News Karnataka Kannada
Friday, May 17 2024
ಮಂಗಳೂರು

ಕದ್ರಿ ಯಲ್ಲಿ ಕಾಡುಕೋಣ ಸಂಚಾರ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಂಗಳೂರು ನಗರದ ಕೂಳೂರು ಭಾಗದಲ್ಲಿ ಕೆಲ ಸಮಯದ ಹಿಂದೆ ಕಾಡುಕೋಣವೊಂದು ಪ್ರತ್ಯಕ್ಷವಾಗಿತ್ತು. ಇದೀಗ ಕದ್ರಿ, ಶಿವಭಾಗ್‌ ಪರಿಸರದಲ್ಲಿ ಕಾಡುಕೋಣ ಓಡಾಟ ಕಂಡುಬಂದಿದೆ.
Photo Credit : News Kannada

ಮಂಗಳೂರು: ಮಂಗಳೂರು ನಗರದ ಕೂಳೂರು ಭಾಗದಲ್ಲಿ ಕೆಲ ಸಮಯದ ಹಿಂದೆ ಕಾಡುಕೋಣವೊಂದು ಪ್ರತ್ಯಕ್ಷವಾಗಿತ್ತು. ಇದೀಗ ಕದ್ರಿ, ಶಿವಭಾಗ್‌ ಪರಿಸರದಲ್ಲಿ ಕಾಡುಕೋಣ ಓಡಾಟ ಕಂಡುಬಂದಿದೆ.

ಭಾನುವಾರ ರಾತ್ರಿ ವೇಳೆ ಕದ್ರಿ ಮತ್ತು ಕೈಬಟ್ಟಲ್ ಪರಿಸರದಲ್ಲಿ ಕಾಡುಕೋಣ ಸಂಚಾರ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮನೆಯ ಕಾಂಪೌಂಡ್ ಒಳಗಡೆ ಕೋಣ ಬಂದಿದ್ದು ಜನರು ಆತಂಕಗೊಂಡಿದ್ದಾರೆ. ಶಿವಭಾಗ್ ಕಡೆಯಿಂದ ಬಂದಿದ್ದ ಕಾಡು ಕೋಣ ಬಳಿಕ ರಸ್ತೆಯಲ್ಲೇ ಸಾಗಿ ಕೈಬಟ್ಟಲ್ ಮೂಲಕ ತೆರಳಿ ಕಣ್ಮರೆಯಾಗಿದೆ.

ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದರಂತೆ, ಇಂದು ಬೆಳಗ್ಗೆ ಕದ್ರಿ ಪರಿಸರದಲ್ಲಿ ಅರಣ್ಯ ಸಿಬಂದಿ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಎಸಿಎಫ್‌ ಶ್ರೀಧರ್‌ ಅವರೂ ಕೂಡ ಕಾಡು ಕೋಣ ಸಂಚಾರದ ಬಗ್ಗೆ ಮಾಹಿತಿ ಬಂದಿದ್ದು, ಸಿಸಿಟಿವಿಯಲ್ಲಿ ಕಾಡುಕೋಣ ಸಂಚಾರದ ದೃಶ್ಯ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು