News Karnataka Kannada
Thursday, May 09 2024
ಮಂಗಳೂರು

ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆಯಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

Janaspandana Sabha at Keravadi, lays foundation stone for works worth Rs 2 crore
Photo Credit : Pixabay

ಬಂಟ್ವಾಳ: ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ವಿಭಾಗೀಯ ಪತ್ರಾಗಾರ ಕಛೇರಿ, ಮೈಸೂರು ಹಾಗೂ ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇತಿಹಾಸ ವಿಭಾಗ ಇವರ ಸಹಯೋಗದಲ್ಲಿ “ಚಾರಿತ್ರಿಕ ದಾಖಲೆಗಳಲ್ಲಿ ದಕ್ಷಿಣ ಕನ್ನಡದ ಇತಿಹಾಸ” ಎನ್ನುವ ವಿಷಯದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣವು ನ.೩ ಮತ್ತು ೪ ರಂದು ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಗುರುವಾರ ಬೆಳಿಗ್ಗೆ ೧೧ಗಂಟೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ವಿಚಾರ ಸಂಕಿರಣ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಬೆಂಗಳೂರು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕ ಡಾ. ಗವಿಸಿದ್ದಯ್ಯ, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕ ಡಾ.ಜೆನ್ನಿಫರ್ ಲೊಲಿಟಾ ಸಿ.,ಮೈಸೂರು ವಿಭಾಗೀಯ ಪತ್ರಾಗಾರ ಕಛೇರಿಯ ಹಿರಿಯ ಸಹಾಯಕ ನಿರ್ದೇಶಕರು ಮಂಜುನಾಥ್ ಹೆಚ್.ಎಲ್, ಬಂಟ್ವಾಳ ತಹಶೀಲ್ದಾರ್ ಡಾ.ಸ್ಮಿತಾ ರಾಮು, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸಂದೇಶ್ ಶೆಟ್ಟಿ, ಕುವೆಂಪು ಭಾಷಾ ಭಾರತಿಯ ಮಾಜಿ ಅಧ್ಯಕ್ಷ ಡಾ. ಗಿರೀಶ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಾ.ಸುಂದ್ರೇಶ್ ಎನ್ ಅವರು ಸಂಚಾಲಕರಾಗಿ, ಹನುಮಂತಯ್ಯ ಜಿ.ಹೆಚ್. ರವರು ಸಹಸಂಚಾಲಕರಾಗಿ ಸಂಕಿರಣವನ್ನು ಮುನ್ನಡೆಸಲಿದ್ದಾರೆ, ಮೊದಲ ದಿನದ ಮೊದಲ ಗೋಷ್ಠಿಯಲ್ಲಿ “ಚಾರಿತ್ರಿಕ ದಾಖಲೆಗಳ ಸಂರಕ್ಷಣೆ ಮತ್ತು ಅದರ ಉಪಯೋಗ”ದ ಕುರಿತಾಗಿ ಮೈಸೂರು ವಿಭಾಗೀಯ ಪತ್ರಾಗಾರ ಕಛೇರಿಯ ಹಿರಿಯ ಸಹಾಯಕ ನಿರ್ದೇಶಕರು ಮಂಜುನಾಥ್ ಹೆಚ್.ಎಲ್ ಅವರು ವಿಷಯ ಮಂಡನೆ ನಡೆಸಲಿದ್ದು, ವಿನಯ ಎಂ.ಎಸ್ ಅವರು ಅಧ್ಯಕ್ಷತೆ ವಹಿಸುವರು., ಎರಡನೇ ಗೋಷ್ಠಿಯಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಸಹಪ್ರಾಧ್ಯಾಪಕರಾದ ಮೇಜರ್ ಡಾ.ರಾಘವ ಬಿ. ಯವರು “ಕೆನರಾ ಕೊಡಗು ದಂಗೆ ದಾಖಲೆಗಳಲ್ಲಿ ಇತಿಹಾಸ ಕಥನ” ಎಂಬ ವಿಷಯಲ್ಲಿ ಪ್ರಬಂಧ ಮಂಡಿಸಲಿದ್ದು, ಸಿದ್ಧಕಟ್ಟೆ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಹನುಮಂತಯ್ಯ ಜಿ. ಹೆಚ್. ಅವರು ಅಧ್ಯಕ್ಷತೆ ವಹಿಸುವರು, ಬಳಿಕ ನಡೆಯುವ ಪತ್ರಿಕೋದ್ಯಮಕ್ಕೆ ಕರಾವಳಿಯ(ದಕ್ಷಿಣ ಕನ್ನಡ)ಕೊಡುಗೆ ಎನ್ನುವ ವಿಷಯದಲ್ಲಿ ಪತ್ರಕರ್ತ, ರಂಗ ನಿರ್ದೇಶಕ ಮೌನೇಶ ವಿಶ್ವಕರ್ಮ ಅವರು ವಿಚಾರ ಮಂಡಿಸಲಿದ್ದಾರೆ, ಸಿದ್ಧಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಶೀನಪ್ಪ ಎನ್. ಅಧ್ಯಕ್ಷತೆ ವಹಿಸುವರು.

ನ.೪ ಶುಕ್ರವಾರ ಬೆಳಿಗ್ಗೆ ಮೊದಲ ಗೋಷ್ಠಿಯಲ್ಲಿ “ಚರಿತ್ರೆ ಕಟ್ಟುವಿಕೆಯಲ್ಲಿ ಪತ್ರಾಗಾರಗಳ ಕೊಡುಗೆ ಎನ್ನುವ ವಿಚಾರದಲ್ಲಿ ಮಂಗಳೂರು ರಥಬೀದಿಯ ಡಾ. ಪಿ.ದಯಾನಂದ ಪೈ- ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ನವೀನ್ ಕೊಣಾಜೆಯವರು ವಿಚಾರ ಮಂಡಿಸುವರು, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೃಷ್ಣಮೂರ್ತಿ ಎನ್. ಬಿ. ಅಧ್ಯಕ್ಷತೆ ವಹಿಸುವರು.

ಬಳಿಕ ನಡೆಯುವ “ತುಳುನಾಡಿನ ಇತಿಹಾಸ ನಿರೂಪಣೆಯಲ್ಲಿ ಮೌಖಿಕ ದಾಖಲೆಗಳ ಮಹತ್ವ”ಕುರಿತಾದ ವಿಚಾರಗೋಷ್ಠಿಯಲ್ಲಿ ಕಾಸರಗೋಡು ಸರಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರು ವಿಚಾರಮಂಡಿಸುವರು, ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ.ಗಿರೀಶ್ ಭಟ್ ಎ. ಯವರು ಅಧ್ಯಕ್ಷತೆ ವಹಿಸುವರು.

ಸಂಕಿರಣದ ಕೊನೆಯ ವಿಚಾರಗೋಷ್ಠಿಯಲ್ಲಿ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಸತೀಶ್ ಗಟ್ಟಿಯವರು ಬ್ರಿಟಿಷರ ದಾಖಲೆಗಳಲ್ಲಿ ತುಳುನಾಡಿನ ರೈತರ ಬಂಡಾಯ” ಎನ್ನುವ ವಿಷಯದಲ್ಲಿ ವಿಚಾರ ಮಂಡಿಸುವರು, ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮುನಿಕೃಷ್ಣಪ್ಪ ಕೆ.ಅಧ್ಯಕ್ಷತೆ ವಹಿಸುವರು.

ಸಂಜೆ ನಡೆಯುವ ಸಮಾರೋಪ ಸಮಾರಂಭವು ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿನಿರ್ದೇಶಕರ ಮಂಗಳೂರು ಪ್ರಾದೇಶಿಕ ಕಚೇರಿಯ ವಿಶೇಷ ಅಧಿಕಾರಿ ಪ್ರೊ.ದೇವಿಪ್ರಸಾದ್ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು