ಬೆಳ್ತಂಗಡಿ: ಇಲ್ಲಿನ ಕಾಲೇಜು ರಸ್ತೆಯ ಫ್ಯಾನ್ಸಿ ಅಂಗಡಿ ಹಾಗೂ ಬಟ್ಟೆ ಅಂಗಡಿವೊಂದರ ಬೀಗ ಒಡೆದು ಕಳ್ಳತನ ನಡೆಸಿದ ಕುರಿತು ತಿಳಿದು ಬಂದಿದೆ.
ಫ್ಯಾನ್ಸಿ ಅಂಗಡಿಯಿಂದ ರೂ.9,000 ನಗದು ಹಾಗೂ ಬಟ್ಟೆ ಅಂಗಡಿಯಿಂದ ಚಿಲ್ಲರೆ ಹಣವನ್ನು ಕಳ್ಳರು ದೋಚಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಅಹರ್ನಿಶಿ ಜನ,ವಾಹನ ಓಡಾಟವಿರುವ ಪೇಟೆಯ ಹೃದಯ ಭಾಗದಲ್ಲೆ ಕಳ್ಳತನ ನಡೆದಿರುವುದಕ್ಕೆ ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ಆತಂಕ ವ್ಯಕ್ತಪಡಿಸಿದ್ದಾರೆ.