News Karnataka Kannada
Sunday, April 28 2024
ಮಂಗಳೂರು

ಸಿನಿಮಾ ನಿರ್ಮಾಣ ಕಾರ್ಯಾಗಾರಕ್ಕೆ ಚಾಲನೆ

Sdm 25092021
Photo Credit :

ಬೆಳ್ತಂಗಡಿ: ಸಿನಿಮಾ ಒಂದು ಮೂಲ ಸ್ವರೂಪವನ್ನು ಉಳಿಸಿಕೊಂಡು ಕಾಲದಿಂದ ಕಾಲಕ್ಕೆ ವಿಕಸನ ಹೊಂದುತ್ತಿರುವ ಒಂದು ಪ್ರಭಲ ಸಮೂಹ ಮಾಧ್ಯಮ. ಸಿನಿಮಾ ನಿರ್ಮಾಣದ ಮಜಲುಗಳನ್ನು ಅರಿಯಲು, ಪಾಯೋಗಿಕ ತರಬೇತಿ ನೀಡಲು ಈ ಕಾರ್ಯಾಗಾರ ಒಂದು ಅತ್ಯುತ್ತಮ ಯೋಜನೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ ಸತೀಶ್ ಚಂದ್ರ ಅಭಿಪ್ರಾಯ ಪಟ್ಟರು.

ಇಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಬಿವೋಕ್ – ಡಿಜಿಟಲ್ ಮಾಧ್ಯಮ ಮತ್ತು ಸಿನಿಮಾ ನಿರ್ಮಾಣ(ಡಿಎಂಎಫ಼್) ವಿಭಾಗ, ಭೋಧಿ ಪ್ರೊಡಕ್ಷನ್ ಹಾಗೂ ಇನಸ್ಟಿಟ್ಯೂಟ್ ಆಫ್ ಫಿಲ್ಮ್ ಅಂಡ್ ವಿಡಿಯೋ ಟೆಕ್ನಾಲಜಿ, ಪುಣೆ, ಆದಿತ್ಯ ಕ್ರಿಯೇಟಿವ್ ಫಿಲ್ಮ್ ಮೇಕರ್ಸ ಸಂಯುಕ್ತ ಆಶ್ರಯದಲ್ಲಿ ‘ಚಿತ್ರಕಥೆ, ನಿರ್ದೇಶನ ಮತ್ತು ಛಾಯಾಗ್ರಹಣ’ ವಿಷಯದ‌ ಕುರಿತು ೧೨ ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳಲು ಮುಖ್ಯವಾಗಿ ಆಸಕ್ತಿ, ಉತ್ಸಾಹ, ಸವಾಲುಗಳನ್ನು ಎದುರಿಸುವ ಧೈರ್ಯ ಅವಶ್ಯಕ. ಈ ಕಾರ್ಯಾಗಾರ ಇದಕ್ಕೆ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿರುವ ಮುಂಬೈನ ಇನ್ಸ್ಟಿಟ್ಯೂಟ್ ಆಫ್ ಫಿಲ್ಮ್ ಅಂಡ್ ವಿಡಿಯೋ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕ, ಎಂ.ಕೆ. ಶಂಕರ್ ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ‌ ಆಗಮಿಸಿದ್ದ ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ್ ಹೆಗಡೆ, ಆಸಕ್ತ ವಿದ್ಯಾರ್ಥಿಗಳಿಗೆ ಕಾರ್ಯಗಾರಕ್ಕೆ ಶುಭಕೋರಿದರು. ಭೋದಿ ಪ್ರೊಡಕ್ಷನ್ ಸಂಸ್ಥೆಯ ಸ್ಮಿತೇಷ್ ಭಾರ್ಯ, ಅನೀಶ್ ಪೂಜಾರಿ ೧೨ ದಿನಗಳ ಕಾರ್ಯಗಾರದ ಬಗ್ಗೆ ಮಾಹಿತಿ ನೀಡಿದರು.
ಬಿವೋಕ್ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೪೦ಕ್ಕೂ ಹೆಚ್ಚು ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಪಿ. ವಿಶ್ವನಾಥ್ , ಕಾರ್ಯಾಗಾರದ ಸಂಯೋಜಕರಾದ ಮಾಧವ ಹೊಳ್ಳ, ಅಶ್ವಿನಿ ಜೈನ್, ಕೋರ್ಸ್ ಸಂಯೋಜಕ ಸುವೀರ್ ಜೈನ್, ವಿಭಾಗದ ಎಲ್ಲಾ ಉಪನ್ಯಾಸಕರು ಉಪಸ್ಥಿತಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು