News Karnataka Kannada
Monday, May 06 2024
ಮಂಗಳೂರು

ಫಾದರ್ ಮ್ಯಾಥ್ಯು ವಾಸ್ ಮೆಮೊರಿಯಲ್ ಇಂಟರ್ ಪ್ಯಾರಿಶ್ ಟೂರ್ನಮೆಂಟ್

Father Mathew Vass Memorial Interparish Tournament
Photo Credit : News Kannada

ಮಂಗಳೂರು: ಸಮಾಜ ಮತ್ತು ಕಥೊಲಿಕ್ ಸಭೆಗಾಗಿ ನಿಸ್ವಾರ್ಥ ಸೇವೆ ನೀಡಿದ ಕಮ್ಯೂನಿಟಿ ಎಂಪವರ್ ಮೆಂಟ್ ಟ್ರಸ್ಟಿನ ಸ್ಥಾಪಕ ಟ್ರಸ್ಟಿ, ಫಾದರ್ ಮ್ಯಾಥ್ಯು ವಾಸ್ ಇವರ ಸ್ಮರಣಾರ್ಥವಾಗಿ ಕಮ್ಯುನಿಟಿ ಎಂಪವರ್ ಮೆಂಟ್ ಟ್ರಸ್ಟ್ (ರಿ) ಮಂಗಳೂರು, ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಶಿಯೇಶನ್ ಮಂಗಳೂರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಮತ್ತು ಕಥೊಲಿಕ್ ಸಭಾ, ಉಡುಪಿ ಪ್ರದೇಶ (ರಿ) ಇವರ ಸಹಯೋಗದಲ್ಲಿ ಇಂಟರ್ ಪ್ಯಾರಿಶ್ ಫುಟ್‌ಬಾಲ್ (ಪುರುಷರಿಗೆ) ಮತ್ತು ತ್ರೋಬಾಲ್ (ಮಹಿಳೆಯರಿಗೆ) ಟೂರ್ನಮೆಂಟ್ ಅಕ್ಟೋಬರ್ 22, 2023ರ ಭಾನುವಾರದಂದು ಸಂತ ಅಲೋಶಿಯಸ್ ಪಿಯು ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಗೆದ್ದ ಕಥೊಲಿಕ್ ಸಮುದಾಯದ ಕ್ರೀಡಾಳುಗಳನ್ನು ಸನ್ಮಾನಿಸಲು ಯೋಜಿಸಲಾಗಿದೆ. 01.10.2022 ರಿಂದ 30.09.2023ರವರೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಕ್ರೀಡಾಳುಗಳ ಹೆಸರನ್ನು
ಅಕ್ಟೋಬರ್ 15, 2023 ರೊಳಗೆ ಕಮ್ಯೂನಿಟಿ ಎಂಪವರ್ ಮೆಂಟ್ ಟ್ರಸ್ಟ್, ಮಿಲಾಗ್ರಿಸ್, ಮಂಗಳೂರು ಇಲ್ಲಿಗೆ ತಲುಪಿಸಬಹುದು ಅಥವಾ ದೂರವಾಣಿ/ವಾಟ್ಸ್ಆ್ಯಪ್ ಸಂಖ್ಯೆ : 9448379689, 9844502279 ಮೂಲಕವೂ  ತಿಳಿಸಬಹುದಾಗಿದೆ.

ಟೂರ್ನಮೆಂಟಿನ ವಿವರ ಮತ್ತು ನಿಬಂಧನೆಗಳನ್ನು ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಚರ್ಚ್ಗಳಿಗೆ ಕಳುಹಿಸಲಾಗಿದೆ. ಟೂರ್ನಮೆಂಟನಲ್ಲಿ ಭಾಗವಹಿಸುವ ಪಂಗಡಗಳು 15.10.2023ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ. ಪ್ರತಿ ವಿಜೇತ ಪಂಗಡಗಳಿಗೆ ರೂ. 25000 (ಪ್ರಥಮ), ರೂ. 15000 (ದ್ವಿತೀಯ), ರೂ. 7500 (ತೃತೀಯ) ಬಹುಮಾನಗಳಿದ್ದು ಪ್ರಶಸ್ತಿ ಫಲಕವನ್ನು ನೀಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು: ಅನಿಲ್ ಲೋಬೊ – ಸಂಚಾಲಕರು, ಫಾದರ್ ಮ್ಯಾಥ್ಯೂ ವಾಸ್ ಮೆಮೋರಿಯಲ್ ಇಂಟರ್ ಪ್ಯಾರಿಶ್ ಟೂರ್ನಮೆಂಟ್, ಸೆಲೆಸ್ಟಿನ್ ಡಿಸೋಜ – ಮ್ಯಾನೆಜಿಂಗ್ ಟ್ರಸ್ಟಿ, ಕಮ್ಯೂನಿಟಿ ಎಂಪವರ್ ಮೆಂಟ್ ಟ್ರಸ್ಟ್, ಮಂಗಳೂರು. ಆಲ್ವಿನ್ ಡಿಸೋಜ – ಅಧ್ಯಕ್ಷರು, ಕ್ಯಾಥೊಲಿಕ್ ಸಭಾ, ಮಂಗಳೂರು ಪ್ರದೇಶ (ರಿ) ಸಂತೋಷ್ ಕರ್ನೆಲಿಯೊ – ಅಧ್ಯಕ್ಷರು, ಕ್ಯಾಥೊಲಿಕ್ ಸಭಾ, ಉಡುಪಿ ಪ್ರದೇಶ (ರಿ) ಮೆಲ್ವಿನ್ ಪೆರಿಸ್ – ಕೋಶಾಧಿಕಾರಿ, ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಶನ್, ಮಂಗಳೂರು ಗುರುವಾರ, ಸೆಪ್ಟೆಂಬರ್ 14, 2023ರಂದು ಬೆಳಿಗ್ಗೆ 10.30 ಗಂಟೆಗೆ, ಪ್ರೆಸ್ ಕ್ಲಬ್,
ಮಂಗಳೂರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು