News Karnataka Kannada
Thursday, May 09 2024
ಮಂಗಳೂರು

ಬಂಟ್ವಾಳ: ಎನ್ಐಎ ತನಿಖೆ ಪಾರದರ್ಶಕವಾಗಿರಲಿ- ರಿಯಾಝ್ ಫರಂಗಿಪೇಟೆ

Bantwal: NIA probe should be transparent: Riyaz Farangipet
Photo Credit : By Author

ಬಂಟ್ವಾಳ: ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ತನಿಖಾ ಸಂಸ್ಥೆ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದೆ, ಎನ್ ಐ ಎ ತನಿಖೆ ಪಾರದರ್ಶಕ ವಾಗಿರಲಿ ಎನ್ ಐ ಎ ದಾಳಿ ಬಳಿಕ ಮಾಧ್ಯಮಗಳಿಗೆ ರಿಯಾಝ್ ಫರಂಗಿಪೇಟೆ ಹೇಳಿಕೆ ನೀಡಿದ್ದಾರೆ.

ಎಸ್ ಡಿ ಪಿ ಐ ಮುಖಂಡ ರಿಯಾಝ್ ಫರಂಗಿಪೇಟೆ ಮನೆ ಮೇಲೆ ಎನ್ ಐ ಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಪೋಲೀಸ್ ತಂಡ ಮರಳಿದ ಬಳಿಕ ಮಾಧ್ಯಮ ಹೇಳಿಕೆ ನೀಡಿದರು. ಬಿಹಾರ ಪ್ರಕರಣವೊಂದರ ವಿಚಾರದಲ್ಲಿ ತನಿಖೆ ಮಾಡಿದ ವೇಳೆ ನನ್ನ ಮತ್ತು ನನ್ನ ಪತ್ನಿಯ ಮೊಬೈಲ್ ನ್ನು ಎನ್ ಐ ಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಜುಲೈ ಪ್ರಕರಣ ಸಂಬಂಧಿಸಿದಂತೆ ಎನ್ ಐ ಅಧಿಕಾರಿಗಳು ಹಲವು ಪ್ರಶ್ನೆ ಕೇಳಿದ್ದಾರೆ. ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಎನ್ಐಎ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆ ಕೇಳಿತ್ತು. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಗಡಿಬಿಡಿ ಮಾಡುವ ಊಹಾಪೋಹದಿಂದ ಬಿಹಾರದಲ್ಲಿ ಪಕ್ಷದ ಐದು ಮಂದಿಯನ್ನು ಬಂಧನ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಪೂರಕ ಪರಿಶೀಲನೆ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನೂ ಬಂಧನ ಮಾಡಿದ್ದರು. 2047 ಇಸ್ಲಾಂ ರಾಷ್ಟ್ರ ಸಂಬಂಧ ಪಟ್ಟಂತೆ ಫೌಂಡೇಶನ್ ಬುಕ್ ಲೇಟ್ ಬಿಡುಗಡೆ ಮಾಡಿತ್ತು. ಈ ಬಗ್ಗೆ ಸಂಬಂಧಪಟ್ಟ ಸಂಘಟನೆ ಹೇಳಿಕೆ ನೀಡಿದೆ
ಪಿಎಫ್ ಐ ಕೂಡಾ ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಉ.ಪ್ರದೇಶದಲ್ಲಿ ಆದ ಬುಕ್ ಲೇಟ್ ನ ಒಂದು ಕಾಪಿಯನ್ನು ಈ ಬುಕ್ ಲೇಟ್ ಗೆ ಇಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದೆಯೂ ತನಿಖೆಗೆ ಸಹಕಾರ ನೀಡುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ನಾನು ಬಿಹಾರದಲ್ಲಿ ಎಸ್ಡಿಪಿಐ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದೇನೆ. ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಲ್ಲಿರೋದರಿಂದ ಬಿಹಾರ ರಾಜ್ಯ ಸಮಿತಿ ಮೀಟಿಂಗ್ ಭಾಗವಹಿಸುತ್ತಿದ್ದೆ ಎಂದು ಅವರು ಸ್ಪಷ್ಟಪಡಿಸಿದರು. ಎಲ್ಲಾ ತನಿಖೆಗೆ ತಾನು ಹಾಗೂ ಪಕ್ಷ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಎನ್.ಐ.ಎ ಕೇಂದ್ರ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದೆ, ಕೇಂದ್ರ ಸರ್ಕಾರ ಪ್ರೇರಿತವಾಗಿ ಈ ಕಾರ್ಯ ಮಾಡಲಾಗಿತ್ತು ಎಂದು ಅವರು ಆರೋಪ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು