News Karnataka Kannada
Monday, April 29 2024
ಮಂಗಳೂರು

ದೇಶ ಕಂಡ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿದ ಜ್ಯೋತಿ ಬಸು ನಾಯಕತ್ವ ಇಡೀ ದೇಶಕ್ಕೆ ಮಾದರಿ – ಸುಕುಮಾರ್

Mangalore
Photo Credit :
ಮಂಗಳೂರು : ಬಂಗಾಳದ ಅಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ಜ್ಯೋತಿಬಸು ತನ್ನ ಜೀವಿತದ ಕೊನೆಯ ಉಸಿರು ಇರುವವರೆಗೂ ಸಮಾಜದ ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದವರು.
ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ ಜ್ಯೋತಿ ಬಸು ವಾಪಾಸ್ ತಾಯ್ನಾಡಿಗೆ ಕಮ್ಯುನಿಸ್ಟ್‌ರಾಗಿ ಬಂದು ಬಂಗಾಳದ ರೈತ ಕಾರ್ಮಿಕರ ಆಶಾಕಿರಣವಾಗಿ ಹೊರಹೊಮ್ಮಿದರು.
ತನ್ನ ಯೌವನದಲ್ಲೇ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ಬಂಗಾಳದ ವಿದಾನಸಭೆಯಲ್ಲಿ ದುಡಿಯುವ ವರ್ಗದ ಧ್ವನಿಯಾಗಿ ಮೂಡಿದರು. ತಾನು ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲೂ ಜಯ ಗಳಿಸುವ ಮೂಲಕ ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿದ್ದರು.
24 ವರ್ಷಗಳ ಕಾಲ ಬಂಗಾಳದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಡೆಸಿದ ಅರೆ ಫ್ಯಾಸಿಸ್ಟ್ ದಬ್ಬಾಳಿಕೆಯನ್ನು, ತೀವ್ರಗೊಂಡಿದ್ದ ನಕ್ಸಲ್ ಹಾವಳಿಯನ್ನು, ಗೂರ್ಖಾ ಲ್ಯಾಂಡ್‌ನ ಪ್ರತ್ಯೇಕತಾವಾದಿ ಚಳುವಳಿಯನ್ನು ಸಮರ್ಥವಾಗಿ ಎದುರಿಸಿ ಶಮನ ಮಾಡುವಲ್ಲಿ ಜ್ಯೋತಿಬಸು ಪಾತ್ರ ಸ್ಮರಣೀಯವಾದದ್ದು.
ಇಂದಿರಾಗಾಂಧಿ ಹತ್ಯೆಗೆ ಪ್ರತಿಯಾಗಿ ಸಿಖ್ಖರ ಮೇಲಿನ ಧಾಳಿ ಹಾಗೂ ಬಾಬ್ರಿ ಮಸೀದಿ ಧ್ವಂಸದಿಂದಾಗಿ ದೇಶದೆಲ್ಲೆಡೆ ಭುಗಿಲೆದ್ದ ಹಿಂಸಾಚಾರಗಳು ಪಶ್ಚಿಮ ಬಂಗಾಳದಲ್ಲಿ ಒಂದೇ ಒಂದು ಗಲಭೆ ನಡೆಯದಂತೆ ಮುತುವರ್ಜಿ ವಹಿಸಿದ ಜ್ಯೋತಿಬಸುರವರ ಪಾತ್ರ ನಿಜಕ್ಕೂ ಶ್ಲಾಘನೀಯ.
ಹೀಗೆ ದೇಶ ಕಂಡ ಪ್ರತಿಯೊಂದು ಸಂಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿದ ಜ್ಯೋತಿಬಸುರವರ ದೂರದೃಷ್ಟಿಕೋನದ ನಾಯಕತ್ವ ನಿಜಕ್ಕೂ ದೇಶಕ್ಕೆ ಮಾದರಿ ಎಂದು CPIM ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ರವರು ಅಭಿಪ್ರಾಯ ಪಟ್ಟರು.
 ಅವರು ಮಂಗಳೂರಿನ ವಿಕಾಸ ಕಚೇರಿಯಲ್ಲಿ ಜರುಗಿದ ಜ್ಯೋತಿಬಸುರವರ 12ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಬಂಗಾಳದ ಕೆಂಪು ಸೂರ್ಯ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು_ .
CPIM ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಯವರು ಮಾತನಾಡಿ, ಮುಖ್ಯಮಂತ್ರಿಯಾದ ಪ್ರಾರಂಭದಲ್ಲೇ ಭೂಹೀನರಿಗೆ ಭೂಮಿ ಹಂಚಿಕೆ, ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಗಳನ್ನು ಸಮರ್ಪಕ ಜಾರಿಗೊಳಿಸಿದ ಕೀರ್ತಿ ಜ್ಯೋತಿಬಸುರವರಿಗೆ ಸಲ್ಲುತ್ತದೆ.
ಶಿಕ್ಷಣ, ಆರೋಗ್ಯ, ಕೃಷಿರಂಗಗಳಿಗೆ ಪ್ರಮುಖ ಆದ್ಯತೆ ನೀಡಿ ಇಡೀ ದೇಶದಲ್ಲಿ ಮಾದರಿ ಆಡಳಿತ ನಡೆಸಿದ ಜ್ಯೋತಿಬಸುರವರು ಕೋಮುವಾದದ ವಿರುದ್ದ ಧ್ರಢವಾಗಿ ನಿಂತು ಪಶ್ಚಿಮ ಬಂಗಾಳದಲ್ಲಿ ಸೌಹಾರ್ದತೆಯನ್ನು ಸಾಕಾರಗೊಳಿಸಿದ್ದರು ಹಾಗೂ ಪ್ರಧಾನಿ ಪಟ್ಟವೇ ತನ್ನ ಬಳಿ ಬಂದಿದ್ದರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಬಿ.ಎಂ. ಮಾಧವರವರು ವಹಿಸಿದ್ದರು. ಪ್ರಾರಂಭದಲ್ಲಿ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿದರೆ, ಕೊನೆಯಲ್ಲಿ ಸಂತೋಷ್ ಬಜಾಲ್ ರವರು ವಂದಿಸಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು