News Karnataka Kannada
Thursday, May 09 2024
ಮಂಗಳೂರು

ಬಂಟ್ವಾಳ: ಅಧಿಕಾರಿಗಳು ಸರಿ ಇದ್ದರೆ ಪಟ್ಟಣ ಪಂಚಾಯತ್ ದಾರಿ ತಪ್ಪಲು ಸಾಧ್ಯವಿಲ್ಲ

Bantwal: If the authorities are right, the town panchayat cannot go astray: Shakuntala T. Shetty
Photo Credit : By Author

ಬಂಟ್ವಾಳ: ಅಧಿಕಾರಿಗಳು ಸರಿ ಇದ್ದರೆ ಪಟ್ಟಣ ಪಂಚಾಯತ್ ದಾರಿ ತಪ್ಪಲು ಸಾಧ್ಯವಿಲ್ಲ, ಬಡವರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ಸಹಕಾರ ನೀಡಿ ಕೆಲಸ ನಿರ್ವಹಿಸಬೇಕು. ವರ್ಕ್ ಆರ್ಡರ್ ಕೊಡದೆ ಯಾರೇ ಕೆಲಸ ಮಾಡಿಸಿದ್ದರು ಅದು ತಪ್ಪು. ರಾಜಕೀಯದವರ ಮಾತು ಕೇಳಿ ಅಧಿಕಾರಿಗಳು ಕೆಡಬೇಡಿ. ನೀವು ಬಡವರಿಗೆ ಮಾಡಿದ ಸಹಾಯಗಳು ನಿಮ್ಮನ್ನು ರಕ್ಷಿಸುತ್ತದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿರವರು ಹೇಳಿದರು.

ಅವರು ವಿಟ್ಲ ಪಟ್ಟಣ ಪಂಚಾಯತ್ ನ ದುರವಸ್ಥೆಯ ವಿರುದ್ಧ ವಿಟ್ಲ – ಉಪ್ಪಿನಗಂಡಿ ಬ್ಲಾಕ್ ಕಾಂಗ್ರೆಸ್ ಹಾಗೂ ವಿಟ್ಲ ನಗರ ಕಾಂಗ್ರೇಸ್ ವತಿಯಿಂದ ವಿಟ್ಲ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಮಸ್ಯೆಗಳ ಕೂಪವಾಗಿ ವಿಟ್ಲ ಪಟ್ಟಣ ಮಾರ್ಪಾಡಾಗಿದೆ. ಸಮಸ್ಯೆ ಯಿಂದ ಕಂಗಾಲಾದ ಜನ ಅವರ ಕಷ್ಟಗಳನ್ನು ನಮ್ಮಲ್ಲಿ ಹೇಳುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಅದ್ದರಿಂದ ಬಿಜೆಪಿಯ ಕಾರ್ಯವೈಖರಿ ಏನೆಂಬುದು ಜನರಿಗೆ ಮನದಟ್ಟಾಗಿದೆ. ಜನ ಏಳದಿದ್ದರೆ ಸರಕಾರ ಎಚ್ಚೆತ್ತುಕೊಳ್ಳುವುದಿಲ್ಲ. ವಿಟ್ಲ ದಲ್ಲಿ ಡಿಗ್ರಿ ಕಾಲೇಜು ಇದೆ, ಐಟಿಐ‌ ಇದೆ, ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣವಿದೆ, ಪಟ್ಟಣ ಪಂಚಾಯತ್ ಇದೆ ಎಲ್ಲವನ್ನು ತಂದದ್ದು ಕಾಂಗ್ರೆಸ್. ಇವರು ಮಾಡಿದ್ದು ಯಾವುದೂ ಇಲ್ಲ. ಎಲ್ಲವೂ ಕಾಂಗ್ರೆಸ್ ಆಳ್ವಿಕೆಯಲ್ಲಿ ಬಂದಾಗಿದೆ. ಸಿಂಗಲ್ ಸೈಟ್ ಗೆ ಬೇರೆ ಪಟ್ಟಣ ಪಂಚಾಯತ್ ನಲ್ಲಿ ಪರವಾನಿಗೆ ನೀಡಲಾಗುತ್ತಿದೆಯಾದರೂ ಇಲ್ಲಿನ ಅಧಿಕಾರಿಗಳು ನೀಡುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರೆಯುವವರು ಸ್ವಲ್ಪ ಯೋಚನೆ ಮಾಡಿ. ಮೊನ್ನೆ ಒಬ್ಬರು ನಮ್ಮ ಮಹಿಳಾ ಕಾರ್ಯಕರ್ತೆಯ ಬಗ್ಗೆ ಬರೆದ್ರು ಅದರಲ್ಲಿ ಶೆಟ್ರು ಒಳಗೆ ಹೊದ್ರು ಬಟ್ರು ನಿರೀಕ್ಷಣ ಜಾಮೀನಿನಲ್ಲಿ ಹೊರಬಂದ್ರು. ಯಾರೇ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ರೂ ಠಾಣೆಗೆ ದೂರು ನೀಡಿ. ಮುಂದಿನ ಆರು ತಿಂಗಳಲ್ಲಿ ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ.,ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ , ಪುತ್ತೂರು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು,ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿ ಕೊಲ್ಯ, ಡಿಸಿಸಿ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳಿಧರ್ ರೈ ಮಠಂತಬೆಟ್ಟು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಪಟ್ಟಣ ಪಂಚಾಯತ್ ಸದಸ್ಯರಾದ ವಿ ಕೆ ಎಂ ಅಶ್ರಫ್, ಲತಾ ವೇಣಿ, ಪದ್ಮಿನಿ, ಡಿಕಯ್ಯ ಸುರುಳಿಮುಲೆ, ಪಕ್ಷದ ಪ್ರಮುಖರಾದ ಸುಬ್ರಹ್ಮಣ್ಯ ಗೌಡ ಹಣಿಯೂರು, ಅಬ್ದುಲ್ ಖಾದ್ರಿ, ಎಂ.ಕೆ. ಮುಸಾ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಪ್ರಭಾಕರ್ ಭಟ್, ಜಗನ್ನಾಥ ಶೆಟ್ಟಿ ನಡುಮನೆ, ಕರೀಂ ಕುದ್ದುಪದವು, ಅಶ್ರಫ್ ಬಸ್ತಿಕಾರ್, ಅಬ್ದುಲ್ ರಹಿಮಾನ್ ಯುನಿಕ್, ನಝೀರ್ ಮಠ, ಮೋಹನ್ ಗುರ್ಜಿನಡ್ಕ, ಎಲ್ಯಣ್ಣ ಪೂಜಾರಿ ಮೈರುಂಡ, ರಾಮಣ್ಣ ಪಿಲಿಂಜ, ಅಬ್ದುಲ್ ರಹಿಮಾನ್ ಕುರಂಬಳ, ಶೈಕ್ ಅಲಿ, ರಾಜೀವ್ ಬಂಗೇರ, ಜಯಪ್ರಕಾಶ್ ಬದಿನಾರು, ಕೇಶವ ರೈ, ಅಭಿಷೇಕ್ ಬೆಳ್ಳಿಪ್ಪಾಡಿ, ಹಂಝ ವಿ ಕೆ ಎಂ, ಅಬ್ಬು ನವಗ್ರಾಮ, ಸುನಿತಾ ಕೋಟ್ಯಾನ್, ಸರೋಜ ಅಲಂಗಾರ್, ಸಂತೋಷ್ ಬಂಢಾರಿ, ಅಶೋಕ್ ಪೂಜಾರಿ, ಅಶೋಕ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು