News Karnataka Kannada
Monday, April 29 2024
ಮಂಗಳೂರು

ಚಿಕ್ಕಮಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ – ಬಿ.ಎಸ್.ಯಡಿಯೂರಪ್ಪ

Chikkamagaluru: BJP to come back to power in Karnataka: BS Yediyurappa
Photo Credit : News Kannada

ಚಿಕ್ಕಮಗಳೂರು: ಕೆಲವು ರಾಜಕೀಯ ಪಕ್ಷಗಳ ಮುಖಂಡರುಗಳು ಮುಂದಿನ ಮುಖ್ಯಮಂತ್ರಿ ನಾನೇ ಎಂಬ ತಿರುಕನ ಕನಸು ಕಾಣುತ್ತಿದ್ದಾರೆ. ಇದು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿದೆ. ಬಿಜೆಪಿ ೧೪೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿ ಕಾರಕ್ಕೆ ಬರುವುದು ಸೂರ್ಯ, ಚಂದ್ರ ಇರುವಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದ ವಿಜಯಪುರ ಗಣಪತಿ ಪೆಂಡಾಲ್‌ನಲ್ಲಿ ಹಮ್ಮಿಕೊಂಡಿದ್ದ ವಿಜ ಯಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಉದ್ದಗಲಕ್ಕೂ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಪ್ರವಾಸ ಹಮ್ಮಿಕೊಂಡಿದ್ದೇನೆ. ರಾಜ್ಯದಲ್ಲಿ ೧೪೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಜೋಡಿ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಮಾದರಿ ರಾಜ್ಯ ಮಾಡಲು ಸಂಕಲ್ಪ ಮಾಡಿ ದ್ದಾರೆ ಎಂದರು.

ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗಳಿಗೆ ತೆರಳಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಾರ್ಯಕ್ರಮ ಗಳನ್ನು ಜನರಿಗೆ ಮನವರಿಕೆ ಮಾಡ ಬೇಕು ಎಂದರು.

ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಗೆಲು ವು ಸಾಧಿಸಲು ಪಣ ತೊಡಬೇಕು ಎಂದ ಅವರು ಹಣ ಬಲದ ಜೊತೆಗೆ ಜಾತಿಯ ವಿಷಬೀಜ ಭಿತ್ತಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿರುವ ಕಾಂಗ್ರೆಸ್‌ನವರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ ಅದ್ಬುತ ರಾಜಕಾರಣಿಗಳನ್ನು ಸೃಷ್ಟಿಸು ವ ತಾಕತ್ತು ಚಿಕ್ಕಮಗಳೂರಿಗೆ ಇದೆ. ನಾನು ನನ್ನನ್ನು ನೀವು ಸಂಸದರನ್ನಾ ಗಿ ಆಯ್ಕೆ ಮಾಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತ್ತು. ಸಿ.ಟಿ.ರವಿಯವರನ್ನು ಶಾಸಕ ರನ್ನಾಗಿ ನೀವು ಆಯ್ಕೆ ಮಾಡಿದ್ದೀರಿ ಅವರೀಗ ರಾಷ್ಟ್ರೀಯ ಪ್ರಧಾನ ಕಾರ್‍ಯ ದರ್ಶಿಯಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ ಎಂದರು.

ಕಾಂಗ್ರೆಸ್ ನಿರಂತರವಾಗಿ ಅಧಿಕಾ ರ ಅನುಭವಿಸಿದೆ. ಆಚಾರ-ವಿಚಾರ ಗಳನ್ನು ದೂರ ಮಾಡುವ ಜೊತೆಗೆ ಖಜಾನೆಯನ್ನು ಕೊಳ್ಳೆ ಹೊಡೆಯುವ ಕೆಲಸ ಮಾಡಿದ್ದರ ಪರಿಣಾಮ ನರೇಂದ್ರ ಮೋದಿಯವರನ್ನು ಜನ ಆಯ್ಕೆ ಮಾಡಿದ್ದಾರೆ. ಅವರ ಆಡಳಿತದಲ್ಲಿ ಒಂದೂ ಕಪ್ಪುಚುಕ್ಕೆಯಿಲ್ಲದಂತೆ ಅಧಿ ಕಾರ ನಡೆಸುತ್ತಿದ್ದಾರೆ ಎಂದರು. ಕೋವಿಡ್ ಸಂದರ್ಭದಲ್ಲಿ ಉತ್ತ ಮವಾಗಿ ಕಾರ್ಯನಿರ್ವಹಿಸಿದ ಜೊ ತೆಗೆ ಬೇರೆ ದೇಶಗಳಿಗೆ ಕೋವಿಡ್ ಲಸಿಕೆಯನ್ನು ಕೊಡುವ ಮೂಲಕ ನಾವು ಭಿಕ್ಷೆ ಪಾತ್ರ ಹಿಡಿದು ಇನ್ನೊ ಬ್ಬರ ಬಳಿ ಹೋಗುವುದಿಲ್ಲ. ಬದಲಾ ಗಿ ಭಿಕ್ಷೆ ಕೊಡುತ್ತೇವೆ ಎಂಬುದನ್ನು ತೋರಿಸಿಕೊಟ್ಟರು ಎಂದರು.

ಚುನಾವಣೆಯನ್ನು ನಾವು ಭರ ವಸೆ ಮತ್ತು ಘೋಷಣೆಗಳ ಆಧಾರ ದಲ್ಲಿ ಮಾಡುವುದಿಲ್ಲ. ಬದಲಾಗಿ ರಿ ಪೋರ್ಟ್ ಕಾರ್ಡ್ ಕೊಡುವ ಮೂ ಲಕ ಚುನಾವಣೆ ಎದುರಿಸುತ್ತೇವೆ. ರೀಪೋರ್ಟ್ ಕಾರ್ಡ್‌ನ ಮೌಲ್ಯ ಮಾಪನ ಮಾಡುವ ಮೂಲಕ ಮತ ನೀಡಬೇಕು ಎಂದು ಮನವಿ ಮಾಡಿ ದರು.
ಜೆಡಿಎಸ್ ಮತ್ತು ಕಾಂಗ್ರೆಸ್‌ನವ ರು ಸಾಧನೆಯ ಪಟ್ಟಿಯನ್ನು ಜನರ ಮುಂದಿಡಲಿ. ಆಗ ಜನರು ಅವರ ಮೌಲ್ಯಮಾಪನವನ್ನು ಮಾಡುತ್ತಾರೆ ಎಂದರು. ಶಾಸಕ ಸಿ.ಟಿ.ರವಿ ಮಾತನಾಡಿ ನನ್ನ ವಿರುದ್ಧ ಜಾತಿವಾದದ ಬಣ್ಣ ಕಟ್ಟಲಾಗುತ್ತಿದೆ. ನಾನು ಎಂದೂ ಕೂ ಡಾ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲಾ ಜಾತಿಯ ಜನರೂ ಕೂಡಾ ಪ್ರೀತಿಯಿಂದ ಮತ ನೀಡಿದ್ದಾರೆ. ಈಗ ಕೆಲವು ಗ್ರಾಮಗಳಲ್ಲಿ ಗಲಾಟೆ ಮಾಡಿಸುವ ಕೆಲಸ ಮಾಡಿಸಲಾಗು ತ್ತಿದೆ. ಆ ಗ್ರಾಮಗಳಲ್ಲಿ ಹಿಂದಿಗಿಂತ ಲೂ ಈ ಬಾರಿ ಹೆಚ್ಚು ಮತಗಳನ್ನು ಪಡೆಯುತ್ತೇನೆ ಎಂದರು.

ಮನೆ ಹಾಳುಮಾಡುವ ರಾಜ ಕಾರಣ ಮಾಡಿಲ್ಲ. ಜಾತಿ, ಬೇಧದ ರಾಜಕಾರಣ ಮಾಡಿದ್ದರೆ ಜನ ನನ ಗೆ ಪ್ರೀತಿ ತೋರಿಸುತ್ತಿರಲಿಲ್ಲ. ನನ್ನ ಬಳಿ ಭೀತಿ ಮತ್ತು ಭಯ ಹುಟ್ಟಿಸುವ ರಾಜಕಾರಣ ಇಲ್ಲ. ಆದರೂ ನನ್ನನ್ನು ಜಾತಿವಾದಿ ಎಂಬಂತೆ ಬಿಂಬಿಸಲಾ ಗುತ್ತಿದೆ. ಇದರಲ್ಲಿ ಯಾರೂ ಕೂಡಾ ಸಫಲರಾಗುವುದಿಲ್ಲ ಎಂದರು.

ಈ ಬಾರಿಯ ಚುನಾವಣೆಯಲ್ಲಿ ಒಂದು ಲಕ್ಷ ಓಟುಗಳನ್ನು ಪಡೆಯು ವ ಸಂಕಲ್ಪ ಮಾಡಿದ್ದೇವೆ ಎಂದ ಅವರು ದತ್ತಪೀಠ ವಿಚಾರದಲ್ಲಿ ಸೌಹಾರ್ದತೆಯಿಂದ ಯಾರಿಗೂ ತೊಂದರೆಯಾಗದಂತೆ ಮುಜಾವರ್ ಮತ್ತು ಹಿಂದೂ ಅರ್ಚಕರ ನೇಮಕ ಮಾಡಲಾಗಿದೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್‌ನ ವರು ತಮ್ಮ ಅಧಿಕಾರಾವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ರಿಪೋರ್ಟ್ ಕಾರ್ಡ್ ಕೊಡಲಿ ಎಂದು ಸವಾಲು ಹಾಕಿದ ಅವರು ಚಿಕ್ಕಮಗಳೂರು ಅಭಿವೃದ್ದಿ ವಿರೋಧಿ ಗಳು ಬಿಜೆಪಿಯನ್ನು ಸೋಲಿಸಲು ಇಚ್ಚಿಸುತ್ತಿದ್ದಾರೆ. ಇದು ಸಾಧ್ಯವಿಲ್ಲ. ಸಿದ್ದಾಂತ, ಅಭಿವೃದ್ದಿ ಮತ್ತು ನಡವ ಳಿಕೆಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ, ಟಿ.ರಾಜಶೇಖರ್, ನಗರ ಸಭಾ ಅಧ್ಯಕ್ಷ ವರಸಿದ್ದಿ ವೇಣುಗೋ ಪಾಲ್, ಮಧುಕುಮಾರ್ ರಾಜ್ ಅರಸ್, ಪ್ರೇಮ್‌ಕುಮಾರ್ ಮತ್ತಿತ ರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು