ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ 1 ಕೋಟಿ ಅಧಿಕ ಮೌಲ್ಯದ ಮಾದಕ ವಸ್ತುವನ್ನು ನಾಶಗೊಳಿಸಲಾಯಿತು.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಫ್ತಿಯ 15 ಠಾಣೆಗಳಲ್ಲಿ ಒಟ್ಟು ಗಾಂಜಾ 580.860 ಕೇಜಿ ತೂಕದ 1 ಕೋಟಿ 16 ಲಕ್ಷದ 17 ಸಾವಿರದ 200 ರೂಪಾಯಿ, ಹೆರಾಯಿನ್ 25 ಗ್ರಾಂ 1 ಲಕ್ಷದ 37 ಸಾವಿರದ 500 ರೂಪಾಯಿ, ಎಂಡಿಎಂಎ 320 ಗ್ರಾಂ 11 ಲಕ್ಷದ 20 ಸಾವಿರ ಮೌಲ್ಯದ ಸೇರಿದಂತೆ ಒಟ್ಟು 1 ಕೋಟಿ 28 ಲಕ್ಷದ 74 ಸಾವಿರದ 700 ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ನಾಶ ಪಡಿಸಲಾಗಿದೆ.