News Karnataka Kannada
Thursday, May 02 2024
ಮಂಗಳೂರು

ಬೆಳ್ತಂಗಡಿ: ಪ್ಲಾಸ್ಟಿಕ್ ಬಳಕೆ ಕಡಿವಾಣಕ್ಕೆ ಹಸಿರು ತಪಸ್ಸು ಸಂಘಟನೆಯ ಮನವಿ

Belthangady: Green Tapassu Sangathan appeals to curb the use of plastic
Photo Credit : By Author

ಬೆಳ್ತಂಗಡಿ: ಪ್ಲಾಸ್ಟಿಕ್ ನಿಷೇಧದ ಕುರಿತು ಸರಕಾರದ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸುತ್ತಿದ್ದರು ಅವು ಅನುಷ್ಠಾನಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಡಾಜೆಯ ಹಸಿರು ತಪಸ್ಸು ಸಂಘಟನೆ ಮುಂಡಾಜೆ ಹಾಗೂ ಕಲ್ಮಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇಟೆ ಹಾಗೂ ಇನ್ನಿತರ ಪರಿಸರಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದೆ.

ಈ ಬಗ್ಗೆ ಸೋಮವಾರ ಮುಂಡಾಜೆ ಗ್ರಾಪಂ ಸಭಾಭವನದಲ್ಲಿ ವರ್ತಕರ ಹಾಗೂ ಊರವರ ಸಭೆಯು ಪಂಚಾಯಿತಿ ಅಧ್ಯಕ್ಷ ರಂಜಿನಿರವಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಪ್ಲಾಸ್ಟಿಕ್ ಬದಲು ಬಟ್ಟೆ ಚೀಲಗಳನ್ನು ಬಳಸಲು ಸೂಚನೆ ನೀಡಲಾಯಿತು. ಈ ಬಗ್ಗೆ ಈಗಾಗಲೇ ಬಟ್ಟೆಯನ್ನು ಖರೀರಿಸಿದ್ದು ಸ್ವಸಹಾಯ ಸಂಘ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ಅದರಿಂದ ಚೀಲಗಳನ್ನು ತಯಾರಿಸುವುದು, ಅದನ್ನು ವರ್ತಕರು ಖರೀದಿಸಬೇಕೆಂದು ಸಭೆಯಲ್ಲಿ ತಿಳಿಸಲಾಯಿತು.

ಗ್ರಾಮದಲ್ಲಿ ತ್ಯಾಜ್ಯ ಘಟಕ ಇಲ್ಲದ ಕಾರಣ ತ್ಯಾಜ್ಯ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿದ್ದು ಶೀಘ್ರ ತ್ಯಾಜ್ಯ ಘಟಕ ನಿರ್ಮಿಸುವ ಬಗ್ಗೆ ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮದ ಪೇಟೆ ಪ್ರದೇಶದ ಅಂಗಡಿಗಳಿಗೆ ಪಂಚಾಯಿತಿ ನಿಯೋಗ ತೆರಳಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಬಗ್ಗೆ ನಿರ್ಣಯಿಸಲಾಯಿತು.

ಮುಂಡಾಜೆ-ಕಲ್ಮಂಜ ಮೂಲಕ ಧರ್ಮಸ್ಥಳಕ್ಕೆ ತೆರಳುವ ರಸ್ತೆ ಬದಿ ಅತಿ ಹೆಚ್ಚಿನ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಬಿದ್ದಿದ್ದು ಇದು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಗ್ರಾಮದ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಛತೆ ಕಾರ್ಯಕ್ರಮ ನೆರವೇರಿಸಿ ಈ ಕಸವನ್ನು ವಿಲೇವಾರಿ ಮಾಡಲಾಗುವುದೆಂದು ಪಿಡಿಒ ಭರವಸೆ ನೀಡಿದರು.

ಹಸಿರು ತಪಸ್ಸು ಸಂಘಟನೆಯ ಸತೀಶ್ ಭಟ್,ನಾರಾಯಣ ಫಡಕೆ, ಸಚಿನ್ ಭಿಡೆ, ಗಜಾನನ ವಝೆ, ಶಶಾಂಕ ಮರಾಠೆ, ವಾಸುದೇವ ತಾಮನ್ಕರ್,ಶಿವಣ್ಣ, ವರ್ತಕರ ಸಂಘದ ವಿ.ಜೆ.ಅಬ್ರಹಾಂ, ವಿಶ್ವನಾಥ ನಾಯ್ಕ್, ಸೀತಾರಾಮ ಶೆಟ್ಟಿ, ವಿಘ್ನೇಶ್ ಪ್ರಭು, ಬಾಲಚಂದ್ರ ನಾಯಕ್ ಚಂದ್ರಶೇಖರ, ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ನಾಮದೇವ ರಾವ್, ಬಾಬು ಪೂಜಾರಿ, ಸೆಬಾಸ್ಟಿಯನ್, ವಿಷ್ಣು ಪಟವರ್ಧನ್,ಗ್ರಾಪಂ ಸದಸ್ಯರು,ಮತ್ತಿತರರು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು.

ಪಿಡಿಒ ಸುಮಾ ಎ.ಎಸ್.ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ದಿಶಾ ಪಟವರ್ಧನ್ ವಂದಿಸಿದರು.

“ಮುಂಡಾಜೆ ಗ್ರಾಮದ ಎರಡು,ಮೂರು ಸ್ಥಳಗಳಲ್ಲಿ ಈ ಹಿಂದೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಸ್ಥಳ ಗುರುತಿಸಿದಾಗ ಆಕ್ಷೇಪಣೆಗಳು ಬಂದ ಹಿನ್ನೆಲೆಯಲ್ಲಿ,ಈಗ ಹೊಸದಾಗಿ ಜಾಗ ಗುರುತಿಸಲಾಗಿದೆ. ಇದರ ಕಡತ ತಾಲೂಕು ಕಚೇರಿಯಲ್ಲಿದ್ದು ಆದೇಶ ಬಂದ ತಕ್ಷಣ ಕೆಲಸ ಆರಂಭವಾಗಲಿದೆ. ಅನುದಾನ ಈಗಾಗಲೇ ಮಂಜೂರಾಗಿದೆ. ಕಸ ವಿಲೇವಾರಿಗೆ ಬೇಕಾದ ವಾಹನವನ್ನು ಕೂಡ ಖರೀದಿ ಮಾಡಲಾಗಿದೆ”
– ರಂಜಿನಿ ರವಿ, ಅಧ್ಯಕ್ಷರು, ಗ್ರಾ.ಪಂ.ಮುಂಡಾಜೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು