News Karnataka Kannada
Monday, April 29 2024
ಮಂಗಳೂರು

ಬಂಟ್ವಾಳದ ಸರ್ವಾಂಗೀಣ ಅಭಿವೃದ್ಧಿಗೆ ಬಿ.ರಮಾನಾಥ ರೈ ಕಾರಣರಾಗಿದ್ದಾರೆ- ಅಶ್ವನಿ ಕುಮಾರ್ ರೈ

B Ramanath Rai responsible for all round development of Bantwal: Ashwani Kumar Rai
Photo Credit : News Kannada

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ತನ್ನನ್ನು ಆಯ್ಕೆ ಮಾಡಿದ ಮತದಾರರಿಗೋಸ್ಕರ ಸಾಕಷ್ಟು ಕೆಲಸಗಳನ್ನು ಮಾಡಿದ್ದು ಬಂಟ್ವಾಳದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸ್ಪರ್ಧಿಸುವ ಕಡೆಯ ಚುನಾವಣೆ ಇದಾಗಿದ್ದು, ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಗುರಿಯಾಗಿದೆ, ಕ್ಷೇತ್ರದ ಜನತೆಗೂ ಇದೆ ಎಂದು ನ್ಯಾಯವಾದಿ, ಕೆಪಿಸಿಸಿ ಮಾಜಿ ಸದಸ್ಯ ಅಶ್ವನಿ ಕುಮಾರ್ ರೈ ಹೇಳಿದ್ದಾರೆ.

ಬಂಟ್ವಾಳದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಗೆ ನೀಡಿದ ಅವಕಾಶದಲ್ಲಿ ರಮಾನಾಥ ರೈ ಅವರು ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದು, ಅವರ ಕೆಲಸದ ಕುರಿತು ಗೌರವವಿದ್ದು, ಅವರ ಗೆಲುವಿಗೆ ಶ್ರಮಿಸುತ್ತೇನೆ. ಒಂಭತ್ತನೇ ಬಾರಿ ಅವರು ಸ್ಪರ್ಧಿಸುತ್ತಿದ್ದು, ಕೊನೆಯ ಬಾರಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅವರನ್ನು ಗೆಲ್ಲಿಸುವ ಜವಾಬ್ದಾರಿ ಕ್ಷೇತ್ರದ ಜನರಿಗಿದೆ. ಕಳೆದ ಬಾರಿ ಅಪಪ್ರಚಾರದಿಂದ ಸೋಲಾಯಿತು.

ಇನ್ನೊಂದು ಬಾರಿ ಸರ್ವಾಂಗೀಣ ಕೆಲಸ ಮಾಡಬೇಕೆಂದಿದ್ದರೆ ರಮಾನಾಥ ರೈಗಳನ್ನು ಗೆಲ್ಲಿಸಬೇಕು. ರಾಜಧರ್ಮವನ್ನು ಪಾಲಿಸದ ವಚನಭ್ರಷ್ಟ ಸರಕಾರ ಈಗಿದೆ. ಸಿದ್ದರಾಮಯ್ಯ ಸರಕಾರ ಇದ್ದಾಗ ನಾವು ಭರವಸೆ ಈಡೇರಿಸಿದ್ದರೆ, ಬಿಜೆಪಿ ಅದರ ಅವಧಿಯಲ್ಲಿ ಮಾಡಿಲ್ಲ. ಅದು ಅತ್ಯಂತ ಜನವಿರೋಧಿಯಾಗಿದ್ದು, ಭ್ರಷ್ಟಾಚಾರ ಕೇಂದ್ರಿತವಾಗಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ರಾಜ್ಯ ಬಿಜೆಪಿ ಸರಕಾರದ ನೀತಿ ಯೋಜನೆಗಳನ್ನು ಅವರು ಕಟುವಾಗಿ ಟೀಕಿಸಿ, ಕಾಂಗ್ರೆಸ್ ಒಂದೇ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಪಕ್ಷ ಎಂದರು.

ಪ್ರಮುಖರಾದ ಪಿಯೂಸ್ ಎಲ್.ರೋಡ್ರಿಗಸ್, ಪದ್ಮಶೇಖರ ಜೈನ್, ಸುದರ್ಶನ ಜೈನ್, ಬಿ.ಎಚ್.ಖಾದರ್, ಸುದೀಪ್ ಕುಮಾರ್ ಶೆಟ್ಟಿ, ಲುಕ್ಮಾನ್ ಬಂಟ್ವಾಳ, ಬೇಬಿ ಕುಂದರ್, ಅಬ್ಬಾಸ್ ಆಲಿ, ಮೋಹನ ಗೌಡ, ಚಂದ್ರಶೇಖರ ಪೂಜಾರಿ, ಉಮೇಶ್ ಬೋಳಂತೂರು, ಸುಭಾಶ್ಚಂದ್ರ ಶೆಟ್ಟಿ, ಸಂಜೀವ ಪೂಜಾರಿ, ಬಿ.ಮೋಹನ್, ಕುಶಾಲಪ್ಪ, ಜೆಸಿಂತಾ ಡಿಸೋಜ, ಜಯಂತಿ ಪೂಜಾರಿ, ನಾರಾಯಣ ನಾಯ್ಕ್, ರಫೀಕ್, ಸದಾಶಿವ ಬಂಗೇರ, ಇಬ್ರಾಹಿಂ ನವಾಜ್, ಸುರೇಶ್ ಜೋರ, ಲವೀನಾ ವಿಲ್ಮಾ ಮೊರಾಸ್, ಮಹಮ್ಮದ್ ವಳವೂರು, ಪರಮೇಶ್ವರ ಮೂಲ್ಯ, ಮನೋಹರ ನೇರಂಬೋಳ್, ಮಹಮ್ಮದ್ ನಂದರಬೆಟ್ಟು, ರೋಷನ್, ಪದ್ಮನಾಭ ಸಾಮಂತ್ , ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು