ಬೆಳ್ತಂಗಡಿ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಚರಾ ಮತ್ತು ಚಿರಾಸ್ತಿಯನ್ನು ಘೋಷಿಸಬೇಕಾಗಿದ್ದು, ಎ.17 ಹಾಗೂ ಎ.18ರಂದು ನಾಮಪತ್ರ ಜೊತೆ ಆಸ್ತಿ ವಿವರದ ಆಫಿದವಿತ್ ಸಲ್ಲಿಸಿ ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ ಅಫಿದವಿತ್ನಲ್ಲಿ ಸ್ವಂತ ಚರಾಸ್ತಿ ಒಟ್ಟು ರೂ. 1,24,46,101 ಎಂದು ನಮೂದಿಸಿದ್ದರೆ. ರೂ. 1,05,32,500 ರು. ಮೌಲ್ಯದ ಚಿರಾಸ್ತಿಯನ್ನು ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ ಒಟ್ಟು ರೂ. 97,55,280 ಚರಾಸ್ತಿ ಇದ್ದರೆ, ಸ್ಥಿರಾಸ್ತಿಯನ್ನು ಹೊಂದಿಲ್ಲ. ಹರೀಶ್ ಪೂಂಜ ಅವರು ಒಟ್ಟು 1,06,29,074 ರೂ. ಸಾಲ ಹೊಂದಿದ್ದರೆ, ಪತ್ನಿ ರೂ. 5 ಲಕ್ಷ ಸಾಲ ಹೊಂದಿದ್ದಾರೆ. ರೂ. 2,20 ಲಕ್ಷ ಗಳ ಐಫೋನ್, ಇನ್ನೋವಾ ಕ್ರಿಸ್ಟಾ, ಇನ್ನೋವಾ, ಸ್ವಿಫ್ಟ್ ಮೋಟಾರ್ ಕಾರ್ ಹೊಂದಿದ್ದಾರೆ. 179 ಗ್ರಾಂ ಮೌಲ್ಯದ ಚಿನ್ನ ಇದ್ದರೆ, ಅವರ ಪತ್ನಿ ಬಳಿ 1419 ಗ್ರಾಂ ಚಿನ್ನ, 6.68 ಲಕ್ಷ ರೂ. ಮೌಲ್ಯದ ವಜ್ರಾಭರಣ, ಪ್ಲಾಟಿನಂ, ಆಭರಣ, 2 ಮಾಣಿಕ್ಯದ ಹರಳುಗಳಿವೆ.
ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಬಳಿ ಒಟ್ಟು ರೂ. 1,67,41,755 ರು. ಚರಾಸ್ತಿ ಇದ್ದರೆ, ಅವರ ಪತ್ನಿ ಹೆಸರಿನಲ್ಲಿ 33,49,475 ರೂ. ಮೌಲ್ಯದ ಚರಾಸ್ತಿ ಇದೆ. ರಕ್ಷಿತ್ ಹೆಸರಿನಲ್ಲಿ 1,74,81,664 ರೂ. ಮೌಲ್ಯದ ಸ್ಥಿರಾಸ್ತಿ ಇದ್ದು, ಪತ್ನಿ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ರಕ್ಷಿತ್ ಅವರಿಗೆ 1,13,60,714 ರೂ. ಸಾಲ ಇದ್ದರೆ, ಅವರ ಪತ್ನಿ ಯಾವುದೇ ಸಾಲ ಹೊಂದಿಲ್ಲ. ರಕ್ಷಿತ್ ಶಿವರಾಂ ಅವರು 100 ಗ್ರಾಂ ಚಿನ್ನ ಹೊಂದಿದ್ದರೆ, ಅವರ ಪತ್ನಿ ಬಳಿ 500 ಗ್ರಾಂ ಚಿನ್ನ, 1000 ಗ್ರಾಂ ಬೆಳ್ಳಿಯ ಪೂಜಾ ಸಾಮಾಗ್ರಿಗಳಿವೆ.