News Karnataka Kannada
Sunday, April 28 2024
ಮಂಗಳೂರು

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ

Bjp
Photo Credit :

ಬೆಳ್ತಂಗಡಿ: ನಮ್ಮ ದೇಶದ ಸಂವಿಧಾನದಲ್ಲಿ‌ ಜಾತ್ಯಾತೀತತೆ ಎಂಬ ಪದವೇ ಎಲ್ಲೂ ನಮೂದಿಸಲಾಗಿಲ್ಲ. ಆದರೆ ನಕಲಿ ಜಾತ್ಯಾತೀತತೆಯಿಂದ ದೇಶದಲ್ಲಿ ಸಮಸ್ಯೆಗೆ ಕಾರಣವಾಗಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.

ಅವರು ಮಂಗಳವಾರ ಲಾಯಿಲಾ ಸ್ಥಾನಿಕ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿಯನ್ನು ಉದ್ಧಾಟಿಸಿ ಮಾತನಾಡಿದರು.

ಈ ಹಿಂದೆ ವಿಶ್ವದಲ್ಲಿ ಭಾರತಕ್ಕೆ ಗೌರವ ಕಡಿಮೆಯಿತ್ತು. ಆದರೆ ನರೇಂದ್ರ ಮೋದಿಯವರ ಆಡಳಿತದಿಂದ ಇಂದು ಭಾರತದ ಧ್ವಜಕ್ಕೆ ವಿದೇಶದಲ್ಲೂ ಗೌರವ ಸಿಗುವಂತಾಗಿದೆ. ಇದು ಬದಲಾದ ಭಾರತದ ಆಡಳಿತ ಎಂದು ಬಣ್ಣಿಸಿದ ಅವರು, ಹಿಜಬ್ ಬಗ್ಗೆ ಸಂವಿಧಾನದಲ್ಲಿ ಯಾವೂದೇ ಪ್ರಸ್ತಾಪವಿಲ್ಲ. ಆದರೆ ಕರ್ನಾಟಕದಲ್ಲಿ ನಡೆದ ಹಿಜಬ್ ಪ್ರಕರಣಕ್ಜೆ ಕಾಂಗ್ರೇಸ್ ಮತ್ತು ಎಸ್. ಡಿ.ಪಿ.ಐ. ಕಾರಣವಾಗಿದೆ ಎಂದರು.

ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್, ಗಣೇಶ ಗೌಡ ನಾವೂರು ಇದ್ದರು.
ಮಂಡಲ ಉಪಾಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ ಸ್ವಾಗತಿಸಿದರು. ಉಪಾಧ್ಯಕ್ಷೆ ವಸಂತಿ ಮಚ್ಚಿನ ವಂದಿಸಿದರು. ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು