News Karnataka Kannada
Monday, May 06 2024
ಮಂಗಳೂರು

ಚಾರ್ಮಾಡಿ ಮತದಾನ ಸಿಬ್ಬಂದಿ ವಾಹನ ತಡೆಗಟ್ಟಿದ ಕಾರ್ಯಕರ್ತರು, ಲಾಠಿಚಾರ್ಜ್ ಹಲವರಿಗೆ ಗಾಯ

Activists lathicharge several injured as they block car of Charmadi polling staff
Photo Credit : News Kannada

ಬೆಳ್ತಂಗಡಿ: ಚಾರ್ಮಾಡಿ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಡಿ ಮಸ್ಟರಿಂಗ್ ಸಿಬ್ಬಂದಿಯ ವಾಹನವನ್ನು ತಡೆಗಟ್ಟಿದ ಘಟನೆ ಬುಧವಾರ ರಾತ್ರಿ ನಡೆದಿದೆ.ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು ಹಲವರು ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಘಟನೆಯ ಹಿನ್ನೆಲೆ:
ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಚಾರ್ಮಾಡಿ ಸಹಿಪ್ರಾ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 21, 22,23 ಇದ್ದು ಇಲ್ಲಿನ 21ನೇ ಮತಗಟ್ಟೆಯಲ್ಲಿ ಮತಯಂತ್ರ ಸರಿ ಇಲ್ಲದ ಕಾರಣದಿಂದ ಮತದಾನ ಪ್ರಕ್ರಿಯೆ ಸುಮಾರು 3ತಾಸು ತಡವಾಗಿ ಆರಂಭವಾಗಿತ್ತು ಹಾಗೂ ಈ ಮೂರು ಬೂತ್ ಗಳಲ್ಲಿ ಮತಯಂತ್ರಗಳು ಅತ್ಯಂತ ನಿಧಾನವಾಗಿ ಕಾರ್ಯನಿರ್ವಹಿಸಿದ ಕಾರಣ ಮತದಾರರು ಹಲವು ತಾಸು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಬೇಕಾಯಿತು.

ಮತದಾನ ಮುಗಿಯುವ ನಿಗದಿತ ಸಮಯ 6 ಗಂಟೆಗೆ 150ಕ್ಕಿಂತಲೂ ಅಧಿಕ ಮತದಾರರು ಮತಗಟ್ಟೆಯಲ್ಲಿದ್ದು ರಾತ್ರಿ 7.45ರವರೆಗೆ ಮತದಾನ ಪ್ರಕ್ರಿಯೆ ಮುಂದುವರಿಯಿತು.

ಅಂತಿಮ ಪ್ರಕ್ರಿಯೆ ನಡೆಸಿ ಪಕ್ಷಗಳ ಏಜೆಂಟ್ ಗಳನ್ನು ಹೊರ ಕಳುಹಿಸಿದ ಬಳಿಕವು ಸುಮಾರು ಒಂದು ತಾಸು ಕಾಲ ಸಿಬ್ಬಂದಿ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.

ಬಳಿಕ ರಾತ್ರಿ 9.30ಲ ಹೊತ್ತಿಗೆ ಡಿಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ವಾಹನ ಹೊರಡುತ್ತಿದ್ದಂತೆ ವಾಹನವನ್ನು ಅಡ್ಡಗಟ್ಟಿದ ಕಾಂಗ್ರೆಸ್ ಕಾರ್ಯಕರ್ತರು, ಏಜೆಂಟ್ ಗಳನ್ನು ಹೊರ ಕಳುಹಿಸಿ ಪ್ರಕ್ರಿಯೆ ಮುಂದುವರಿಸಿದ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಮತದಾನದಲ್ಲಿ ಅವ್ಯವಹಾರ ನಡೆಸಲು ಹೀಗೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳದಲ್ಲಿ ಜನಜಮಾಯಿಸಿ ವಾಗ್ವಾದ ನಡೆದಿದೆ

ಲಾಠಿ ಚಾರ್ಜ್ :
ಚುನಾವಣೆಯ ಮತಯಂತ್ರಗಳನ್ನು ಹೊತ್ತ ಬಸ್ಸನ್ನು ಹೋಗಲು ಬಿಡದೆ ಅಡ್ಡಗಟ್ಟಿದ ಜನರನ್ನು ಚದುರಿಸಲು ಪೊಲೀಸರು ಸಾಕಷ್ಟು ಮನವಿ ಮಾಡಿದರು. ಹಾಗೂ ವಾಹನವನ್ನು ಡಿಮಸ್ಟರಿಂಗ್ ಕೇಂದ್ರಕ್ಕೆ ಕಳುಹಿಸಿಕೊಟ್ಟರು.ಆಗ
ಸ್ಥಳದಲ್ಲಿ ಜಮಾಯಿಸಿದ್ದ ಜನ ಗಲಾಟೆ ಮುಂದುವರಿಸಿ ಕಲ್ಲೆಸತಕ್ಕೆ ಮುಂದಾದಾಗ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸುವುದು ಅನಿವಾರ್ಯವಾಯಿತುಈ ವೇಳೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದು ಲಾಠಿಚಾರ್ಜ್ ಆರಂಭವಾಗುತ್ತಿದ್ದಂತೆ ಹೆಚ್ಚಿನ ಕಾರ್ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದರೆ. ಈ ಸಮಯ ಹಲವರಿಗೆ ಲಾಠಿ ಏಟಿನ ರುಚಿ ಸಿಕ್ಕಿದೆ.

ಬಿಜೆಪಿ ಆರೋಪ:
ಯಾವುದೇ ರೀತಿಯಲ್ಲಿ ಮತದಾನ ವಾಹನಕ್ಕೆ ತೊಂದರೆ ನೀಡದ ಬಿಜೆಪಿ ಕಾರ್ಯಕರ್ತರಿಗೆ ಲಾಠಿ ಬೀಸಲಾಗಿದೆ . ಇದರಿಂದ ಅಮಾಯಕರು ಪೆಟ್ಟು ತಿಂದು ಆಸ್ಪತ್ರೆ ಸೇರುವಂತಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಕೈ ಕೊಟ್ಟ ವಿದ್ಯುತ್:
ಮತದಾನದ ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುವ ಹೊತ್ತಿಗೆ ವಿದ್ಯುತ್ ಕೈಕೊಟ್ಟಿದ್ದು ಪ್ರಕ್ರಿಯೆ ಪೂರ್ಣಗೊಳಿಸಲು ತಡವಾಗಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. ವಾಹನ ತಡೆಗಟ್ಟಿದ ಹಾಗೂ ಲಾಠಿಚಾರ್ಜ್ ಸಮಯದಲ್ಲೂ ವಿದ್ಯುತ್ ಇಲ್ಲದಿದ್ದ ಕಾರಣ ಕತ್ತಲು ಆವರಿಸಿದ್ದು ಸ್ಥಳದಲ್ಲಿ ಜಮಾಯಿಸಿದ್ದ ಜನರ ಕಡೆ ಪೊಲೀಸರು ಲಾಠಿ ಬೀಸಿದ್ದು ಅಮಾಯಕರು ಪೆಟ್ಟು ತಿನ್ನುವಂತಾಯಿತು.

ಚಾರ್ಮಾಡಿ ಮತಗಟ್ಟೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇದ್ದು ರಸ್ತೆ ಉದ್ದಕ್ಕೂ ಜನ ಜಮಾಯಿಸಿದ್ದ ಕಾರಣ ಸಾಕಷ್ಟು ಹೊತ್ತು ಟ್ರಾಫಿಕ್ ಪಜಾಮ್ ಸಮಸ್ಯೆ ಉಂಟಾಯಿತು.

ಇದೀಗ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದು ಪರಿಸ್ಥಿತಿ ಹತೋಟಿಯಲ್ಲಿ ಇದೆ ಎಂದು ಹೇಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು