ಬೆಳ್ತಂಗಡಿ: ಕೇಂದ್ರ ಸರಕಾರದಿಂದ ರಾಜ್ಯ ಸಭೆಗೆ ನಾಮನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರನ್ನು ಶ್ರೀ ಕ್ಷೇತ್ರ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಪರವಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರು ಪ್ಪಾಡಿ ಅವರು ಶಾಲು ಹೊದಿಸಿ, ಮಾಲಾರ್ಪಣೆಗೈದು ಸಮ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಟ್ರಸ್ಟಿಗಳಾದ ಪುರಂದರ ಕಡೀರ್ , ನವೀನ್ ಕಜೆ ,ಯಶೋದಾ ,ಬಾಲಕೃಷ್ಣ ನೈಮಿಷ ಹಾಗು ಜಯರಾಮ ನೆಲ್ಲಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.