News Karnataka Kannada
Tuesday, May 07 2024
ಮಂಗಳೂರು

ಮಂಗಳೂರು: ‘ಕೈಲಾಶ್’ ನಲ್ಲಿ ಗುಣನಾಥನ ಗೃಹಪ್ರವೇಶ

ಭಾರ್ಗವಿ ಬಿಲ್ಡರ್ಸ್
Photo Credit : News Kannada

ಮಂಗಳೂರು: ಭಾರ್ಗವಿ ಬಿಲ್ಡರ್ಸ್ ಅವರಿಂದ ಕೊಟ್ಟಾರದ ಮಾಲೆಮಾರ್ ಬಳಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ‘ಕೈಲಾಶ್’ ವಸತಿ ಸಮುಚ್ಚಯದಲ್ಲಿ ಗುಣನಾಥ-ಶಿಲ್ಪಾ ದಂಪತಿಯ ಮೋಕ್‌ಅಪ್  ಫ್ಲ್ಯಾಟ್‌ ಉದ್ಘಾಟನೆ ಶುಕ್ರವಾರ ನೆರವೇರಿತು.

ದುಬೈಯಲ್ಲಿದ್ದ ಗುಣನಾಥ್ ಊರಿಗೆ ಬಂದು ಮಂಗಳೂರಿನಲ್ಲಿ ಸ್ವಂತ ಮನೆ ಖರೀದಿಗೆ ಹುಡುಕಾಡಿ ಕೈಲಾಶ್ ವಸತಿ ಸಮುಚ್ಚಯದಲ್ಲಿ ಮನೆ ಬುಕಿಂಗ್ ಮಾಡಿದ್ದರು. ಈಗ ಮನೆ ಕಾಮಗಾರಿ ಪೂರ್ಣಗೊಂಡು ಸಾಂಪ್ರದಾಯಿಕ ರೀತಿಯಲ್ಲಿ ಪ್ರವೇಶ ಕಾರ್ಯಕ್ರಮ ನೆರವೇರಿದೆ.

ಕ್ರೆಡೈ ಮಂಗಳೂರು ಅಧ್ಯಕ್ಷ ಪುಷ್ಪರಾಜ್ ಜೈನ್ ಮುಖ್ಯ ಅತಿಥಿಯಾಗಿದ್ದರು. ಭಾರ್ಗವಿ ಬಿಲ್ಡರ್ಸ್‌ನ ಕೈಲಾಶ್ ವಸತಿ ಸಮುಚ್ಚಯದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದೆ. ಆದಷ್ಟು ಶೀಘ್ರದಲ್ಲಿ ಎಲ್ಲ ಮನೆಗಳು ಮಾರಾಟವಾಗಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್‌ನ ಅಧ್ಯಕ್ಷ ರವಿ ಶೆಟ್ಟಿ ಅತಿಥಿಯಾಗಿದ್ದರು. ಕೈಲಾಶ್ ವಸತಿ ಸಮುಚ್ಚಯದ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇನ್ನೂ ಬುಕ್ಕಿಂಗ್ ಮಾಡದವರು ಮನೆಗಳನ್ನು ಬುಕ್ಕಿಂಗ್ ಮಾಡಲು ಅವಕಾಶವಿದೆ. ಕೆಲವೇ ಮನೆಗಳು ಬಾಕಿ ಉಳಿದಿದ್ದು, ಈ ಸದುಪಯೋಗ ಪಡೆದುಕೊಳ್ಳಲು ಸುವರ್ಣಾವಕಾಶ ಎಂದರು.

ಗುಣನಾಥ್(ಅರವಿಂದ ಬೋಳಾರ್) ಮಾತನಾಡಿ, ಕೈಲಾಶ್‌ನಲ್ಲಿ ಸುಂದರ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಿ ಮನೆಗಳು ನಿರ್ಮಾಣವಾಗುತ್ತಿವೆ. ಇಲ್ಲಿ ನೆಲೆಸುವ ಎಲ್ಲರಿಗೂ ಶಾಂತಿ, ನೆಮ್ಮದಿ ಸಿಗುವುದರಲ್ಲಿ ಸಂಶಯವಿಲ್ಲ ಎಂದರು.

ಪ್ರೋಜೆಕ್ಟ್ ಹೆಡ್ ಗುರುದತ್ ಶೆಣೈ ಯೋಜನೆಯ ಹಾಗೂ ಗುಣನಾಥ್ ಅವರ ಮನೆಯ ಮಾಹಿತಿ ನೀಡಿದರು. ಶಿಲ್ಪಾ ಗುಣನಾಥ್(ಚೈತ್ರಾ ಶೆಟ್ಟಿ), ಭಾರ್ಗವಿ ಬಿಲ್ಡರ್ಸ್‌ನ ಮಾಲೀಕ ಭಾಸ್ಕರ್ ಗಡಿಯಾರ್, ಪಾಲುದಾರೆ ಭಾರ್ಗವಿ ಗಡಿಯಾರ್, ಪ್ರೋಜೆಕ್ಟ್ ಹೆಡ್‌ಗಳಾದ ಮಂಗಳದೀಪ್ ಹಾಗೂ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

 ಮಂಗಳೂರಲ್ಲೇ ಮೊದಲು:
ಭಾರ್ಗವಿ ಬಿಲ್ಡರ್ಸ್‌ನ ‘ಕೈಲಾಶ್’ ಅತ್ಯಾಧುನಿಕ ವ್ಯವಸ್ಥೆಯ ಅಪಾರ್ಟ್‌ಮೆಂಟ್‌ಗೆ ಕೊಟ್ಟಾರದಲ್ಲಿ 2021 ಫೆ.14ರಂದು ಶಿಲಾನ್ಯಾಸ ನಡೆದಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಅತ್ಯಾಧುನಿಕ ಗುಣಮಟ್ಟದ ಸೌಲಭ್ಯ ದೊರೆಯಲಿದೆ. ಇಂತಹ ಸೌಲಭ್ಯಗಳು ಮಂಗಳೂರು ನಗರದಲ್ಲಿ ಈ ಯೋಜನೆಯಲ್ಲಿ ಮೊದಲ ಬಾರಿಗೆ ಲಭಿಸುತ್ತಿದೆ. ರೂಫ್‌ಟಾಪ್‌ನಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣವಾಗುತ್ತಿದೆ. 15 ಮಹಡಿಗಳಲ್ಲಿ 131 ಅಪಾರ್ಟ್‌ಮೆಂಟ್‌ಗಳು ವಾಸ್ತು ಪ್ರಕಾರವಾಗಿ ನಿರ್ಮಾಣಗೊಳ್ಳುತ್ತಿದೆ. 2 ಬಿಎಚ್‌ಕೆ ಫ್ಲ್ಯಾಟ್‌ಗೆ 67 ಲಕ್ಷ ರೂ., 4 ಬಿಎಚ್‌ಕೆ ಡ್ಯುಪ್ಲೆಕ್ಸ್ ಫ್ಲ್ಯಾಟ್‌ಗೆ 1.80 ಕೋಟಿ ರೂ. ಮತ್ತು 3 ಬಿಎಚ್‌ಕೆ ಫ್ಲ್ಯಾಟ್‌ಗೆ 1.10 ಕೋಟಿ ರೂ. ನಿಗದಿಪಡಿಸಲಾಗಿದೆ.
ಅತ್ಯಾಧುನಿಕ ಸೌಲಭ್ಯಗಳು: ರೂಫ್‌ಟಾಪ್‌ನಲ್ಲಿ ಸ್ವಿಮ್ಮಿಂಗ್ ಪೂಲ್, ಮಿನಿ ಥಿಯೇಟರ್, ಹವಾನಿಯಂತ್ರಿತ ಜಿಮ್ನೇಶಿಯಂ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗೆ ವಿಶಾಲ ಪ್ರದೇಶ, ಮಕ್ಕಳಿಗೆ ಆಟದ ಪ್ರದೇಶ, ಗ್ರಂಥಾಲಯ, ಯೋಗ ಪೆವಿಲಿಯನ್, ವಿಸಿಟರ್ಸ್‌ ಲಾಬಿ, ಇಂಟರ್‌ಕಾಮ್ ಲಾಬಿ, ಸೋಲಾರ್ ಪ್ಯಾನೆಲ್ಸ್, ರೆಕ್ಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, 3 ಅಟೋಮ್ಯಾಟಿಕ್ ಎಲೆವೇಟರ್ಸ್‌, ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ ಮೊದಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಭಾರ್ಗವಿ ಬಿಲ್ಡರ್ಸ್‌ ಈಗಾಗಲೇ 5 ವಸತಿ ಸಮುಚ್ಚಯ ಹಾಗೂ 1 ವಾಣಿಜ್ಯ ಸಮುಚ್ಚಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಅಪಾರ್ಟ್‌ಮೆಂಟ್ ಬುಕ್ಕಿಂಗ್‌ಗಾಗಿ ಗ್ರಾಹಕರು ಕೊಟ್ಟಾರದಲ್ಲಿರುವ ಭಾರ್ಗವಿ ಬಿಲ್ಡರ್ಸ್ ಸಂಸ್ಥೆ ಕಚೇರಿ ಸಂಪರ್ಕಿಸಬಹುದು. ಮಾಹಿತಿಗೆ www.bhargavibuilders.com ಭೇಟಿ ನೀಡಬಹುದು ಅಥವಾ 9611730555/7090933900ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರವರ್ತಕರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು