News Karnataka Kannada
Monday, April 29 2024
ಮಂಗಳೂರು

ಮಂಗಳೂರು: ದಶಮನೋತ್ಸವದ ಸಂಭ್ರಮದಲ್ಲಿ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆ

100th anniversary celebrations
Photo Credit : News Kannada

ಮಂಗಳೂರಿನ ಹೃದಯ ಭಾಗದಲ್ಲಿರುವ ಎಲ್ಲರಿಗೂ ಚಿರ ಪರಿಚಿತವಾದ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಷ್ಟಿಟ್ಯೂಷನ್ ಪೂಜನೀಯ ಫಾದರ್ ಆಗಸ್ಟಸ್ ಮುಲ್ಲರ್‌ರವರಿಂದ ೧೮೮೦ನೇ ಇಸವಿಯಲ್ಲಿ ಕಂಕನಾಡಿಯಲ್ಲಿ ಸ್ಥಾಪನೆಯಾಗಿ ಇಂದು ಬೃಹದಾಕಾರವಾಗಿ ಬೆಳೆದು, ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದರಲ್ಲಿ ಹೆಸರುವಾಸಿಯಾಗಿದೆ.

ಈ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಒಂದು ಸಹ ಸಂಸ್ಥೆಯಾಗಿರುವ ಬಂಟ್ವಾಳ ತಾಲೂಕಿನ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯನ್ನು ೦೧.೦೫.೨೦೧೩ ರಂದು ತುಂಬೆಯ ಬಿ.ಎ. ಸಮೂಹ ಸಂಸ್ಥೆಯಿಂದ ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ಖರೀದಿಸಿತು ಮತ್ತು ಈ ಆಸ್ಪತ್ರೆಯು ೦೨.೦೬.೨೦೧೩ ರಂದು ಉದ್ಘಾಟನೆಗೊಂಡಿತು. ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಯು ಈ ವರ್ಷ ದಶಮನೋತ್ಸವ ಆಚರಿಸುತ್ತದೆ ಎಂದು ತಿಳಿಸಲು ಸಂತೋಷವಾಗುತ್ತದೆ. ಆಸ್ಪತ್ರೆಯು ೫೦ ಹಾಸಿಗೆಗಳಿಂದ ಈಗ ೧೦೦ ಹಾಸಿಗೆಗಳನ್ನು ಹೊಂದಿದೆ. ಮಲ್ಟಿ ಸ್ಪೆಷಾಲಿಟಿಯಿಂದ ಹಿಡಿದು ಸೂಪರ್ ಸ್ಪೆಷಾಲಿಟಿ ಸೇವೆಗಳು ಲಭ್ಯವಿದೆ. ಎನ್ಎಬಿಎಚ್ ಪ್ರವೇಶ ಪೂರ್ವ ಮಾನ್ಯತೆ ಪಡೆದು ಈ ಆಸ್ಪತ್ರೆಯು ಉನ್ನತ ದರ್ಜೆಗೇರಿದೆ.

ಈ ಆಸ್ಪತ್ರೆಯು ೨೪ ತಾಸುಗಳ ತುರ್ತು ಮತ್ತು ಅಪಘಾತ ಚಿಕಿತ್ಸೆ, ೧೬ ಸ್ಲೈಸ್ ಸಿಟಿ ಸ್ಕ್ಯಾನ್‌, ೨೪x೭ ಪ್ರಯೋಗಾಲಯದ ಸೇವೆಗಳು, ಔಷಧಾಲಯ, ಪ್ರಸೂತಿ/ಹೆರಿಗೆ ವಿಭಾಗ, ಸುಸರ್ಜಿತ ಶಸ್ತçಚಿಕಿತ್ಸಾ ಕೊಠಡಿಗಳು, ದಾದಿಯರ ಸೇವೆಗಳಿಗೆ ಹೆಸರುವಾಸಿಯಾಗಿದೆ. ಕಳೆದ ೧೦ ವರ್ಷಗಳಿಂದ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ವಿಟ್ಲ ಹಾಗೂ ನೆರೆರಾಜ್ಯ ಕೇರಳದಿಂದ ಆರೋಗ್ಯ ಸೇವೆಯನ್ನು ಪಡೆಯಲು ರೋಗಿಗಳು ಬರುತ್ತಾರೆ. ಈ ಗ್ರಾಮೀಣ ಪ್ರದೇಶದ ಜನರಿಗೆ ಪ್ರತ್ಯೇಕವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕಳೆದ ವರ್ಷ ದಶಮಾನೋತ್ಸವದ ಕೊಡುಗೆಯಾಗಿ ಬಂಟ್ವಾಳ ತಾಲೂಕಿನ ಪ್ರಥಮ ನರ್ಸಿಂಗ್ ಕಾಲೇಜನ್ನು (೪೦ ಸೀಟುಗಳು) ಆರಂಭಿಸಿದೆ ಹಾಗೂ ಕಾಲೇಜಿನ ಹೊಸ ಕಟ್ಟಡದ ಕೆಲಸವು ಭರದಿಂದ ಸಾಗುತ್ತಿದೆ.

ಆಸ್ಪತ್ರೆಯು ದಶಮನೋತ್ಸವ ಪೂರೈಸುವ ಸಂದರ್ಭದಲ್ಲಿ ಮೇ ೧, ೨೦೨೩ ರಂದು ಎಲ್ಲಾ ವಿಭಾಗಗಳ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಶಿಬಿರದ ಸೌಲಭ್ಯವನ್ನು ಒಂದು ತಿಂಗಳಿಗೆ ಉಚಿತವಾಗಿ ಒದಗಿಸಲಾಗುತ್ತದೆ.

ನಮ್ಮ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಯ ದಶಮನೋತ್ಸವ ಸಂಭ್ರಾಮಚರಣೆಯನ್ನು ಮೇ ೨, ೨೦೨೩ ರಂದು ಬೆಳಿಗ್ಗೆ ೧೦.೩೦ ಕ್ಕೆ ಆಸ್ಪತ್ರೆಯ ಆವರಣದಲ್ಲಿ ಜರಗಲಿದ್ದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರು ಆಗಿರುವ ಪರಮ ಪೂಜ್ಯ ಪೀಟರ್ ಪಾವ್ಲ್ ಸಲ್ಡಾನರವರು ಕಾರ್ಯಕ್ರಮದ ಅಧ್ಯಕ್ಷರಾಗಿ ಹಾಗೂ ಶ್ರೀ ಮಂಜುನಾಥ್ ಭಂಡಾರಿ, ಮಾನ್ಯ ಶಾಸಕರು ಕರ್ನಾಟಕ ವಿಧಾನ ಪರಿಷತ್, ಇವರು ಈ ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚ್ಚರ್ಡ್ ಅಲೋಷಿಯಸ್ ಕೊವೆಲ್ಲೋ, ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ಹಾಗೂ ವೈದ್ಯಕೀಯ ಅಧೀಕ್ಷಕರು ಡಾ. ಕಿರಣ್ ಶೆಟ್ಟಿ, ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲಾರಾದ ವಂದನೀಯ ಭಗಿನಿ ಧನ್ಯ ದೇವಸ್ಯಾ ಇವರೆಲ್ಲರ ಮುಂದಾಳತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ.

ದಶಮನೋತ್ಸವ ಸ್ಮರಣರ್ಥ “ಮುಲ್ಲರ್ ತುಂಬೆ” ಸಂಚಿಕೆಯನ್ನು ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಯ ತುಂಬೆಯ ಸಾಕ್ಷ್ಯಚಿತ್ರ ಅನಾವರಣಗೊಳ್ಳಲಿದೆ. ಈ ಸಂಸ್ಥೆಯಲ್ಲಿ ೧೦ ವರ್ಷಗಳಿಂದ ಸೇವೆ ಸಲ್ಲಿಸಿದ ವೈದ್ಯರು, ಸಿಬ್ಬಂದಿಗಳನ್ನು ಅಭಿನಂದಿಸಲಿದ್ದೇವೆ.

ಮುಂದಿನ ಕಾರ್ಯ ಯೋಜನೆಗಳು

  • ಮೇ ೧ ರಂದು ಹೊಸದಾಗಿ ಆರಂಭಿಸಿದ Audiology and Speech Language Pathology ವಿಭಾಗವನ್ನು ಹಾಗೂ ಡಯಾಲಿಸಿಸ್ ವಿಭಾಗಕ್ಕೆ ಹೊಸದಾಗಿ ಖರೀದಿಸಿದ ೨ ಯಂತ್ರಗಳ ಉದ್ಘಾಟನೆ ಹಾಗೂ ಆಶೀರ್ವಾಚನವನ್ನು ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚ್ಚರ್ಡ್ ಅಲೋಷಿಯಸ್ ಕೊವೆಲ್ಲೋರವರು ನಡೆಸಲಿದ್ದಾರೆ.
  • NABH ಪೂರ್ಣ ಮಾನ್ಯತೆ ಪಡೆಯುವಲ್ಲಿ ಕೆಲಸಗಳು ಮತ್ತು ತರಬೇತಿಗಳು ನಡೆಯುತ್ತಿವೆ.
  • ಶಸ್ತçಚಿಕಿತ್ಸೆಗಳಾದ ಅರ್ಥೋಸ್ಕೊಪಿ/ಕೀ ಹೋಲ್, ಮೊಣಕಾಲು ಕೀಲು ಬದಲಾವಣೆ ಸರ್ಜರಿ ನಡೆಸಲು ಹೆಚ್ಚಿನ ಗಮನ.
  • ಈ ಎಲ್ಲಾ ಸೇವೆಗಳು OP/IP ರೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಅನುಕೂಲವಾಗುತ್ತವೆ.
  • ೨೦೨೨-೨೩ ಶೈಕ್ಷಣಿಕ ರ‍್ಷದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಪ್ರಥಮ ವರ್ಷದ ನರ್ಸಿಂಗ್ ಕಾಲೇಜ್‌ನ್ನು ಆರಂಭಿಸಿದೆ. ನರ್ಸಿಂಗ್ ಕಾಲೇಜನ್ನು ೪೦ ಸೀಟ್‌ನಿಂದ ೧೦೦ ಸೀಟ್‌ಗಳಾಗಿ ವಿಸ್ತರಣೆ ಮಾಡಲು ಯೋಜನೆ ಹಾಗೂ ಇನ್ನಿತರ ಜನಪರ ಕಾರ್ಯಗಳನ್ನು ಯೋಜಿಸಲಾಗಿದೆ.
  • ನಾವು ಉಓಒ ಪ್ರೋಗ್ರಾಂ ಮತ್ತು ಕೆಲವುA HS ಕರ‍್ಸ್‌ಗಳನ್ನು ಪ್ರಾರಂಭಿಸಲು ಯೋಜಿಸಿದ್ದೇವೆ.
  • ನಾವು ಬಡ ರೋಗಿಗಳಿಗೆ ಪ್ರತಿ ವರ್ಷ ಸುಮಾರು ರೂ.೭೫ ಲಕ್ಷ ರಿಯಾಯಿತಿಯನ್ನು ನೀಡುತ್ತಿದ್ದೇವೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು