News Karnataka Kannada
Thursday, May 02 2024
ಮಂಗಳೂರು

ಹಿಂದೂ ದೇವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವರ ವಿರುದ್ಧ ಕ್ರಮಕ್ಕೆ ಮನವಿ

Puttur
Photo Credit : News Kannada

ಪುತ್ತೂರು:  ಶ್ರೀರಾಮ, ಸೀತಾಮಾತೆ ಮತ್ತು ಆಂಜನೇಯ ಸ್ವಾಮಿಯ ವಿರುದ್ಧ ಅಸಹ್ಯಕರ ಹೇಳಿಕೆ ನೀಡಿದ ಕಾಂಗ್ರೇಸ್ ಮುಖಂಡ ಶೈಲಜಾ ಅಮರನಾಥ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸನಾತನ ಸಂಸ್ಥೆ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮನವಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹಿಂದೂ‌ ಮುಖಂಡ ದಿನೇಶ್ ಜೈನ್, ಹಿಂದೂ‌ ದೇವರುಗಳ ಬಗ್ಗೆ ಅಸಹ್ಯವಾಗಿ ಮಾತನಾಡಿದ ಶೈಲಜಾ ವಿರುದ್ಧ ಕೂಡಲೇ ಕಾನೂನು‌ ಕ್ರಮ ಕೈಗೊಳ್ಳದೇ ಹೋದಲ್ಲಿ ಇಡೀ‌ ಹಿಂದೂ ಸಮಾಜ ಬೀದಿಗೆ ಬಂದು ಹೋರಾಟ ನಡೆಸಬೇಕಾಗುತ್ತದೆ ಎಚ್ಚರಿಸಿದರು.

ಆಧಾರ ಸಹಿತ ಪ್ರವಾದಿ ಮಹಮ್ಮದ್ ಬಗ್ಗೆ ಹೇಳಿಕೆ ನೀಡಿದ ನೂಪುರ್ ಶರ್ಮಾ ವಿರುದ್ಧ ಉತ್ತರಪ್ರದೇಶದಲ್ಲಿ ಯಾವ ರೀತಿ ಪ್ರತಿಭಟನೆ ನಡೆಯಿತೋ, ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಪ್ರತಿಕ್ರಿಯೆ ನೀಡಲಿದೆ ಎಂದ ಅವರು ಹಿಂದೂ ಸಮಾಜ ಎಚ್ಚೆತ್ತುಕೊಂಡಲ್ಲಿ ಏನಾಗುತ್ತದೆ ಅನ್ನೋದು ಈ ಹಿಂದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳೋದು ಒಳಿತು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು