News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ಚುನಾವಣೆ, ಟಿಕೆಟ್ ಪಡೆಯಲು ಲಾಬಿ ನಡೆಸುತ್ತಿರುವ ನಾಯಕರು

Leaders lobbying for tickets, elections
Photo Credit : News Kannada

ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ನಾಯಕರು ಟಿಕೆಟ್ ಪಡೆಯಲು ಲಾಬಿ ನಡೆಸುತ್ತಿದ್ದಾರೆ. ಮಂಗಳೂರಿನ ಕಾಂಗ್ರೆಸ್ ನಾಯಕರು, ಹಿರಿಯ ನಾಯಕ  ಜನಾರ್ದನ ಪೂಜಾರಿ ಅವರ ಮೂಲಕ ಟಿಕೆಟಿಗಾಗಿ ಕಸರತ್ತು ನಡೆಸಲು ಆರಂಭಿಸಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಶಿತ್ ಪಿರೇರಾ, ಜನಾರ್ದನ ಪೂಜಾರಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕರೆ ಮಾಡಿಸಿದ ವಿಡಿಯೋ ಲೀಕ್ ಆಗಿದೆ.

ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಬಂಟ್ವಾಳದ ಮನೆಯಲ್ಲಿ ಭೇಟಿ ಮಾಡಿದ ಆಶಿತ್ ಪಿರೇರಾ, ಅವರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕರೆ ಮಾಡಿಸಿದ್ದಾರೆ. ಮಾಜಿ ಶಾಸಕ ಜೆ.ಆರ್.ಲೋಬೋ ಬದಲು ತನಗೆ ಟಿಕೆಟ್ ಕೊಡಿಸುವಂತೆ ಜನಾರ್ದನ ಪೂಜಾರಿ ಮೂಳಕ ಒತ್ತಡ ತಂತ್ರ ಮಾಡಿದ್ದಾರೆ. ಡಿಕೆಶಿಗೆ ಕರೆ ಮಾಡಿದ ಪೂಜಾರಿ, ‘ನನ್ನಲ್ಲಿಗೆ ಯೂತ್ ಕಾಂಗ್ರೆಸ್ ಲೀಡರ್ ಆಶೀತ್ ಪಿರೇರಾ ಬಂದಿದಾರೆ. ಅವರಿಗೆ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಏನಾದ್ರೂ ಸಹಾಯ ಮಾಡಲು ಸಾಧ್ಯ ಉಂಟಾ? ನೀವೇ ಸುಧಾರಿಸಿ, ಜೆ.ಆರ್.ಲೋಬೋ ಸ್ಥಾನಕ್ಕೆ, ಆಶೀತ್ ಪಿರೇರಾ ಕೂಡ ಕ್ರಿಶ್ಚಿಯನ್ ಇದ್ದಾರೆ ಎಂದು ಹೇಳುವುದು ವಿಡಿಯೋದಲ್ಲಿದೆ. ಡಿಕೆಶಿಗೆ ಕರೆ ಮಾಡಿ ವಯೋವೃದ್ಧ ಜನಾರ್ದನ ಪೂಜಾರಿ, ಆಶಿತ್ ಪಿರೇರಾ ಪರ ಮಾತನಾಡಿದ ವಿಡಿಯೋ ಲೀಕ್ ಆಗಿದೆ.

85 ವರ್ಷದ ಹಿರಿಯರಾದ ಜನಾರ್ದನ ಪೂಜಾರಿ ಅವರನ್ನು ಕರಾವಳಿಯ ಕಾಂಗ್ರೆಸ್ ನಾಯಕರು ತಮ್ಮ ಟಿಕೆಟ್ ಲಾಬಿಗಾಗಿ ದುರ್ಬಳಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದೇ ರೀತಿ ಹಲವರು ಕರೆ ಮಾಡಿಸಿದ್ದಾರೆ ಎನ್ನಲಾಗುತ್ತಿದ್ದು ಈಗ ಆಶಿತ್ ಪಿರೇರಾ ವಿಡಿಯೋ ಹೊರಬಂದಿದೆ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಮಾಜಿ ಶಾಸಕ ಜೆ.ಆರ್.ಲೋಬೋ ಮತ್ತು ಐವನ್ ಡಿಸೋಜಾ ಪ್ರಬಲ ಲಾಬಿ ನಡೆಸಿದ್ದಾರೆ. ಹಿಂದುತ್ವದ ಅಸ್ತ್ರ ಎದುರಿಸಲು ಬಿಲ್ಲವರಿಗೆ ಟಿಕೆಟ್ ಕೊಟ್ಟರೆ ಗೆಲುವು ಸಾಧ್ಯ ಎನ್ನುವ ಲಾಬಿಯನ್ನೂ ಕಾಂಗ್ರೆಸಿನ ಹಿಂದು ನಾಯಕರು ಮಾಡಿದ್ದಾರೆ. ಆದರೆ ಹಿಂದಿನಿಂದಲೂ ಮಂಗಳೂರಿನ ಒಂದು ಕ್ಷೇತ್ರವನ್ನು ಕಾಂಗ್ರೆಸ್ ಕ್ರಿಶ್ಚಿಯನ್ ಸಮುದಾಯಕ್ಕೆ ಮೀಸಲಿಟ್ಟಿತ್ತು.

ಚುನಾವಣೆ ಎಂದರೆ ಸರ್ವೇ ಸಾಮಾನ್ಯವಾಗಿ ತಾವು ಬೆಂಬಲಿಗಾರಾಗಿ ಕಾರ್ಯ ನಿರ್ವಹಿಸಿರುವ ಪಕ್ಷದಲ್ಲಿ ತಾನೂ ಒಬ್ಬ ಅಭ್ಯರ್ತಿಯಾಗಿ ಟಿಕೇಟ್ ಪಡೆಯಲು ಉತ್ಸಕರಾಗಿರುತ್ತಾರೆ. ಇಂತಹದೊಂದು ಪ್ರಯತ್ನ ಕಾಂಗ್ರೇಸ್ ಪಕ್ಷದಲ್ಲಿಯೂ ನಡೆದಿದ್ದು ಅದೀಗ ವಿಡಿಯೋದ ಮೂಲಕ ಎಲ್ಲ ಕಡೆ ವೈರಲ್ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು