News Karnataka Kannada
Sunday, May 05 2024
ಮಂಗಳೂರು

ಮಂಗಳೂರು: ಚಾಕೋಲೇಟ್‌ ಗಳಲ್ಲಿ ಗಾಂಜಾ ಅಂಶ ದೃಢ

Cannabis content in chocolates is strong
Photo Credit : News Kannada

ಮಂಗಳೂರು: ಜುಲೈ 19ರಂದು ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಗರದ ಕಾರ್ ಸ್ಟ್ರೀಟ್ ನಲ್ಲಿ ಮನೋಹರ್ ಶೇಟ್ ಎಂಬಾತನ ಅಂಗಡಿಯಿಂದ 48 ಸಾವಿರ ರೂ. ಮೌಲ್ಯದ ತಲಾ 40 ಬಾಂಗ್ ಚಾಕೋಲೇಟ್‌ ತುಂಬಿರುವ 300 ಪ್ಯಾಕೇಟ್ ಗಳನ್ನು ಮತ್ತು 592 ಬಿಡಿ ಚಾಕ್ಲೇಟ್‌ಗಳನ್ನು ವಶಪಡಿಸಿಕೊಂಡಿದ್ದರು.

ಅದೇ ದಿನ ಹೈಲ್ಯಾಂಡ್‌ ಬಳಿಯ ಗೂಡಂಗಡಿಯಿಂದ 55 ಸಾವಿರ ಮೌಲ್ಯದ ಚಾಕೋಲೇಟ್‌ ವಶಪಡಿಸಿಕೊಂಡಿದ್ದರು. ಅಲ್ಲದೆ ಆರೋಪಿ ಟೆಟಿನ್‌ ಸೋನ್ನೆ ಎಂಬಾತನ್ನು ವಶಕ್ಕೆ ಪಡೆದಿದ್ದರು.

ಸ್ವಾಧೀನಪಡಿಸಿಕೊಂಡಿರುವ ಬಾಂಗ್ ಚಾಕೇಟ್ ಗಳನ್ನು ಅದರಲ್ಲಿರುವ ಮಾದಕ ಗಾಂಜಾ ಅಂಶದ ಪತ್ತೆ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಬಾಂಗ್ ಚಾಕೋಲೇಟ್ ಗಳಲ್ಲಿ ಗಾಂಜಾ ಅಂಶವಿರುವುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿರುವುದರಿಂದ ಆರೋಪಿತರ ವಿರುದ್ಧ ಎನ್.ಡಿ.ಪಿ.ಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ ಆರೋಪಿತರನ್ನು ನ್ಯಾಯಾಲಯಲಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಅರೋಪಿತರು ಪ್ರಸ್ತುತ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು