News Karnataka Kannada
Tuesday, April 23 2024
Cricket
ಮಂಗಳೂರು

ಬಂಟ್ವಾಳ: ಮರ ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಚಾರ ಎಂದ ಶಾಸಕ ರಾಜೇಶ್ ನಾಯಕ್

Bantwal: Mla Rajesh Nayak said that he is happy to be involved in the work of planting trees.
Photo Credit : By Author

ಬಂಟ್ವಾಳ: ಅರಣ್ಯ ನಾಶದಿಂದ ಮಾನವಕುಲಕ್ಕೆ ಅಪಾಯವಿದೆ ಎನ್ನುವ ಅರಿವು ಜನರಲ್ಲಿ ಮೂಡುತ್ತಿದೆ, ಗಿಡ ನೆಡುವುದು ಅರಣ್ಯ ಇಲಾಖೆಯ ಕೆಲಸ ಎನ್ನುವ ಮನೋಭಾವ ಕೆಲವರಲ್ಲಿತ್ತು ಆದರೆ ಇದೀಗ ಲಯನ್ಸ್ನಂತಹ ಸಂಘ ಸಂಸ್ಥೆಗಳು ಕೂಡ ಅರಣ್ಯ ಇಲಾಖೆಯ ಜೊತೆಗೂಡಿ ಮರಗಳನ್ನು ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಚಾರ ಎಂದು ಶಾಸಕ ರಾಜೇಶ್ ನಾಯಕ್ ಹೇಳಿದರು.

ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ ೩೧೭ ಡಿ ಮತ್ತು ಅರಣ್ಯ ಇಲಾಖೆ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಲಯನ್ಸ್ ಸಂಸ್ಥೆಯ ಸ್ಮೃತಿ ಯೋಜನೆಯಂಗವಾಗಿ ತಾಲೂಕಿನ ಕಾರಿಂಜ ಕ್ರಾಸ್ ವಗ್ಗದಿಂದ ಪುಂಜಾಲಕಟ್ಟೆವರೆಗಿನ ರಸ್ತೆ ಇಕ್ಕೆಲಗಳಲ್ಲಿ ದ್ವಿತೀಯ ಹಂತದ ಸಾಲು ಮರ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಭಿವೃದ್ಧಿ ಕಾರ್ಯಗಳು ನಡೆಯುವ ಸಂದರ್ಭದಲ್ಲಿ ಕೆಲವೊಂದು ಸಮಸ್ಯೆಗಳು ಜನರನ್ನು ಕಾಡುವುದು ಸಹಜ. ಆದರೆ ಅಂತಹ ಸಂದರ್ಭ ಸಹಕಾರ ನೀಡಿದಾಗ ಮುಂದೆ ಅದರಿಂದ ಜನರಿಗೆ ಹಲವಾರು ಪ್ರಯೋಜನಗಳು ಸಿಗಲಿದೆ ಎಂದು ತಿಳಿಸಿದರು.

ಲಯನ್ಸ್ ಸಂಸ್ಥೆಯಿಂದ ಹೊಸ ಹೊಸ ಯೋಜನೆಗಳು ಬಂಟ್ವಾಳಕ್ಕೆ ಸಿಗಲಿ ಎಂದು ಶುಭಹಾರೈಸಿದರು. ಲಯನ್ಸ್ ಜಿಲ್ಲಾ ಗವರ್ನರ್ ಎಸ್. ಸಂಜೀತ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ವರ್ಷ ಜಿಲ್ಲಾ ಗವರ್ನರ್ ವಸಂತ್‌ಕುಮಾರ್ ಶೆಟ್ಟಿ ಅವರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅದರ ಸ್ಪೂರ್ತಿ ಪಡೆದು ಈ ವರ್ಷವೂ ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಈ ಎಲ್ಲಾ ಗಿಡಗಳನ್ನು ಸಂರಕ್ಷಿಸುವುದು ನಮ್ಮೆಲರ ಜವಬ್ದಾರಿ
ಎಂದು ತಿಳಿಸಿದರು

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಲಯನ್ಸ್ ಮಲ್ಟಿಪಲ್ ಜಿಲ್ಲೆಯ ಅಧ್ಯಕ್ಷ ವಸಂತ ಕುಮಾರ್ ಶೆಟ್ಟಿ, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಶುಭಕೋರಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೀರ್ತಿಕುಮಾರ್, ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಪ್ರಗತಿ ಶೆಟ್ಟಿ, ಎರಡನೇ ಉಪರಾಜ್ಯಪಾಲೇ ಭಾರತಿ ಬಿ.ಎಂ. ಕಾವಳಪಡೂರು ಗ್ರಾ.ಪಂಚಾಯತಿ ಅಧ್ಯಕ್ಷೆ ರಜನಿ ಭಾಗವಹಿಸಿದ್ದರು.

ಜಿಲ್ಲಾ ಸಂಪುಟ ಕಾರ್ಯದರ್ಶಿ ಅನಿಲ್ ಕುಮಾರ್ ಪಿ.ವಿ., ಜಿಲ್ಲಾ ಸಂಪುಟ ಕೋಶಾಧಿಕಾರಿ ರಾಮ್‌ಮೋಹನ್ ಆಳ್ವ, ಶಾಶ್ವತ ಯೋಜನೆ ಸಂಯೋಜಕ ಸಂತೋಷ್ ಕುಮಾರ್ ಶೆಟ್ಟಿ, ಪರಿಸರ ಸಂರಕ್ಷಣೆ ಸಂಯೋಜಕ ಮಾಧವ ಉಳ್ಳಾಲ್, ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಗ್ರಬೈಲು, ಜಿಲ್ಲಾ ರಾಜ್ಯಪಾಲರ ಸಂಯೋಜಕ ಶ್ರೀನಿವಾಸ ಪೂಜಾರಿ, ಬಂಟ್ವಾಳ ಲಯನ್ಸ್ ಕ್ಲಬ್ ಚುನಾಯಿತ ಅಧ್ಯಕ್ಷ ಉಮೇಶ್ ಆಚಾರ್, ತಪೋದನ್ ಶೆಟಿ, ಪ್ರಶಾಂತ್ ಪೈ, ಮನೋರಂಜನ್ ಕೆ. ಆರ್ ಮೊದಲಾದವರು
ಉಪಸ್ಥಿತರಿದ್ದರು.

ಪರಿಸರ ಸಂರಕ್ಷಣೆ ಜಿಲ್ಲಾಧ್ಯಕ್ಷೆ ಜಿ. ಪೂಜಾ ಪಿ. ಪೈ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು