ಬೆಳ್ತಂಗಡಿ : ಸಿ.ಎಂ ಸಿದ್ದರಾಮಯ್ಯ ವಿರುದ್ಧ ಜಾಲತಾಣದಲ್ಲಿ ಅವಹೇಳನಕಾರಿ ರೀತಿಯಲ್ಲಿ ಮಾತಾನಾಡಿದ ಆಡಿಯೋ ವೈರಲ್ ಅಗಿದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನ.19 ರಂದು ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾ| ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿಯಾಗಿರುವ ವೃತ್ತಿಯಲ್ಲಿ ಸೆಲೂನ್ ಅಂಗಡಿಯಲ್ಲಿ ಕೆಲಸ ಮಾಡುವ ರಜಿತ್ ಕೊಕ್ಕಡ @ ರಜಿತ್ ಭಂಡಾರಿ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಬಗ್ಗೆ ಅಶ್ಲೀಲವಾಗಿ ನಿಂದಿಸಿ ಮಾತಾನಾಡಿರುವ ಆಡಿಯೋ ಹರಿಯಬಿಟ್ಟಿದ್ದು ಇದರ ಬಗ್ಗೆ ಬೆಳ್ತಂಗಡಿ ಕಾಂಗ್ರೆಸ್ ಕಾರ್ಯಕರ್ತ ಹಕಿಮ್ ಕೊಕ್ಕಡ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಧರ್ಮಸ್ಥಳ ಪೊಲೀಸರು ಆರೋಪಿ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿ ರಜಿತ್ ಕೊಕ್ಕಡ @ರಜಿತ್ ಭಂಡಾರಿ ಮೇಲೆ ಐಪಿಸಿ 1860 (u/s 153A,504,505(2)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.