News Karnataka Kannada
Monday, April 29 2024
ಮಂಗಳೂರು

ಬ್ಯಾಂಕ್ ಆಫ್ ಬರೋಡಾದಲ್ಲಿ ಭಾರತದ 77 ನೇ ಸ್ವಾತಂತ್ರ‍್ಯ ದಿನಾಚರಣೆ

India's 77th Independence Day at Bank of Baroda with multiple initiatives
Photo Credit : News Kannada

ಮಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್) ಭಾರತದ 77ನೇ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಿತು.

ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ  ದೇಬದತ್ತ ಚಂದ್ ಅವರು ಮಾತನಾಡಿ, “ನಾವು ಭಾರತದ 77ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.  ಬ್ಯಾಂಕ್ ಆಫ್  ಬರೋಡಾದ ರಾಷ್ಟ್ರ ಬದ್ಧತೆಯಲ್ಲಿ ಮುಂಚೂಣಿಯಲ್ಲಿದೆ. ದೇಶದ ಆರ್ಥಿಕ, ಸಾಮಾಜಿಕ ಮತ್ತು ಡಿಜಿಟಲ್ ಇಂಡಿಯಾವನ್ನು ಬೆಂಬಲಿಸುವ ಒಂದು ದೃಢವಾದ ಪಾಲುದಾರವಾಗಿದೆ. ನಾವು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದನ್ನು ಮುಂದುವರಿಸುತ್ತಿದ್ದೇವೆ ಎಂದು ತಿಳಿಸಿದರು.

ಸ್ವಾತಂತ್ರ‍್ಯ ದಿನದಂದು, ಬ್ಯಾಂಕ್ ಮುಂಬೈನಲ್ಲಿರುವ ತನ್ನ ಕಾರ್ಪೊರೇಟ್ ಕಚೇರಿ ಹಾಗೂ  ದೇಶಾದ್ಯಂತದ ತನ್ನ ಕಚೇರಿಗಳಲ್ಲಿ ಧ್ವಜಾರೋಹಣ ಸಮಾರಂಭವನ್ನು ಆಯೋಜಿಸಿತ್ತು. ಬ್ಯಾಂಕ್ ಮತ್ತು ಅದರ ಉದ್ಯೋಗಿಗಳು ಹರ್ ಘರ್ ತಿರಂಗಾ ಅಭಿಯಾನ ಕೈಗೊಂಡು ಮಾದರಿಯಾದರು.

ಸ್ವಾತಂತ್ರ‍್ಯ ದಿನಾಚರಣೆ  ಸಂದರ್ಭದಲ್ಲಿ, ಬ್ಯಾಂಕ್ ಭಾರತದ 70 ಪ್ರಮುಖ ಸ್ಥಳಗಳಲ್ಲಿ  ದೇಶ ‘ವಿಭಜನೆಯ ಕರಾಳ ನೆನಪಿನ ದಿನ’  ನೆನಪಿಸುವ ಕಾರ್ಯಕ್ರಮ ಆಯೋಜಿಸಿತ್ತು. ದೇಶ ವಿಭಜನೆಯ ಸಮಯದಲ್ಲಿ ನಾಗರಿಕರು ಅನುಭವಿಸಿದ ನೋವನ್ನು ಕಾರ್ಯಕ್ರಮದಲ್ಲಿ ವಿವರಿಸಲಾಯಿತು.  ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಬ್ಯಾಂಕ್ ಪ್ರಮುಖ ಸ್ಥಳೀಯ ಗಣ್ಯರನ್ನು ಆಹ್ವಾನಿಸಿತ್ತು. ‘ಮೇರಿ ಮಾಠಿ ಮೇರಾ ದೇಶ್’ ಉಪಕ್ರಮದ ಭಾಗವಾಗಿ, ಬ್ಯಾಂಕ್ ಆಫ್ ಬರೋಡಾ ನೌಕರರು  ಪ್ರತಿಜ್ಞೆ ಕೈಗೊಂಡರು.  ಅಲ್ಲದೆ ದೇಶಕ್ಕೆ ನಿಷ್ಠೆ, ಸಮರ್ಪಣೆ ಮತ್ತು ರಾಷ್ಟ್ರ ಗೌರವ ಮಹತ್ವವನ್ನು ಒತ್ತಿಹೇಳಿದರು.

ಬ್ಯಾಂಕ್ ಆಫ್ ಬರೋಡಾ, ಮಂಗಳೂರು ವಲಯವು ಮಡಿಕೇರಿಯಿಂದ ಗುಲ್ಬರ್ಗದವರೆಗೆ 22 ಜಿಲ್ಲೆಗಳಲ್ಲಿ ಒಟ್ಟು 383 ಶಾಖೆಗಳನ್ನು ಹೊಂದಿದೆ
ಮತ್ತು ಪ್ರಧಾನ ವ್ಯವಸ್ಥಾಪಕಿ ಹಾಗೂ ವಲಯ ಮುಖ್ಯಸ್ಥರಾದ  ಗಾಯತ್ರಿ ಆರ್.  ಅವರೊಂದಿಗೆ ಮಂಗಳೂರಿನ ವಿಜಯ ಟವರ್ಸ್ ನಲ್ಲಿರುವ ಬ್ಯಾಂಕ್‌ನ ವಲಯ ಕಚೇರಿ ಆವರಣದಲ್ಲಿ 77ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು. ಮಂಗಳೂರು ವಲಯದ ಡಿಜಿಎಂ  ಹಾಗೂ ಉಪ ವಲಯ ಮುಖ್ಯಸ್ಥರಾದ ರಮೇಶ್ ಕಾನಡೆ ಅವರು  ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.  ಅಶ್ವಿನಿ ಕುಮಾರ್, ಡಿಜಿಎಂ- ನೆಟ್‌ವರ್ಕ್ ಮತ್ತು  ಎಂ.ವಿ.ಎಸ್. ಪ್ರಸಾದ್, ಮಂಗಳೂರು ನಗರ ಪ್ರಾದೇಶಿಕ ವ್ಯವಸ್ಥಾಪಕರು, ಮಂಗಳೂರಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

‘ಮೇರಿ ಮಾಠಿ ಮೇರಾ ದೇಶ್’ ಅಭಿಯಾನದ ಅಂಗವಾಗಿ ಭಾರತ ಸರ್ಕಾರದ  ನಿರ್ದೇಶನದಂತೆ ಪಂಚ ಪ್ರಾಣ ಪ್ರತಿಜ್ಞೆಯನ್ನು ನೆರವೇರಿಸಲಾಯಿತು ಮತ್ತು ಸಸಿಗಳನ್ನು ವಿತರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು