News Karnataka Kannada
Saturday, May 04 2024
ಮಂಗಳೂರು

ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ: ರೂ.೧೦.೩೮ ಕೋಟಿ ನಿವ್ವಳ ಲಾಭ, ಶೇ.10 ಡಿವಿಡೆಂಡ್ ಘೋಷಣೆ

Annual General Meeting of MCC Bank
Photo Credit : News Kannada

ಮಂಗಳೂರು: ಎಂ.ಸಿ.ಸಿ. ಬ್ಯಾಂಕಿನ ವಾರ್ಷಿಕ ಮಹಾಸಭೆಯು ಭಾನುವಾರ ಪೂರ್ವಾಹ್ನ ೧೧ ಗಂಟೆಗೆ ಮಂಗಳೂರಿನ ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ(ಲೊಯೊಲಾ ಹಾಲ್) ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ ಮತ್ತು ವೃತ್ತಿಪರ ನಿರ್ದೇಶಕ ಶ್ರೀ ಸಿ.ಜಿ.ಪಿಂಟೊ ಅÀರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಆರಂಭಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಶ್ರೀ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಸದಸ್ಯರಾದ ಶ್ರೀ ಅಲನ್ ಸಿ. ಪಿರೇರಾ (ಮಾಜಿ ಅಧ್ಯಕ್ಷರು ಬ್ಯಾಂಕ್ ಅಫ್ ಮಹಾರಾಷ್ಟç) ಮತ್ತು ಸೆಲೆಸ್ಟಿನ್ ಲೀನಾ ಮೊಂತೇರೊ (ಮಾಜಿ ಹಿರಿಯ ಪ್ರಬಂಧಕರು, ಕರ್ನಾಟಕ ಬ್ಯಾಂಕ್) ಮಾರ್ಜೊರಿ ಟೆಕ್ಷೆರಾ, ಹೆಚ್.ಡಿ.ಎಫ್.ಸಿ. ಬ್ಯಾಂಕಿನ ಮಾಜಿ ಸಿನಿಯರ್ ಎಕ್ಸಿಕ್ಯೂಟಿವ್ ಇವರು ಎಲ್ಲಾ ಸದಸ್ಯರ ಪರವಾಗಿ ಬ್ಯಾಂಕಿನ ಸಂಸ್ಥಾಪಕರಿಗೆ ಹೂ ಅರ್ಪಿಸುವ ಮೂಲಕ ಗೌರವಿಸಲಾಯಿತು.

ಎಂ.ಸಿ.ಸಿ. ಬ್ಯಾಂಕ್ ಎಂದು ಪ್ರಖ್ಯಾತವಾಗಿರುವ ಮಂಗಳೂರು ಕಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್, ಬ್ಯಾಂಕಿAಗ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ್ದು ೨೦೨೨-೨೩ನೇ ವಿತ್ತೀಯ ವರ್ಷದಲ್ಲಿ ಶೇಕಡಾ ೧೦% ಲಾಭಾಂಶ ಘೋಷಿಸಿರುತ್ತದೆ. ಜೊತೆಗೆ, ಬ್ಯಾಂಕ್ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭವು ರೂ.೧೦.೩೮ ಕೋಟಿಯಾಗಿರುತ್ತದೆ. ಇದು ಬ್ಯಾಂಕಿನ ಚರಿತ್ರೆಯಲ್ಲಿಯೇ ಅತ್ಯಂತ ಹೆಚ್ಚಿನ ಲಾಭ ಎಂದು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಹೇಳಿದರು. ಅವರು ಬ್ಯಾಂಕಿನ ೧೦೫ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಎಂ.ಸಿ.ಸಿ.ಬ್ಯಾಂಕ್ ಒಟ್ಟು ಠೇವಣಿಯಲ್ಲಿ ಶೇಕಡಾ ೮.೬೨% ಪ್ರಗತಿ ಸಾಧಿಸಿದ್ದು, ರೂ.೫೭೭.೯೫ ಕೋಟಿ ಠೇವಣಿ, ಒಟ್ಟು ಮುಂಗಡದಲ್ಲಿ ಶೇಕಡಾ ೮.೧೪% ಪ್ರಗತಿ ಸಾಧಿಸಿದ್ದು ರೂ.೩೫೫.೩೦ ಕೋಟಿ ಮುಂಗಡಗಳು, ದುಡಿಯುವ ಬಂಡವಾಳ ರೂ.೬೮೪.೩೧ ಕೋಟಿ (ಪ್ರಗತಿ ಶೇಕಡಾ ೧೧.೨೬) ಮತ್ತು ಶೇರು ಬಂಡವಾಳ ರೂ.೨೭.೩೬ ಕೋಟಿ (ಪ್ರಗತಿ ಶೇಕಡಾ ೪೮.೪೫) ಆಗಿದೆ ಎಂದರು. ಜೊತೆಗೆ ಬ್ಯಾಂಕಿನ ಎನ್.ಪಿ.ಎ. ಪ್ರಮಾಣವು ಕಳೆದ ಆರ್ಥಿಕ ವರ್ಷದಲ್ಲಿದ್ದ ೧.೬೨% ರಿಂದ ೧.೩೭%ಕ್ಕೆ ತಲುಪಿರುವುದು ಬ್ಯಾಂಕಿನ ಬೆಳವಣಿಗೆ ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ. ಬ್ಯಾಂಕಿನ ಅನುತ್ಪಾದಕ ಸಾಲಕ್ಕೆ ಒದಗಿಸಿದ ಅವಕಾಶದ ಅನುಪಾತವು ೭೮.೮೭% ಆಗಿರುತ್ತದೆ. ಬ್ಯಾಂಕಿನ ಅಖಂಖ ಪ್ರಮಾಣವು ಆರ್‌ಬಿಐ ನಿಗದಿಪಡಿಸಿರುವ ಕನಿಷ್ಟ ಮಿತಿ ಶೇಕಡಾ ೯%ಕ್ಕಿಂತ ಹೆಚ್ಚಿದ್ದು, ೨೧.೫೪% ಇರುತ್ತದೆ ಎಂದರು. ಬ್ಯಾಂಕಿನ ಪ್ರಗತಿಗೆ ಕಾರಣರಾದ ಗ್ರಾಹಕರು, ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಹಿತೈಷಿಗಳನ್ನು ಅಭಿನಂದಿಸಿದರು.

ತಮ್ಮ ಮಾತನ್ನು ಮುಂದುವರಿಸುತ್ತಾ, ೨೦೨೨-೨೦೨೩ ಅರ್ಥಿಕ ವರ್ಷದಲ್ಲಿ ಬ್ಯಾಂಕಿನ ಅಬಿವೃದ್ದಿಗಾಗಿ ನಿರಂತರ ಸಹಕಾರ ಮತ್ತು ಬೆಂಬಲ ನೀಡಿದ ಬ್ಯಾಂಕಿನ ಎಲ್ಲಾ ಸದಸ್ಯರಿಗೆ ಮತ್ತು ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಬ್ಯಾಂಕಿನ ಸಾಧನೆಗಳಾದ ಸಿಬಿಎಸ್ ಸಾಫ್ಟ್ವೇರ್‌ನ ಉನ್ನತೀಕರಣ, ಡಿಜಿಟಲೀಕರಣ, ಪ್ರತ್ಯೇಕ ಭೂಕಂಪನ ವಲಯದಲ್ಲಿ ಡಿ.ಆರ್ ಕೇಂದ್ರದ ಸ್ಥಾಪನೆ, ಉತ್ಕçಷ್ಟ ಗ್ರಾಹಕ ಸೇವೆ ನೀಡುವ ನಿಟ್ಟಿನಲ್ಲಿ ಶಾಖೆಗಳ ನವೀಕರಣ, ಗ್ರಾಹಕ ಸಂಪರ್ಕ ಸಭೆ, ಆಶೋಕನಗರ ಶಾಖೆಯ ಸ್ಥಳಾಂತರ, ಬ್ಯಾಂಕಿನ ಸೇವೆಗಳನ್ನು ಇನ್ನೂ ಐದು ಜಿಲ್ಲೆಗಳಲ್ಲಿ ವಿಸ್ತರಣೆ, ಶೇಕಡಾ ೮.೭೫ ಬಡ್ಡಿ ದರದಲ್ಲಿ ಶಿಕ್ಷಣ ಸಾಲ, ಇತ್ಯಾದಿ ಗ್ರಾಹಕರ ಸಹಕಾರದಿಂದಾಗಿ ಶೇಕಡಾ ೯೦ರಷ್ಟು ಸಿ.ಕೆ.ವೈ.ಸಿ. ನೋಂದಾವಣೆ ಮಾಡಲಾಗಿದೆ ಎಂದರು. ಬ್ಯಾಂಕಿನ ಪ್ರಗತಿಗಾಗಿ ರಚನಾತ್ಮಕ ಸಲಹೆಗಳನ್ನು ನೀಡಲು ಸದಸ್ಯರನ್ನು ಕೋರಿದರು. ಬ್ಯಾಂಕಿನ ಆಡಳಿತ ಮಂಡಲಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಬ್ಯಾಂಕಿನ ಆಡಳಿತ ಮಂಡಳಿಯ ಮೇಲೆ ಇರಿಸಿದ ನಂಬಿಕೆ ಮಾತ್ರವಲ್ಲದೆ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯೋನ್ಮುಖರಾಗಲು ಪ್ರೇರಣೆ ನೀಡಿದೆ ಎಂದರು. ಮುಂದುವರಿಯುತ್ತಾ ಶಿಸ್ತು ಮತ್ತು ಬ್ಯಾಂಕಿನ ಆರ್ಥಿಕ ಮಾನದಂಡಗಳಾದ ನಿವ್ವಳ ಮೌಲ್ಯ, (ಓeಣತಿoಡಿಣh), ಅಖಂಖ, ಆಸ್ತಿಗಳ ಗುಣಮಟ್ಟದ ಹೆಚ್ಚಳ ಇತ್ಯಾದಿಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಬ್ಯಾಂಕಿನ ಮುಂದಿನ ಉದ್ದೇಶ ಮತ್ತು ಗುರಿಗಳ ಬಗ್ಗೆ ಮಾತನಾಡುತ್ತಾ ಸುರತ್ಕಲ್, ಮೂಡಬಿದ್ರಿ ಮತ್ತು ಉಡುಪಿ ಶಾಖೆಗಳ ಸ್ಥಳಾಂತರ, ಇ-ಲಾಭಿಯ ಸ್ಥಾಪನೆ, ವಹಿವಾಟು ಮತ್ತು ಲಾಭದಲ್ಲಿನ ಹೆಚ್ಚಳ ಬಗ್ಗೆ ತಿಳಿಸಿದರು. ಸಂಪ್ಟೆAಬರ್ ೨೦೨೪ರಲ್ಲಿ ನಡೆಯುವ ಮುಂದಿನ ವಾರ್ಷಿಕ ಮಹಾಸಭೆಗೆ ಇನ್ನೂ ಉತ್ತಮವಾದ ಫಲಿತಾಂಶದೊAದಿಗೆ ಬರಲಿದ್ದೇನೆ ಎಂದರು.
ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ೧೦೪ನೇ ವಾರ್ಷಿಕ ಸಾಮಾನ್ಯ ಸಭೆಯ ವರದಿಗಳನ್ನು ಓದಿದರು. ೨೦೨೨-೨೩ರ ಲೆಕ್ಕ ಪರಿಶೋಧಿತ ಹಣಕಾಸು, ಲೆಕ್ಕ ಪರಿಶೋಧನಾ ವರದಿ, ೨೦೨೩-೨೪ರ ಆರ್ಥಿಕ ವರ್ಷದ ಚಟುವಟಿಕೆಗಳ ಕಾರ್ಯಕ್ರಮ ಮತ್ತು ೨೦೨೩-೨೪ರ ಬಜೆಟ್ ಅನ್ನು ಸಾಮಾನ್ಯ ಸಭೆಯ ಮುಂದೆ ಮಂಡಿಸಿ, ಅನುಮೋದನೆ ಪಡೆಯಲಾಯಿತು.

ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅಧ್ಯಕ್ಷರು, ಸದಸ್ಯರು ನೀಡಿದ ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ವರ್ಷದಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ನಿರ್ದೇಶಕರಾದ ಶ್ರೀ ಅಂಡ್ರೂ÷್ಯ ಡಿಸೋಜ, ಜೋಸೆಫ್ ಎಮ್. ಅನಿಲ್ ಪತ್ರಾವೊ, ಡಾ| ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿ’ಸೋಜ, ಹೆರಾಲ್ಡ್ ಮೊಂತೇರೊ, ಜೆ. ಪಿ. ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಶ್ರೀಮತಿ ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ, ಸುಸಾಂತ್ ಸಲ್ಡಾನ್ಹಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು.

ಮಹಾಪ್ರಬಂಧಕ ಸುನಿಲ್ ಮಿನೇಜಸ್ ಸ್ವಾಗತಿಸಿ, ಕಿರಿಯ ಸಹಾಯಕ ಆಲ್ಡಿçನ್ ಡಿಸೋಜ ನಿರೂಪಿಸಿದರು. ಅಧ್ಯಕ್ಷ ಶ್ರೀ ಅನಿಲ್ ಲೋಬೊ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು