್ಥೆಯವರು ಕುತ್ತಾರು ಜಂಕ್ಷನ್ನಿನಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ, ರಿಕ್ಷಾ ತಂಗುದಾಣವನ್ನು ನಿರ್ಮಿಸಿ ಕೊಡಲಿದ್ದಾರೆ. ಎಲ್ಲಾ ವರ್ಗದವರಿಗೂ ಸಂತಸ ಇರಬೇಕು ಅನ್ನುವ ಉದ್ದೇಶದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಮಿನಿ ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳ ಗುರುತಿಸುವಿಕೆ ಮಾಡಲಾಗುತ್ತಿದ್ದು, ಮೀನುಗಾರಿಕೆ, ತರಕಾರಿ, ಹಣ್ಣುಹಂಪಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರುಗಳಾದ ಹಸನಬ್ಬ, ವನಿತಾ ಶೆಟ್ಟಿ, ಕವಿತಾ ಚಂದ್ರಕಲ, ಪುಷ್ಪ ಅಂಚನ್, ಕೇಶವ, ಮಹಾಬಲ ದಪ್ಪೆಲಿಮಾರ್, ನವೀನ್ ಡಿಸೋಜ, ಕಿರಣ್, ರೆಹನಾ ಭಾನು, ಮಾಜಿ ಅಧ್ಯಕ್ಷೆ ಐಸಮ್ಮ, ಮಾಜಿ ಸದಸ್ಯ ಉಸ್ಮಾನ್ ಫಯಾಜ್ ಎಂ, ಇಸ್ಮಾಯಿಲ್, ತಾ.ಪಂ.ಮಾಜಿ ಸದಸ್ಯೆ ವಿಲ್ಮಾ , ವೆಂಕಪ್ಪ, ಜೀವನ್ ಪೆರಾವೊ ವಾಝಿ ಡಿಸೋಜ, ಗ್ರೇಸಿ ಡಿಸೋಜ, ಪ್ಲೇಸಿ ಡಿಸೋಜ, ಲಕ್ಷ್ಮಣ್ ನಾಯಕ್ , ಸುರೇಶ್ ಭಟ್ನಗರ್ , ಅಭಿವೃದ್ಧಿ ಅಧಿಕಾರಿ ರಾಜೀವ ನಾಯ್ಕ್, ಕಾರ್ಯ ದರ್ಶಿ ಶಾಂತಿ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು