News Karnataka Kannada
Monday, April 29 2024
ಮಂಗಳೂರು

ನವ ಮಂಗಳೂರು ಬಂದರು ಟ್ರಸ್ಟ್ ಗೆ ಭೇಟಿ ನೀಡಿದ :ಸಚಿವ ಶ್ರೀ ಸರ್ಬಾನಂದ್ ಸೋನೋವಾಲ್

New Project 2021 09 25t171458.459
Photo Credit :

ಮಂಗಳೂರು: ಕೇಂದ್ರ ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವ ಹಾಗೂ ಆಯುಷ್ ಖಾತೆ ಸಚಿವ ಶ್ರೀ ಸರ್ಬಾನಂದ್ ಸೋನೋವಾಲ್ನ ಇಂದು ನವ ಮಂಗಳೂರು ಬಂದರು ಟ್ರಸ್ಟ್ ಗೆ ಭೇಟಿ ನೀಡಿದ್ದರು. ಅವರೊಂದಿಗೆ ಬಂದರು, ಹಡಗು ಮತ್ತು ಜಲ ಸಾರಿಗೆ ಖಾತೆ ರಾಜ್ಯ ಸಚಿವ ಶ್ರೀ ಶ್ರೀಪಾದ್ ಯಸ್ಸೋ ನಾಯಕ್ ಅವರೂ ಇದ್ದರು. ಸಚಿವರು ಬಂದರಿನ ಕಾರ್ಯಕ್ಷಮತೆಯನ್ನು ಪರಾಮರ್ಶಿಸಿದರು, ಅವರಿಗೆ ಎನ್.ಎಂ.ಪಿ.ಟಿ.ಯ ಅಧ್ಯಕ್ಷ ಡಾ. ಎ.ವಿ. ರಮಣ ಬಂದರಿನ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಭೂತ ಸೌಕರ್ಯ ಯೋಜನೆಗಳು ಮತ್ತು ಇತರ ಪ್ರಸ್ತಾವನೆಗಳ ಕುರಿತಂತೆ ವಿವರಿಸಿದರು. ಸಚಿವರ ಈ ಭೇಟಿ, 2021ರ ಜುಲೈನಲ್ಲಿ ಹೊಸ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿAದ ದೇಶದ ಎಲ್ಲಾ ಪ್ರಮುಖ ಬಂದರುಗಳಿಗೆ ನೀಡುತ್ತಿರುವ ಸರಣಿ ಭೇಟಿಗಳ ಭಾಗವಾಗಿತ್ತು. ಭೇಟಿಯ ವೇಳೆ ಶ್ರೀ ಸೋನೊವಾಲ್ ಬಂದರಿನಲ್ಲಿನ ಅಭಿವೃದ್ಧಿ ಕಾರ್ಯಗಳ ಮೇಲೆ ಪಕ್ಷಿನೋಟ ಬೀರಿ, ಬಂದರಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನಂತರ ಅವರು ಬಂದರು ಆಡಳಿತದೊಂದಿಗೆ ಸಭೆ ನಡೆಸಿದರು ಮತ್ತು ಬಂದರಿನ ಕಾರ್ಯಕ್ಷಮತೆ ಮತ್ತು ಅದರ ಭವಿಷ್ಯದ ವಿಸ್ತರಣೆ ಕಾರ್ಯಕ್ರಮಗಳನ್ನು ಪರಿಶೀಲಿಸಿದರು.

 

 

 

 

 

ಇದೇ ಸಂದರ್ಭದಲ್ಲಿ ಯುಎಸ್ ಮಲ್ಯ ಗೇಟ್‌ನ ನವೀಕರಣ ಕಾಮಗಾರಿ, ಬಂದರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಿದರು.ಬಂದರಿನಲ್ಲಿ ವ್ಯಾಪಾರ ಅಭಿವೃದ್ಧಿ ಕೇಂದ್ರದ ಕಟ್ಟಡದ ಲೋಕಾರ್ಪಣೆ ಮಾಡಲಾಯಿತು. ಕಸ್ಟಮ್ ಬಾಂಡ್ ಪ್ರದೇಶದಲ್ಲಿ ಎಕ್ಸಿಮ್ ಸರಕು ಸ್ವೀಕಾರ ಮತ್ತು ಆಮದು ಸರಕು ಸ್ಥಳಾಂತರಿಸುವಿಕೆಗಾಗಿನವ ಮಂಗಳೂರು ಬಂದರು ಟ್ರಸ್ಟ್ ಪೂರ್ವ, ದಕ್ಷಿಣ ಮತ್ತು ಉತ್ತರದಲ್ಲಿ 3 ಪ್ರವೇಶ ದ್ವಾರಗಳನ್ನು ಹೊಂದಿದೆ. ಬಂದರಿನ ಸ್ಥಾಪಕರ ಹೆಸರಿನ ಪೂರ್ವದ ಗೇಟ್ ಯುಎಸ್ ಮಲ್ಯ ಗೇಟ್, ಇದನ್ನು ನವೀಕರಿಸಲು ಪ್ರಸ್ತಾಪಿಸಲಾಯಿತು. ಗೇಟ್ ಸಂಕೀರ್ಣವನ್ನು ನೆಲ ಮತ್ತು 2 ಮಹಡಿಗಳೊಂದಿಗೆ ಈ ಕೆಳಗಿನ ನಿಬಂಧನೆಗಳನ್ನೊಳಗೊOಡOತೆ ನಿರ್ಮಿಸಲಾಗುವುದು ಎಂದು ಹೇಳಿದರು.

ದ್ವಿಚಕ್ರ ವಾಹನ ಚಾಲನೆಯ ಮಾರ್ಗ, ನಾಲ್ಕು ಚಕ್ರಗಳ ವಾಹನ ಚಾಲನೆಯ ಮಾರ್ಗ, ಟ್ರಕ್ ಚಾಲನೆಯ ಮಾರ್ಗ, ಪಾದಚಾರಿ ಮಾರ್ಗ, ಆರ್.ಎಫ್.ಐ.ಡಿ. ವ್ಯವಸ್ಥೆಯ ನಿಬಂಧನೆಗಳು, ರೇಡಿಯೋಲಾಜಿಕಲ್ ನಿಗಾ ಉಪಕರಣಗಳು, ಬೂಮ್ ತಡೆ ಸಾಧನಗಳು ಇತ್ಯಾದಿ.ನಿರ್ಗಮನ ಮತ್ತು ಪ್ರವೇಶ ದ್ವಾರಗಳೆರಡರಲ್ಲೂಸಿ.ಐ.ಎಸ್.ಎಫ್. ಇನ್ಸ್ಪೆಕ್ಟರ್ ಕಚೇರಿ, ಕಸ್ಟಮ್ ಕಚೇರಿ, ಫ್ರಿಸ್ಕಿಂಗ್ ರೂಂ, ಕಚೇರಿ ಕೊಠಡಿ ಮೊದಲ ಮಹಡಿ ಮತ್ತು 2ನೇ ಮಹಡಿ: ಸಿಸಿ ಟಿವಿ ಮೇಲ್ವಿಚಾರಣಾ ಕಚೇರಿಗಾಗಿ ಉದ್ದೇಶಿತ ಕಚೇರಿ ಕೊಠಡಿಗಳನ್ನು ಒದಗಿಸಲಾಗುವುದು. ಸಿಐಎಫ್ ಕಚೇರಿಗಳು, ನಿಯಂತ್ರಣ ಕೊಠಡಿ ಇತ್ಯಾ ಕಾಮಗಾರಿಯ ಒಪ್ಪಂದದ ವೆಚ್ಚ 3.22 ಕೋಟಿಗಳು. ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷಿತ ಪ್ರವೇಶ ದ್ವಾರದ ನವೀಕರಣದಿಂದ ಪ್ರಯೋಜನಗಳು ಸಂಚಾರ ಸುಗಮಗೊಳಿಸುವುದು ,ಅಪಘಾತಗಳು ನಡೆಯದಂತೆ ಮಾಡುವುದು,ಗೇಟ್‌ನಲ್ಲಿ ಟ್ರಕ್‌ಗಳು ಕಾಯುವ ಸಮಯವನ್ನು ತೊಡೆದುಹಾಕುವುದು, ವಿಪತ್ತುಗಳ ಉತ್ತಮ ಮೇಲ್ವಿಚಾರಣೆ, ಬಂದರಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿದರು.

 

 

 

 

ನವ ಮಂಗಳೂರು ಬಂದರಿನಿAದ ದಕ್ಷಿಣ ಕನ್ನಡ ಜಿಲ್ಲೆಯ ಹೊರಗಿನ ಮತ್ತು ಕರ್ನಾಟಕ ರಾಜ್ಯದ ಇತರ ದೂರದ ಪ್ರದೇಶಗಳಿಗೆ ಸರಕುಗಳನ್ನು ರವಾನಿಸಲು ಪ್ರತಿದಿನ ಸುಮಾರು 500 ಸಂಖ್ಯೆಯ ಟ್ರಕ್ ಗಳು ಸಂಚರಿಸುವುದನ್ನು ಗಮನಿಸಬಹುದಾಗಿದೆ. ನವ ಮಂಗಳೂರು ಬಂದರು ಕಸ್ಟಮ್ಸ್ ಹೌಸ್ ಬಳಿ ಈ ಟ್ರಕ್ ಗಳಿಗೆ 12,000 ಚದರ ಮೀಟರ್ ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸಿದ್ದು,ಸುಮಾರು 160 ಸಂಖ್ಯೆಯ ಟ್ರಕ್ ಗಳಿಗೆ ಸ್ಥಳಾವಕಾಶ ಕಲ್ಪಿಸುತ್ತಿದೆ, ಆದಾಗ್ಯೂಅಸ್ತಿತ್ವದಲ್ಲಿರುವ ನಿಲುಗಡೆ ಪ್ರದೇಶ ಸಾಕಾಗುವುದಿಲ್ಲ ಎಂಬುದು ಕಂಡುಬAದಿದೆ.

 

 

 

 

ದೇಶಕ್ಕೆ ಸ್ವಾತಂತ್ರ‍್ಯ ಬಂದ 75 ವರ್ಷಗಳ ನೆನಪಿಗಾಗಿ “ಸ್ವಾತಂತ್ರ‍್ಯದ ಅಮೃತ ಮಹೋತ್ಸವ”ದ ಹಿನ್ನೆಲೆಯಲ್ಲಿ ಬಂದರಿನ ಆಸುಪಾಸಿನ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಸಚಿವರು ಬಹುಮಾನಗಳನ್ನು ವಿತರಿಸಿದರು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆ ಮಟ್ಟ ಮತ್ತು ದೇಶದ ಬಗ್ಗೆ ಅವರ ಪ್ರೀತಿಯನ್ನು ಶ್ಲಾಘಿಸಿದರು. ಅಧ್ಯಕ್ಷ ಡಾ. ಎ.ವಿ. ರಮಣ ಮತ್ತು ಉಪಾಧ್ಯಕ್ಷ ಶ್ರೀ ಕೆ.ಜಿ. ನಾಥ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಮತ್ತು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಸಚಿವರು ಬಂದರಿನ ವಿವಿಧ ಬಾಧ್ಯಸ್ಥರೊಂದಿಗೆ ಸಂವಾದ ನಡೆಸಿದರು. ಬಾಧ್ಯಸ್ಥರನ್ನುದ್ದೇಶಿಸಿ ಮಾತನಾಡಿದ ಸಚಿವರು, ಬಂದರಿನಲ್ಲಿ ಕಾರ್ಯವಿಧಾನಗಳನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸುವ ಮೂಲಕ ಮತ್ತಷ್ಟು ಸುಗಮ ವಹಿವಾಟುಗಳ ಬಗ್ಗೆ ಭರವಸೆ ನೀಡಿ, ಸುಗಮ ವ್ಯಾಪಾರವನ್ನು ಉತ್ತೇಜಿಸುವುದಾಗಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು