News Karnataka Kannada
Monday, May 13 2024
ಮಂಗಳೂರು

ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಂಗಳೂರು ನಗರದಲ್ಲಿ 2543 ಪ್ರಕರಣ ದಾಖಲು

2543 cases registered in Mangaluru city for traffic rule violations
Photo Credit : News Kannada

ಮಂಗಳೂರು: ನ.5ರಿಂದ ನ.12ರವರೆಗಿನ ಅವಧಿಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ರಸ್ತೆಗಳಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಕುರಿತು ಒಟ್ಟು 2543 ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಪೈಕಿ ಕುಡಿದು ವಾಹನ ಚಾಲನೆ ಮಾಡಿದ 21 ಪ್ರಕರಣ, ನಿಷೇಧಿತ ವಲಯಗಳಲ್ಲಿ ಪಾರ್ಕಿಂಗ್ 448 ಪ್ರಕರಣ, ಹೆಲ್ಮೆಟ್‌ ರಹಿತ ಚಾಲನೆ 768 ಪ್ರಕರಣ, ಬಸ್‌ ಫುಟ್‌ ಬೋರ್ಡ್‌ ನಲ್ಲಿ ಪ್ರಯಾಣ, ಅಧಿಕ ಸಂಖ್ಯೆಯ ಪ್ರಯಾಣಕರನ್ನು ಹೇರಿಕೊಂಡು ಸಾವು 205 ಪ್ರಕರಣ, ಒನ್‌ ವೇ, ನೋಎಂಟ್ರಿ ಪ್ರದೇಶದಲ್ಲಿ ವಾಹನ ಚಾಲನೆಯ 96 ಪ್ರಕರಣ, ಸಮರ್ಪಕ ನಂಬರ್‌ ಪ್ಲೇಟ್‌ ಇಲ್ಲದ 75 ಪ್ರಕರಣ, ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯ 55 ಪ್ರಕರಣ, ಟಿಂಟ್‌ ಅಳವಡಿಕೆ 48, ಸೀಟ್‌ ಬೆಲ್ಟ್‌ ಇಲ್ಲದೆ ಸಾಗಿದ 35, ರಿಕ್ಷಾ ಬಾಡಿಗೆ ನಿರಾಕರಣೆ, ಅತಿ ದುಬಾರಿ ಪ್ರಯಾಣ ದರದ 11 ಪ್ರಕರಣ, ಬೈಕ್‌ನಲ್ಲಿ ತ್ರಿವಳಿ ಸವಾರಿಯ 20 ಪ್ರಕರಣಗಳನ್ನು ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು