News Karnataka Kannada
Monday, May 06 2024
ಮಂಗಳೂರು

ಡಿಜಿಟಲ್ ಗ್ರಾಮ ಸಭೆಯೊಂದಿಗೆ ಗಮನ ಸೆಳೆದ ಅಳದಂಗಡಿ ಗ್ರಾಮ ಪಂಚಾಯತ್

New Project 2021 09 30t180349.063
Photo Credit :

ಬೆಳ್ತಂಗಡಿ: ಅಳದಂಗಡಿ ಗ್ರಾಮಪಂಚಾಯಿತಿಯ 2021-22 ನೇ ಸಾಲಿನ ಪ್ರಥಮ ಗ್ರಾಮ ಸಭೆ ಸೆ. 28 ರಂದು ಪಂಚಾಯಿತಿ ಸಭಾಭವನದಲ್ಲಿ ಜರಗಿತು. ಗ್ರಾಪಂ ಅಧ್ಯಕ್ಷೆ ಸೌಮ್ಯಾ ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಡಿಜಿಟಲ್ ಗ್ರಾಮ ಸಭೆಯನ್ನು ನಡೆಸುವ ಮೂಲಕ ಗ್ರಾಮ ಸಭೆಯನ್ನು ವಿನೂತನವಾಗಿ ನಡೆಸಿ ಜಿಲ್ಲೆಯಲ್ಲೇ ಮಾದರಿ ಎನಿಸಿದಲ್ಲದೆ . ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಗ್ರಾಮದಲ್ಲಿ ನಡೆದ ಕಾಮಗಾರಿ ಹಾಗೂ ಹೆಚ್ಚಿನ ವಿವರಗಳನ್ನು ಬೃಹತ್ ಪರದೆಯ ಮೂಲಕ ಪ್ರದರ್ಶಿಸಿ ಗ್ರಾಮಸ್ಥರಿಗೆ ಸಮಗ್ರ ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಆನಂದ ಬಿ. ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಪಿಡಿಒ ಗಾಯತ್ರಿ ಪಿ. ಕಳೆದ ಗ್ರಾಮಸಭೆಯ ಅನುಪಾಲನಾ ವರದಿ, ಜಮಾಖರ್ಚು,ಅಮೃತ ವಸತಿ ಯೋಜನೆ, ನರೇಗಾ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.

ಪಂಚಾಯಿತಿ ಸಿಬ್ಬಂದಿ ಮೋಹನ್ ಹಾಗೂ ಅಕ್ಷತಾ ವಾರ್ಡ್ ಸಭೆಯ ಪ್ರಸ್ತಾವನೆ ಹಾಗೂ ಇತರ ವಿಚಾರಗಳ ಕುರಿತು ಸಭೆಗೆ ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಸವಲತ್ತುಗಳ ಕುರಿತು ಮಾಹಿತಿ ನೀಡಿದರು. ಗ್ರಾಮಸ್ಥರು ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಬೇಡಿಕೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್ ನಾನು ಅಧ್ಯಕ್ಷೆಯಾಗಿ ಬಂದ ನಂತರ ಜನರು ತುಂಬಾ ಸಹಕಾರ ನೀಡಿದ್ದಾರೆ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಕೆಲಸವನ್ನು ಅನುಷ್ಠಾನಕ್ಕೆ ತರುವಂತಹ ಪ್ರಯತ್ನ ಮಾಡುತ್ತೇನೆ. ಗ್ರಾಮದ ಜನರು ತಮಗೆ ಎದುರಾಗುವ ಯಾವುದೇ ಸಮಸ್ಯೆಯನ್ನು ನನ್ನ ಬಳಿ ಹೇಳಬಹುದು ಎಂದರು.

ಪಂಚಾಯತ್ ಅಭಿವೃದ್ಧಿ ಗಾಯತ್ರಿ ಪಿ. ಮಾತನಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಗಳನ್ನು ಪಡೆದುಕೊಂಡು ಅದಲ್ಲದೆ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ವಿವಿಧ ರೀತಿಯ ಕಾಮಗಾರಿ ಮಾಡಲು ಅವಕಾಶ ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗ್ರಾಮಸ್ಥರಿಗೆ ಪಂಚಾಯತ್ ಮೂಲಕ ನೀಡಲಾಗುವುದು ಎಂದ ಅವರು ಅಳದಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಬಂದ ನಂತರದ ಮೊದಲ ಗ್ರಾಮ ಸಭೆ ಇದಾಗಿದ್ದು ಗ್ರಾಮಸ್ಥರು, ಆಡಳಿತ ವರ್ಗ, ಸಿಬ್ಬಂದಿಗಳು ಸಂಪೂರ್ಣ ಸಹಕಾರ ನೀಡಿದ್ದಲ್ಲಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿಸುವ ಕನಸಿದೆ ಅದ್ದರಿಂದ ಎಲ್ಲರೂ ಸಹಕಾರ ನೀಡಬೇಕು ಎಂಬ ಮನವಿಯನ್ನು ಮಾಡಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹರೀಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು