News Karnataka Kannada
Monday, April 29 2024
ಮಂಗಳೂರು

ಸೆಂಟ್ರಲ್ ಮತ್ತು ಸುಬ್ರಮಣ್ಯ ರಸ್ತೆ ನಡುವೆ ಎಕ್ಸ್‌ಪ್ರೆಸ್ ರೈಲು ಸಂಚಾರ ಡಿ. 9ರಿಂದ ಆರಂಭ

Railway Delhi 17 6 21 Dt 176216 1 Newsk 9508623154
Photo Credit :

ಮಂಗಳೂರು: ಸೆಂಟ್ರಲ್ ಮತ್ತು ಸುಬ್ರಮಣ್ಯ ರಸ್ತೆ ನಡುವೆ ಎಕ್ಸ್‌ಪ್ರೆಸ್ ರೈಲು ಸಂಚಾರ ಡಿಸೆಂಬರ್ 9ರಿಂದ ಆರಂಭವಾಗಲಿದೆ. ರೈಲ್ವೆ ಇಲಾಖೆ ರೈಲುಗಳ ಸಂಚಾರದ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

ರೈಲ್ವೆ ಇಲಾಖೆ ಮಂಗಳೂರು ಸೆಂಟ್ರಲ್-ಕಬಕ ಮತ್ತು ಸುಬ್ರಮಣ್ಯ ರಸ್ತೆ ನಡುವೆ ರೈಲು ಸಂಚಾರ ಮತ್ತೆ ಆರಂಭಿಸಲು ಒಪ್ಪಿಗೆ ನೀಡಿದೆ. ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸಲಿದ್ದು, ವೇಳಾಪಟ್ಟಿ ನೀಡಲಾಗಿದೆ.ಮಂಗಳೂರು ಸೆಂಟ್ರಲ್-ಸುಬ್ರಮಣ್ಯ ರಸ್ತೆ ನಡುವೆ ಕಾಯ್ದಿರಿಸದ ಎಕ್ಸ್‌ಪ್ರೆಸ್‌ ರೈಲು (06489) ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಡಿಸೆಂಬರ್ 9ರ ಬೆಳಗ್ಗೆ 10 ಗಂಟೆಗೆ ಹೊರಡಲಿದೆ. 12.30ಕ್ಕೆ ಸುಬ್ರಮಣ್ಯ ರಸ್ತೆ ತಲುಪಲಿದೆ. ಮಂಗಳೂರು ಜಂಕ್ಷನ್‌ಲ್ಲಿ 10.14ಕ್ಕೆ ಸಂಚಾರ ನಡೆಸತ್ತದೆ.

Mangaluru Central Subramanya Road Rail From December 9

ಸುಬ್ರಮಣ್ಯ ರಸ್ತೆ-ಮಂಗಳೂರು ಸೆಂಟ್ರಲ್ ಕಾಯ್ದಿರಿಸಿದ ಎಕ್ಸ್‌ಪ್ರೆಸ್‌ ರೈಲು (06488) ಮಧ್ಯಾಹ್ನ 1.30ಕ್ಕೆ ಸುಬ್ರಮಣ್ಯ ರಸ್ತೆಯಿಂದ ಮಧ್ಯಾಹ್ನ 1.30ಕ್ಕೆ ಹೊರಡಲಿದೆ. 3.29ಕ್ಕೆ ಮಂಗಳೂರು ಜಂಕ್ಷನ್, 4.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ನಿಲ್ದಾಣಗಳು; ಮಂಗಳೂರು ಜಂಕ್ಷನ್, ಬಂಟ್ವಾಳ, ನೇರಳಕಟ್ಟೆ, ಕಬಕ ಪುತ್ತೂರು, ನರಿಮೊಗರು, ಕಾಣಿಯೂರು, ಎಡಮಂಗಲ, ಕೋಡಿಂಬಾಳ, ಬಜಕೆರೆ ನಿಲ್ದಾಣದಲ್ಲಿ ರೈಲು ನಿಲ್ಲಲಿದೆ.

ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್; ಡಿಸೆಂಬರ್ 9ರಿಂದ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್ ರೈಲು ಸಂಚಾರ ಸಹ ಆರಂಭವಾಗಲಿದೆ. 06487 ಸಂಖ್ಯೆಯ ರೈಲು ಮಂಗಳೂರು ಸೆಂಟ್ರಲ್‌ನಿಂದ ಸಂಜೆ 6ಗಂಟೆಗೆ ಹೊರಟು ರಾತ್ರಿ 7.25ಕ್ಕೆ ಕಬಕ ಪುತ್ತೂರು ತಲುಪಲಿದೆ.

ರೈಲು ಸಂಖ್ಯೆ 06486 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ರೈಲು ಕಬಕ ಪುತ್ತೂರು ರೈಲು ನಿಲ್ದಾಣದಿಂದ ರಾತ್ರಿ 8.25ಕ್ಕೆ ಹೊರಟು ರಾತ್ರಿ 10.05ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ರೈಲು ಮಂಗಳೂರು ಜಂಕ್ಷನ್, ಬಂಟ್ವಾಳ, ಕಬಕ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.

ರೈಲು ಸಂಖ್ಯೆ 06485 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್ ರೈಲು ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ 5.45ಕ್ಕೆ ಹೊರಡಲಿದೆ. 7.15ಕ್ಕೆ ಕಬಕ ಪುತ್ತೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ರೈಲು ಸಂಖ್ಯೆ 06484 ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್ ರೈಲು ಕಬಕ ಪುತ್ತೂರಿನಿಂದ ಬೆಳಗ್ಗೆ 7.55ಕ್ಕೆ ಹೊರಟು 9.25ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರು ಜಂಕ್ಷನ್, ಬಂಟ್ವಾಳ, ನೇರಳಕಟ್ಟೆ ನಿಲ್ದಾಣಗಳಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು