News Karnataka Kannada
Tuesday, April 23 2024
Cricket
ಮಂಗಳೂರು

ಬೆಳ್ತಂಗಡಿ| ಜನರ ಸಮಸ್ಯೆ ಅರಿತಾಗ ನಮಗೆ ನಿಜವಾದ ಜೀವನ ದರ್ಶನವಾಗುತ್ತದೆ: ಹೇಮಾವತಿ ವೀ. ಹೆಗ್ಗಡೆ

When we understand the problems of the people, we get a real vision of life: Hemavathi Vee. Heggade
Photo Credit :

ಬೆಳ್ತಂಗಡಿ: ತಳಮಟ್ಟದಿಂದ ಜನರ ಬದುಕನ್ನು ಕಟ್ಟಿಕೊಡುವ ಹಾಗೂ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವುದೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶವಾಗಿದ್ದು ಇದು ತನಗೆ ಅತ್ಯಂತ ಪ್ರಿಯವಾದ ಸೇವೆಯಾಗಿದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಬಗ್ಯೆ ಹೇಮಾವತಿ ವೀ. ಹೆಗ್ಗಡೆಯವರನ್ನು ಮಾಜಿ ಎಂ.ಎಲ್.ಸಿ. ಐವನ್ ಡಿ’ಸೋಜಾ ನೇತೃತ್ವದಲ್ಲಿ ಮಂಗಳೂರಿನ ಪೌರ ಸನ್ಮಾನ ಸಮಿತಿಯವರು ಶನಿವಾರ ಧರ್ಮಸ್ಥಳದಲ್ಲಿ ಬೀಡಿನಲ್ಲಿ (ನಿವಾಸ) ಗೌರವಿಸಿದ ಸಂದರ್ಭ ಅವರು ಮಾತನಾಡಿದರು.

“ಜ್ಞಾನವಿಕಾಸ” ಕಾರ್ಯಕ್ರಮದಡಿಯಲ್ಲಿ 253 ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿಗೆ ತಲಾ 25 ರಂತೆ ಜ್ಞಾನವಿಕಾಸ ಕೇಂದ್ರಗಳನ್ನು ಪ್ರಾರಂಭಿಸಿ ಮಹಿಳೆಯರಿಗೆ ಬೇಕಾದ ಮಾಹಿತಿ, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಲಾಗುತ್ತದೆ. ಹದಿನೈದು ಸಾವಿರ ಕಾರ್ಯಕರ್ತರಲ್ಲಿ ಹನ್ನೊಂದು ಸಾವಿರ ಮಂದಿ ಮಹಿಳಾ ಕಾರ್ಯಕರ್ತರಿದ್ದಾರೆ. ಕಾರ್ಯಕರ್ತರ ಶಿಸ್ತು, ನಿಷ್ಠೆ, ಕಾರ್ಯತತ್ಪರತೆ, ಯೋಜನೆಯ ಬಗ್ಯೆ ಇರುವ ಪ್ರೀತಿ-ವಿಶ್ವಾಸ ಮತ್ತು ಗೌರವದಿಂದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿದೆ. ಗ್ರಾಮೀಣ ಜನರ ಕಷ್ಟ-ಸಮಸ್ಯೆಗಳು, ಸವಾಲುಗಳನ್ನು ಅರಿತಾಗ ನಮಗೆ ನಿಜವಾದ ಜೀವನ ದರ್ಶನವಾಗುತ್ತದೆ.

ಸರ್ಕಾರದವರು ಗ್ರಾಮಾಭಿವೃದ್ಧಿ ಯೋಜನೆಯ ಸೇವೆ, ಸಾಧನೆಯನ್ನು ಮನ್ನಿಸಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ್ದು ಈಗಾಗಲೆ ಹನ್ನೊಂದು ಸಾವಿರ ಸೇವಾ ಕೇಂದ್ರಗಳ ಮೂಲಕ ಜನರಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಲಾಗುತ್ತದೆ. “ವಾತ್ಸಲ್ಯ” ಕಾರ್ಯಕ್ರಮದ ಮೂಲಕ ವೃದ್ಧರಿಗೆ ರಕ್ಷಣೆ, ಆರೋಗ್ಯ ಸೇವೆ, ಆಹಾರ ಪೂರೈಕೆ, ಮನೆ ದುರಸ್ತಿ, ಮಕ್ಕಳ ಪಾಲನೆ, ಪೋಷಣೆ, ಪೌಷ್ಠಿಕ ಆಹಾರ ಪೂರೈಕೆ ಮೊದಲಾದ ಸೇವೆಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಅವರ ಸೇವೆಗೆ ಸಂದ ಗೌರವವಾಗಿದೆ. ಇದರಿಂದಾಗಿ ರಾಷ್ಟ್ರಮಟ್ಟದಲ್ಲಿ ಅವರಿಗೆ ಮಾನ್ಯತೆ ದೊರಕಿದಂತಾಗಿದೆ ಎಂದು ಹೇಮಾವತಿ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು.

ಮಂಗಳೂರಿನ ಪೌರ ಸನ್ಮಾನ ಸಮಿತಿಯ ಪ್ರಧಾನ ಸಂಚಾಲಕ ಐವನ್ ಡಿ’ಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ನಾಗೇಂದ್ರ ಕುಮಾರ್, ಡಾ. ದೇವರಾಜ್, ಕೆ., ರೊನಾಲ್ಡ್ ರಾಯ್ ಕ್ಯಾಸ್ತಲಿನೊ, ಕೆ. ಭಾಸ್ಕರ ರಾವ್, ಜನಾರ್ದನ್, ಡಾ. ಕವಿತಾ ಡಿ’ಸೋಜ, ಮೀನಾ ಟೆಲ್ಲಿಸ್, ಜೇಮ್ಸ್ ಪ್ರವೀಣ್, ಮಹೇಶ್ ಮಂಗಳೂರು, ಶೇಖರ ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು