News Karnataka Kannada
Sunday, May 05 2024
ಮಂಗಳೂರು

ಧರ್ಮಸ್ಥಳ: ಸುಮಧುರ ಸಂಗೀತ ‘ಸುಪ್ರೀತಾ’

Dharmasthala: Melodious music 'Supritha'
Photo Credit : News Kannada

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ ಆಯೋಜನೆಗೊಂಡ ಕುಮಾರಿ ಸುಪ್ರೀತಾ ಅವರ ಸಂಗೀತ ಕಾರ್ಯಕ್ರಮ ನೆರೆದ ಪ್ರೇಕ್ಷಕರ ಮನಸೂರೆಗೊಳಿಸಿತು.

ಲಕ್ಷದೀಪೋತ್ಸವದ ಮೊದಲ ದಿನದ ಪ್ರಪ್ರಥಮ ಸಾಂಸ್ಕೃತಿಕ ಕಾರ್ಯಕ್ರಮವಾಗಿತ್ತು. ಇದರ ಮೂಲಕವೈವಿಧ್ಯಮಯ ಲಕ್ಷದೀಪೋತ್ಸವ ಚಾಲನೆ ಕಂಡಿತು. ಅಟಾನಾ ರಾಗದ ಶ್ರೀ ಮಹಾಗಣಪತಿಮ್ ಭಜೆ ಹಾಡಿನ ಮೂಲಕ ವಿಘ್ನವಿನಾಶಕನನ್ನು ಸ್ಮರಿಸಿದರು.

ಕಮಲ ಮನೋಹರಿ ರಾಗದ ‘ಕಂಜದಳಾಯತಾಕ್ಷಿ ಕಾಮಾಕ್ಷಿ’, ಹಂಸನಾದ ರಾಗದ ‘ಬಂಟುರೀತಿ ಕೋಲು’, ಹಿಂಧೋಳ ರಾಗದ ‘ಸಾಮಜವರಗಮನ ಹಾಡು’, ಭೈರವಿ ರಾಗದ ‘ಓಡಿ ಬಾ ರಂಗಯ್ಯ’ ಹಾಗೂ ಬೃಂದಾವನಿ ಸಾರಂಗ ರಾಗದ ‘ತಿಲ್ಲಾನ ತನದಿಂ’ ಹಾಡು ಗಮನ ಸೆಳೆದವು.

‘ಎಲ್ಯಾಡಿ ಬಂದೆ ಮುದ್ದು ರಂಗಯ್ಯ’ ಎಂದು ಜಗದೋದ್ಧಾರ ಶ್ರೀಕೃಷ್ಣನ ತಾಯಿ ಪ್ರೀತಿಯಿಂದ ಕೇಳುವ ಪರಿಯನ್ನು ಚಾರುಕೇಶಿ ರಾಗದೊಂದಿಗೆ ಬಹಳ ಸೊಗಸಾಗಿ ಹಾಡಿದರು. ನಿರಂತರ ಒಂದು ಗಂಟೆಯವರೆಗೆ ಸಂಗೀತ ಪ್ರಸ್ತುತಿಯ ಮೂಲಕ ಪ್ರೇಕ್ಷಕರ ಮನಗೆದ್ದರು.

ಈ ಸಂಗೀತ ರಸದೌತಣ ಕಾರ್ಯಕ್ರಮದಲ್ಲಿ ಸುಪ್ರೀತಾಳ ಗುರು ವಿದುಷಿ ಅನಸೂಯ ಉಜಿರೆ ತಂಬೂರಿಯಲ್ಲಿ ಸಹಕರಿಸಿದರು.  ಧನಶ್ರೀ ಶಬರಾಯ ವಯೋಲಿನ್ ನುಡಿಸುವುದರ ಮೂಲಕ ಸಂಗೀತ ಸಂಜೆಯಲ್ಲಿ ಪಾಲ್ಗೊಂಡರು. ಮೃದಂಗ ವಾದಕರಾಗಿ ಪವನ್ ಪುತ್ತೂರು ಸಾಥ್ ನೀಡುವುದರೊಂದಿಗೆ, ಆರನೇ ತರಗತಿಯ  ವರ್ಚಸ್ ಖಂಜೀರವನ್ನು ನುಡಿಸಿದರು,

ಸುಪ್ರೀತಾಳ ಸುಮಧುರ ಕಂಠದ ಗಾಯನಕ್ಕೆ ಮನಸೋತ ಕೆಲ ಕಲಾವಿದರು ಆಕೆಯ ಹಾಡಿನೊಂದಿಗೆತಾವೂ ತಲ್ಲೀನರಾಗಿ ದನಿಗೂಡಿಸುತ್ತಿದ್ದರು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಕೊಡಲ್ಪಡುವ ಶಿಷ್ಯ ವೇತನಕ್ಕೆ ಭಾಜನರಾಗಿರುವ ಸುಪ್ರೀತಾ ಧರ್ಮಸ್ಥಳ ಎಸ್.ಡಿ.ಎಂ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ.

ಬೇರೆ ಬೇರೆ ವೃತ್ತಿರಂಗದಲ್ಲಿ ನಿರತರಾಗಿರುವ ಕಲಾವಿದರ ತಂಡವೊಂದು ಸಂಗೀತದ ಅಭಿರುಚಿಯೊಂದಿಗೆ ವೇದಿಕೆಯಲ್ಲಿ ಒಂದಾಗಿರುವುದು ವಿಶೇಷವಾಗಿತ್ತು. ಎಸ್.ಡಿ.ಎಂ ಸಂಸ್ಥೆಯ ಹಿಂದಿ ಶಿಕ್ಷಕ ಸುನಿಲ್ ಪಂಡಿತ್ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ: ರಕ್ಷಾ ಕೋಟ್ಯಾನ್, ಎಸ್.ಡಿ.ಎಂ ಕಾಲೇಜು, ಉಜಿರೆ
ಚಿತ್ರ ಕೃಪೆ: ಭಾರತಿ ಹೆಗಡೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು