News Karnataka Kannada
Monday, April 29 2024
ಮಂಗಳೂರು

ಹಿಂದೂ ದೇವರಿಗೆ, ಹಿಂದುಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ, ವಲಯರಾಣ್ಯಾದಿಕಾರಿ ಅಮಾನತಿಗೆ ಒತ್ತಾಯ

Belthangady: Demand for suspension of Zonal Forest Officer, hurting religious sentiments of Hindus, Hindu deity
Photo Credit : By Author

ಬೆಳ್ತಂಗಡಿ: ಉಪ್ಪಿನಂಗಡಿ ವಲಯಾರಣ್ಯಾದಿಕಾರಿ ಸಂಜೀವ ಪೂಜಾರಿ ಎಂಬುವರು ಸಾಮಾಜಿಕ ಜಾಲಾತಾಣದಲ್ಲಿ ಹಿಂದೂ ದೇವರಾದ ಆಂಜನೇಯ ಸ್ವಾಮಿಯ ಬಗ್ಗೆ ಕೀಳು ಭಾಷೆ ಬಳಕೆ,ಭಜನೆಯ ಬಗ್ಗೆ ತಪ್ಪು ಸಂದೇಶ, ಪ್ರಧಾನಿ, ರಾಷ್ಡಪತಿಗಳ ಸಾವಿನ ಬಗ್ಗೆ ಬರಹ, ಜಾತಿಗಳ ಮಧ್ಯೆ ಒಡಕುಂಟು ಮಾಡುವ, ದರ್ಮಗಳ ಮಧ್ಯೆ ದ್ವೇಷ ಹುಟ್ಟುವ ಸಂದೇಶವನ್ನು ರವಾನಿಸುತ್ತಿದ್ದು ಈತನನ್ನು ತಕ್ಷಣ ಬಂಧಿಸಬೇಕು, ಇಲಾಖೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಗುರುವಾರ ವಿಶ್ವಹಿಂದು ಪರಿಷತ್, ಭಜರಂಗದಳ ಪೋಲೀಸ್ ಠಾಣೆ ಮುಂದೆ ಭಜನೆ ಹಾಡುವ‌ ಮೂಲಕ ಪ್ರತಿಭಟನೆ ನಡೆಸಿದರು.

ವಿಶ್ವ ಹಿಂದೂಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ ಸಂಜೀವ ಪೂಜಾರಿ ವಿರುದ್ದ ಪ್ರಕರಣ ದಾಖಲಾದರು ಬಂದನ ಅಗಿಲ್ಲ.ಅರಣ್ಯ ಇಲಾಖೆ ಮತ್ರು ಪೋಲೀಸ್ ಇಲಾಖೆ ಇವನ ರಕ್ಷಣೆಗೆ ನಿಂತಿದೆ. ಹಿಂದೂ ಸಮಾಜಕ್ಜೆ,ಹಿಂದುಗಳ ಭಾವನೆಗೆ, ಹಿಂದೂ ದೇವರಿಗೆ ಅವಮಾನಿಸುವ ಈತನ ನೀಚ ಕ್ರುತ್ಯವನ್ನು ಇಡೀ ಹಿಂದು ಸಮಾಜ ಖಂಡಿಸುತ್ತದೆ. ತಕ್ಷಣ ಈತನ ಬಂದನ ಮಾಡದಿದ್ದಲ್ಲಿ ಜಿಲ್ಲೆಯ ಸುಮಾರು ಹತ್ತು ಸಾವಿರಕ್ಕೂ ಅದಿಕ ಭಜಕರು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶಾಸಕ ಯು ಟಿ ಖಾದರ್ ರವರು ಈತನ ಪರ ಮಾತನಾಡುತ್ತಾರೆ. ಖಾದರ್ ರವರೇ ನಿಮ್ಮ ದರ್ಮದ ಬಗ್ಗೆ ಅವಹೇಳನ ಮಾಡಿದರೆ ನೀವು ಸುಮ್ಮನಿರುತ್ತಿದ್ದಿರೇ. ಹಿಂದುಗಳ ಭಾವನೆಗಳ ದಕ್ಕೆ ಗೆ ನಿಮ್ಮ ಬೆಂಬಲ ಇದ್ದರೆ ಮುಂದಿನ ಚುಣಾವಣೆಯಲ್ಲಿ ಹಿಂದುಗಳ ಶಕ್ತಿ ಏನು ಎಂಬುದನ್ನು ತೊರಿಸಲಿದ್ದಾರೆ ಎಂದರು. ಬಳಿಕ ಕ್ರಮ ಕೈಗೊಳ್ಳುವಂತೆ ಎಸ್ ಐ ನಂದುಮಾರ್ ಮೂಲಕ ಮೇಲಾದಿಕಾರಿಗಳಿಗೆ ಮನವಿ ನೀಡಿದರು.

ಪ್ರತಿಭಟನೆಯಲ್ಲಿ ಭಜರಂಗದಳದ ಅಖಾಡ ಪ್ರಮುಖ್ ಗಣೇಸ್ ಕಳೆಂಜ, ವಿ ಹೆಚ್ ಪಿ ಪ್ರಖಂಡ ಅದ್ಯಕ್ಷ ದಿನೇಶ್ ಚಾರ್ಮಾಡಿ, ಸಂಯೋಜಕರಾದ ಸಂತೋಷ್ ಅತ್ತಾಜೆ, ಮೋಹನ್ ಬೆಳ್ತಂಗಡಿ, ರವೀಶ್ ಧರ್ಮಸ್ಥಳ, ಸುದೀರ್ ಚಾರ್ಮಾಡಿ, ರಿಜೇಶ್ ಗುರುವಾಯನಕೆರೆ, ಜಗದೀಶ್ ಕನ್ನಾಜೆ, ಭಜನಾ ಪರಿಷತ್ ಮಾಜಿ ಅದ್ಯಕ್ಷ ಮಂಜುನಾಥ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು