News Karnataka Kannada
Thursday, May 02 2024
ಮಂಗಳೂರು

ಬೆಳ್ತಂಗಡಿ: ಸಮಾನ ಅಂಕ ಪಡೆದು ಅವಳಿ ಸಹೋದರಿಯರಿಂದ ವಿಶೇಷ ಸಾಧನೆ

Belthangady: Twin textile sisters achieve special feat by securing equal marks
Photo Credit : News Kannada

ಬೆಳ್ತಂಗಡಿ:   ದ. ಕ ಜಿಲ್ಲೆಯಲ್ಲಿ ಅವಳಿ ಸಹೋದರಿಯರು ವಿಶೇಷ ಸಾಧನೆ ಮಾಡಿದ್ದಾರೆ. ಈ ಅವಳಿ ಹೆಣ್ಣು ಮಕ್ಕಳು ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ  ಪಡೆದು ಎಲ್ಲರು ನಿಬ್ಬೆರಗಾಗುವಂತಹ ಸಾಧನೆ ಗೈದಿದ್ದಾರೆ.

ದ. ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿ ಉಮೇಶ್ ಗೌಡ ಪಿ.ಎಚ್. ‌ಮತ್ತು ಗೀತಾ ದಂಪತಿಯ  ಪುತ್ರಿಯರಾದ ಸ್ಪಂದನ – ಸ್ಪರ್ಶ ಎಂಬ ಅವಳಿ ಸಹೋದರಿಯರು, ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದು 600ರಲ್ಲಿ 594 ಅಂಕ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಅವಳಿ ಸಹೋದರಿಯರಿಗೆ ಸಮಾನ ಅಂಕ                                                                                                                         ಅವಳಿ ಸಹೋದರಿಯರು ಅಂಕಗಳಿಕೆಯಲ್ಲು ಸಮಾನತೆ ತೋರಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಉಜಿರೆ ಎಸ್‌ ಡಿಎಂ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಸ್ಪರ್ಶಾ ಮತ್ತು ಸ್ಪಂದನ ತಲಾ 594 ಸಮಾನ ಅಂಕಗಳೊಂದಿಗೆ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪುಲ್ಲಾಜೆ ಪುಣ್ಕೆದಡಿ ನಿವಾಸಿ ಉಮೇಶಗೌಡ ಪಿ.ಎಚ್. ಹಾಗೂ ಗೀತಾ ದಂಪತಿಯ ಅವಳಿ ಮಕ್ಕಳಾದ ಸ್ಪರ್ಶಾ ಹಾಗೂ ಸ್ಪಂದನಾ ಎಸ್ ಎಸ್ ಎಲ್ ಸಿ ಯನ್ನು ಕುಳಾಯಿಯ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಪರ್ಶಾ 623 ಹಾಗೂ ಸ್ಪಂದನಾ 619 ಉತ್ತಮ ಅಂಕಗಳೊಂದಿಗೆ ಪೂರ್ಣಗೊಳಿಸಿ ಬಳಿಕ ಪಿಯುಸಿ ವಿದ್ಯಾಭ್ಯಾಸವನ್ನು ಉಜಿರೆಯ ಎಸ್ ಡಿ ಎಂ ಪಿಯು ಕಾಲೇಜಿನಲ್ಲಿ ಮುಂದುವರೆಸಿದರು.

30 ಕಿಮೀ ದೂರ
ನೆರಿಯದಿಂದ ಉಜಿರೆಗೆ 30 ಕಿ.ಮೀ ಪ್ರಯಾಣಿಸಬೇಕು ಇವರಿಬ್ಬರು ಪ್ರತಿದಿನ ನೆರಿಯದಿಂದ ಕೆ ಎಸ್ ಆರ್ ಟಿ ಸಿ ಬಸ್ ಮೂಲಕ ಕಾಲೇಜಿಗೆ ಹೋಗುತ್ತಿದ್ದರು. ದಿನವೊಂದಕ್ಕೆ 60 ಕಿಮೀ ಬಸ್ ಪ್ರಯಾಣ ಜತೆಗೆ ಮನೆಯಿಂದ ಬಸ್ ಸಿಗುವ ಸ್ಥಳ ತಲುಪಲು 2ಕಿಮೀ.ದೂರ ಕಾಲ್ನಡಿಗೆ ಮೂಲಕ ಸಾಗಬೇಕು. ಸಣ್ಣ ಕೃಷಿಕರಾಗಿರುವ ಇವರ ಪೋಷಕರು ಒಂದಿಷ್ಟು ಅಡಕೆ ತೋಟವನ್ನು ಹೊಂದಿದ್ದಾರೆ. ಕೃಷಿ ಹಿನ್ನೆಲೆಯುಳ್ಳ ಕುಟುಂಬದ ಮಕ್ಕಳಾಗಿರುವ ಅವಳಿ ಸಹೋದರಿಯರು ತಮ್ಮ ವಿದ್ಯಾಭ್ಯಾಸದ ಜತೆಗೆ ಕೃಷಿ ಕೆಲಸ, ಹೈನುಗಾರಿಕೆಗು ಸಹಕಾರ ನೀಡುತ್ತಾರೆ. ಮನೆ ಕೆಲಸದಲ್ಲಿ ತಾಯಿಗೂ ನೆರವಾಗುತ್ತಾರೆ. ಈ ಕೆಲಸಗಳ ಜತೆ ಇವರು ಓದಿನಲೂ ಚುರುಕಾಗಿದ್ದು ಅವಳಿ ಸಹೋದರಿಯರು ಒಂದೇ ರೀತಿಯ ಅಂಕಗಳನ್ನು ಪಡೆದಿದ್ದಾರೆ.

ಪಡೆದ ಅಂಕಗಳು
ಸ್ಪರ್ಶಾ: ಇಂಗ್ಲಿಷ್ 97, ಹಿಂದಿ 98, ಬಿಸಿನೆಸ್ 100, ಅಕೌಂಟೆನ್ಸಿ 100, ಇಕನಾಮಿಕ್ಸ್ 99, ಕಂಪ್ಯೂಟರ್ ಸೈನ್ಸ್ 100.
ಸ್ಪಂದನಾ: ಇಂಗ್ಲಿಷ್ 98,ಹಿಂದಿ 98, ಬಿಸಿನೆಸ್ 100, ಅಕೌಂಟೆನ್ಸಿ 100, ಇಕನಾಮಿಕ್ಸ್ 98, ಕಂಪ್ಯೂಟರ್ ಸೈನ್ಸ್ 100.

“ಪೋಷಕರು ಹಾಗೂ ಉಪನ್ಯಾಸಕರು ನಮಗೆ ಉತ್ತಮ ಬೆಂಬಲ ನೀಡಿದ್ದಾರೆ. ಯಾವತ್ತು ಹೆಚ್ಚು ಓದುವಂತೆ ಒತ್ತಡ ಹೇರಿಲ್ಲ. ಬೆಳಿಗ್ಗೆ 4:30 ರಿಂದ 6:30ರ ತನಕ ಹಾಗೂ ಸಂಜೆ 7ರಿಂದ ರಾತ್ರಿ 10ರ ತನಕ ಅಭ್ಯಾಸ ಮಾಡುತ್ತಿದ್ದೇವೆ. ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಲು ಮನೆಯಿಂದ ಬೆಳಿಗ್ಗೆ 7:30ಕ್ಕೆ ಹೊರಟರೆ ಸಂಜೆ 6ರ ಆಸು ಪಾಸು ವಾಪಸು ಬರುತ್ತಿದ್ದೆವು. ಮುಂದೆ ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಬಿಸಿಎ ವಿದ್ಯಾಭ್ಯಾಸ ಮಾಡಲು ನಿರ್ಧರಿಸಿದ್ದೇವೆ.” -ಸ್ಪರ್ಶಾ ಮತ್ತು ಸ್ಪಂದನಾ, ಅವಳಿ ಸಹೋದರಿಯರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು