ಮಂಗಳೂರು: ಕಾವೂರಿನ ಈಶಿಕ ಶೆಟ್ಟಿ ಹೊಸದಿಲ್ಲಿಯಲ್ಲಿ ನಡೆದʻಮಿಸ್ ಟೀನ್ ಗ್ಲೋಬಲ್ ವಲ್ಡ್ ಇಂಡಿಯಾ ಒಶಿಯಾನ್ʼ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ದೇಶದ ಒಟ್ಟು 65 ಮಂದಿ ಭಾಗಿಯಾಗಿದ್ದರು. ಅದರಲ್ಲಿ ಈಶಿಕಾ ಶೆಟ್ಟಿ ಕರ್ನಾಟಕದಿಂದ ಆಯ್ಕೆಯಾಗಿ ಪ್ರತಿನಿದಿಸಿದ್ದರು. ಇವರು 2023ರಲ್ಲಿ ʻಮಿಸ್ ಟೀನ್ ಮಂಗಳೂರುʼ ಹಾಗೂ ʻಮಿಸ್ ಟೀನ್ ಕರ್ನಾಟಕʼ ಆಗಿ ಆಯ್ಕೆಯಾಗಿದ್ದರು. ಇವರು ಅಲೋಶಿಯಸ್ನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಚಿಕ್ಕವಯಸ್ಸಿನಿಂದಲೆ ನಾಟಕ ಅಭಿನಯ ಮತ್ತು ಮಾಡೆಲಿಂಗ್ ನಲ್ಲಿ ಇವರಿಗೆ ಆಸಕ್ತಿ ಇತ್ತು. ಈಗ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.