ಮಂಗಳೂರು : ನಗರದ ಎರಡು ಶಿಕ್ಷಣ ಸಂಸ್ಥೆಗಳ ಕೋವಿಡ್ನ ಎರಡು ಕ್ಲಸ್ಟರ್ ಗಳಲ್ಲಿ ಏಕಾಏಕಿ ಐವರಲ್ಲಿ ಒಮಿಕ್ರಾನ್ ದೃಢ ಪಟ್ಟಿದೆ.
ಈ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಕ್ಲಸ್ಟರ್ 1 ರಲ್ಲಿ ಪರೀಕ್ಷೆಗೊಳಗಾದ 14 ಪ್ರಕರಣಗಳಲ್ಲಿ 4 ಮಂದಿಗೆ ಒಮಿಕ್ರಾನ್ ದೃಢ ವಾಗಿದ್ದು, ಕ್ಲಸ್ಟರ್ 2 ರಲ್ಲಿ ಪರೀಕ್ಷೆಗೊಳಗಾದ 19 ಪ್ರಕರಣಗಳಲ್ಲಿ 1 ಒಮಿಕ್ರಾನ್ ದೃಢ ಪಟ್ಟಿದೆ.
ರಾಜ್ಯಕ್ಕೆ ಯುಕೆಯಿಂದ ಬಂದ ಒಬ್ಬ ಪ್ರಯಾಣಿಕನಲ್ಲೂ ಒಮಿಕ್ರಾನ್ ದೃಢ ಪಟ್ಟಿದೆ ಎಂದು ಸಚಿವರು ಟ್ವೀಟ್ ನಲ್ಲಿ ಬರೆದಿದ್ದಾರೆ.