News Karnataka Kannada
Friday, May 03 2024
ಮಂಗಳೂರು

ಬಂಟ್ವಾಳ: ಹೈಕೋರ್ಟ್‌ ನ್ಯಾಯಾಧೀಶ ದಿನೇಶ್‌ ಕುಮಾರ್‌ ಗೆ ಆರ್ಯಭಟ ಪ್ರಶಸ್ತಿ ಪ್ರದಾನ

Bantwal: Ganesh Manila conferred aryabhata award
Photo Credit : News Kannada

ಬಂಟ್ವಾಳ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಪಿ ಎಸ್ ದಿನೇಶ್ ಕುಮಾರ್ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೊಜ ಡಾಕ್ಟರ್ ಮಹೇಶ್ ಜೋಶಿ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಟಿಎಸ್ ನಾಗಭರಣ ಸೇರಿದಂತೆ ಗಣ್ಯರು ಸಮಾಜಸೇವಾ ವಿಭಾಗದಲ್ಲಿ ಸಾಧನೆಗೈದ ಗಣೇಶ್ ಮಾಣಿಲ ಇವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಣೇಶ್ ಕುಲಾಲ್ ಮಾಣಿಲ ಬಹರೇನ್ ದೇಶದಲ್ಲಿ ನೆಲೆಸಿದ್ದು ಗಲ್ಫ್ ದೇಶಗಳಲ್ಲಿ ಕೆಲಸ ಅರಸಿ ಬರುವ ಹಲವಾರು ಯುವಕರಿಗೆ ಉದ್ಯೋಗವನ್ನು ದೊರಕಿಸಿ ಕೊಟ್ಟಿದ್ದಾರೆ. ಸಂಕಷ್ಟದಲ್ಲಿರುವಂತ ಹಲವಾರು ಮಂದಿಗೆ ಸಹಾಯ ಹಸ್ತವನ್ನು ನೀಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಕೊರೋನಾ ಗೆಲ್ಲೋಣ ಕಾರ್ಯಕ್ರಮದ ಮೂಲಕ ಜನಜಾಗೃತಿಯನ್ನು ಮೂಡಿಸಿದ್ದಾರೆ.

ವಿದೇಶದಲ್ಲಿ ಕನ್ನಡ ತುಳು ಜಾಗೃತಿಯ ಪರವಾಗಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಲ್ಲಿ ಸಂಯೋಜಕರಾಗಿ ,ಹಾಗೂ, ಕುಲಾಲ ಸಮುದಾಯಕ್ಕೆ ಶಕ್ತಿಯಾದ ಗಣೇಶ್ ಕುಲಾಲ್ ಮಾಣಿಲ, ಬಹರೈನ್ ಕುಲಾಲ ಸಂಘದ ಅಧ್ಯಕ್ಷರಾಗಿ ಜನಪರ ಸೇವೆಗೈದವರು, ತುಳುನಾಡು ವಾರ್ತೆ ಪತ್ರಿಕೆಯ ಅಂತರ್ ರಾಷ್ಟ್ರೀಯ ಸಂಪಾದಕರಾಗಿದ್ದಾರೆ. ಅವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಅಂತರಾಷ್ಟ್ರೀಯ ಆರ್ಯಭಟ ಸಂಸ್ಥೆಯು 2023 ನೇ ಸಾಲಿನ ಆರ್ಯಭಟ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಆರ್ಯಭಟ ಪ್ರಶಸ್ತಿ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು ಕಳೆದ 48ಕ್ಕೂ ಹೆಚ್ಚು ವರ್ಷಗಳಲ್ಲಿ ನೂರಾರು ಸಾಧಕರ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು