News Karnataka Kannada
Friday, May 10 2024
ಮಂಗಳೂರು

ದೃಢ ಸಂಕಲ್ಪದಿಂದ ಬದುಕು ರೂಪಿಸಬೇಕು: ಡಾ| ಡಿ. ವೀರೇಂದ್ರ ಹೆಗ್ಗಡೆ

Untitled 2 Recovered
Photo Credit :

ಬೆಳ್ತಂಗಡಿ: ಸಜ್ಜನರ ಸಹವಾಸದೊಂದಿಗೆ ದೃಢಸಂಕಲ್ಪದಿಂದ ಬದುಕು ರೂಪಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.

ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 178ನೇ ವಿಶೇಷ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪಾಶ್ಚಾತ್ಯ ದೇಶಗಳಲ್ಲಿ ಜನರು ಶೋಕಿಗಾಗಿ ಕುಡಿಯುತ್ತಾರೆ. ಆದರೆ ನಮ್ಮಲ್ಲಿ ಕುಡಿತದ ಚಟಕ್ಕೊಳಗಾದವನು ಹಿಡಿತವಿಲ್ಲದೆ ದಿನಾಲೂ ಕಂಠಪೂರ್ತಿ ಕುಡಿಯುತ್ತಾರೆ. ಸಾಂಸಾರಿಕ, ವ್ಯಾವಹಾರಿಕ, ಆರ್ಥಿಕ ಅಡಚಣೆಗಳು ಸ್ವಾಭಾವಿಕವಾಗಿ ಮನುಷ್ಯನನ್ನು ಬಹಳ ಗೊಂದಲಕ್ಕೀಡು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಗಟ್ಟಿ ಮನಸ್ಸು ಮಾಡಿ ಮತಿಭ್ರಷ್ಠರಾಗದಂತೆ ವ್ಯಕ್ತಿತ್ವ ರೂಪಿಸುವುದು ಅತ್ಯವಶ್ಯವಾಗಿದೆ. ಹುಲಿಯು ಮನುಷ್ಯನ ರಕ್ತದ ರುಚಿ ಸವಿದ ನಂತರ ನರಭಕ್ಷಕನಾಗುತ್ತದೆ. ಅದೇ ರೀತಿ ನಾಲಿಗೆಗೆ ಒಂದು ಬಾರಿ ಮದ್ಯದ ರುಚಿ ಹಿಡಿದು ಮತ್ತೆ ಅದೇ ಬೇಕೆಂದು ಸೇವಿಸುವುದರಿಂದ ವ್ಯಸನಿಯು ಕುಡಿತದ ದಾಸನಾಗುತ್ತಾನೆ.

ಆಟದಲ್ಲಿ ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು. ಸೋಲಿನ ದು:ಖವನ್ನು ಸಹಿಸಲು ವ್ಯಸನಕ್ಕೆ ಬಲಿಬೀಳಬಾರದು. ಯಾವುದೇ ಸಂದರ್ಭದಲ್ಲಿ ಕೃತಕವಾದ ಅಭ್ಯಾಸಗಳ ಅವಲಂಬನೆಯಿಂದ ತಪ್ಪಿಸಿಕೊಂಡರೆ ಜೀವನದಲ್ಲಿ ನೆಮ್ಮದಿ ಹೊಂದಲು ಸಾಧ್ಯ. ಪಂಚೇಂದ್ರಿಯಗಳ ಮೇಲೆ ಹಿಡಿತ ಸಾಧಿಸಿದವನು ಜೀವನದಲ್ಲಿ ಯಶಸ್ಸು ಗಳಿಸುತ್ತಾನೆ. ಪರಿವರ್ತನೆಗೆ ಒಳಪಟ್ಟ ವ್ಯಸನಿಗಳು ಮುಂದಿನ ದಿನಗಳಲ್ಲಿ ಸ್ನೇಹಿತರ ಒತ್ತಡಕ್ಕೆ ಬಲಿಯಾಗದೆ ಕೀಳರಿಮೆಯನ್ನು ಬಿಟ್ಟು, ಸೇಡು ತೀರಿಸಿಕೊಳ್ಳದೆ ಎಂದರು.

ಶಿಬಿರದಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದಿರುವ 106 ಮದ್ಯವ್ಯಸನಿಗಳಿಗೆ ಮನೋ ವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತಸಲಹೆಯೊಂದಿಗೆ ಪ್ರೇರಣೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಕೆ. ಮೋಹನ್, ಶಿಬಿರಾಧಿಕಾರಿ ದಿನೇಶ್ ಮರಾಠಿ, ಆರೋಗ್ಯ ಸಹಾಯಕಿ ರಂಜಿತಾ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ಜೂ. 20 ರಿಂದ ವೇದಿಕೆಯ ಪ್ರಕಟಣೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು