News Karnataka Kannada
Friday, May 03 2024
ಮಂಗಳೂರು

ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ಡಿ.25ರಂದು ದೀಪೋತ್ಸವ, ಸಾಮೂಹಿಕ ಗೋಪೂಜೆ, ಗೋ ನಂದಾರತಿ

Deepotsava, Mass Gopuja, Go Nandarathi programme on Dec.25 at Kalenja Nandagokula Goshala
Photo Credit : By Author

ಬೆಳ್ತಂಗಡಿ: ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜ ಇದರ ಆಶ್ರಯದಲ್ಲಿ, ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ ಇದರ ವತಿಯಿಂದ ಕಳೆಂಜದ ನಂದಗೋಕುಲ ಗೋಶಾಲೆಯಲ್ಲಿ “ನಂದಗೋಕುಲ ದೀಪೋತ್ಸವ” ಅಂಗವಾಗಿ ಸಾಮೂಹಿಕ ಗೋಪೂಜೆ, ಗೋನಂದಾರತಿ ಮತ್ತು ದೀಪೋತ್ಸವ ಕಾರ್ಯಕ್ರಮ ಡಿ.25ರಂದು ಇಳಿಸಂಜೆ ಜರುಗಲಿದೆ ಎಂದು ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ನ ಅಧ್ಯಕ್ಷ ಹಾಗೂ ದಂತ ವೈದ್ಯರಾದ ಉಜಿರೆಯ ಡಾ| ಎಂ.ಎಂ ದಯಾಕರ್ ಹೇಳಿದರು.

ಅವರು ಡಿ.24ರಂದು ಬೆಳ್ತಂಗಡಿ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಅಂದು ಸಂಜೆ ನಡೆಯುವ ದೀಪೋತ್ಸವ ಸಮಾರಂಭವನ್ನು ರಾಜ್ಯ ಸರಕಾರದ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ. ಕಬ್ಬು ಅಭಿವೃದ್ಧಿ ಹಾಗೂ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಎಂಎಲ್‌ಸಿ ಕೆ. ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ರುದ್ರೇಶ್, ಬರೋಡ ತುಳುಕೂಟ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ, ಎಸ್.ಕೆ.ಡಿ.ಆರ್.ಡಿ.ಪಿ. ಧರ್ಮಸ್ಥಳದ ಇ.ಡಿ ಡಾ| ಎಲ್.ಹೆಚ್. ಮಂಜುನಾಥ್,ಆರ್.ಎಸ್.ಎಸ್.ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್,
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ, ಅಮೇರಿಕ ವೆಂಚರ್‌ಸಾಫ್ಟ್ ಗ್ಲೋಬಲ್ ಸಂಸ್ಥೆಗಳ
ಸಂಸ್ಥಾಪಕ ವೆಂಕಟ್ರಮಣ ಭಟ್ ಅಗರ್ತ, ಪಟ್ಟಣ ಪಂಚಾಯತ್ ಅಧ್ಯಕ್ಷ ಶ್ರೀಮತಿ ರಜನಿ ಕುಡ್ವ ಗ್ರಾ.ಪಂ. ಕಳೆಂಜ ಅಧ್ಯಕ್ಷ ಪ್ರಸನ್ನ, ಭಾ.ಜ.ಪ ಅಧ್ಯಕ್ಷ ಕೆ. ಜಯಂತ್ ಕೋಟ್ಯಾನ್, ಸಿಎ ಬೆಂಗಳೂರಿನ ಭರತ್ ಕುಮಾರ್, ಸೋಮಂತಡ್ಕ ಪಂಚಶ್ರೀ ಉದ್ಯಮಿ ನಾರಾಯಣ ಗೌಡ, ಉದ್ಯಮಿ ಹೆಚ್. ಆರ್. ಪಟೇಲ್ ಉಜಿರೆ, ಡೀಕಯ್ಯ ಗೌಡ ಬಂಡೇರಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋ ಸಂತತಿಯನ್ನು ಉಳಿಸಿ, ಬೆಳೆಸುವ ಹಾಗೂ ನಿರ್ಗತಿಕ, ಅನಾಥ ಮತ್ತು ಅಶಕ್ತ ಗೋವುಗಳಿಗೆ ರಕ್ಷಣೆ ಮತ್ತು ಅವುಗಳ ಬದುಕಿಗೆ ಪೂರಕ ವಾತಾವರಣವನ್ನು ಒದಗಿಸುವ ಉದ್ದೇಶದಿಂದ ಟ್ರಸ್ಟ್‌ನ ಅಡಿಯಲ್ಲಿ ನಂದಗೋಕುಲ ಗೋಶಾಲೆ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು, ಪ್ರಕೃತ 2೦೦ಕ್ಕೂ ಹೆಚ್ಚು ಅನಾಥ ಗೋವುಗಳು ಇಲ್ಲಿ ನೆಮ್ಮದಿಯ ದಿನಗಳನ್ನು ಕಾಣುತ್ತಿವೆ. ಡಿ.19ರಂದು ತಾಲೂಕಿನಿಂದ ಗೋಗ್ರಾಸ ಹೊರಕಾಣಿಕೆ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಒಂದು ತಿಂಗಳಿಗೆ ಸುಮಾರು ರೂ. 4ರಿಂದ ರೂ.5ಲಕ್ಷದವರೆಗೆ ವೆಚ್ಚವಾಗುತ್ತಿದ್ದು, ಹುಟ್ಟು ಹಬ್ಬ, ವೈವಾಹಿಕ ವರ್ಧಂತಿ, ಹಿರಿಯರ ನೆನಪಿನ ದಿನಗಳಲ್ಲಿ ಗೋಶಾಲೆಗೆ ಸಾರ್ವಜನಿಕರು ಗೋಗ್ರಾಸ ನೀಡಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿಗಳಾದ ಭಾಸ್ಕರ ಧರ್ಮಸ್ಥಳ ಸ್ಥಳ ಹಾಗೂ ನವೀನ್ ನೆರಿಯ ಮತ್ತು ಕಚೇರಿ ವ್ಯವಸ್ಥಾಪಕ ಶ್ರೀಶ ಭಟ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು