News Karnataka Kannada
Monday, April 29 2024
ಮಂಗಳೂರು

ಜಗತ್ತಿನಾದ್ಯಂತ ನಡೆದ ವಿಮೋಚನಾ ಹೋರಾಟಗಳಿಗೆ ಲೆನಿನ್ ಸ್ಪೂರ್ತಿಯ ಸೆಲೆಯಾಗಿದ್ದರು; ಮನೋಜ್

Dyfi
Photo Credit : News Kannada
ಮಂಗಳೂರು : ಮಾರ್ಕ್ಸ್‌ವಾದಿ ಸಿದ್ದಾಂತವನ್ನು ಅಳವಡಿಸಿ ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಕ್ರಾಂತಿ ನಡೆಸಿ ಸೋವಿಯತ್ ಒಕ್ಕೂಟವನ್ನು ರಚಿಸಿ ಬಂಡವಾಳಶಾಹಿ ವ್ಯವಸ್ಥೆಗೆ ಎದುರಾಗಿ ಸಮಾಜವಾದಿ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ದುಡಿಯುವ ವರ್ಗದ ಸರಕಾರವನ್ನು ರಚಿಸಿದ ಲೆನಿನ್, ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ನಡೆದ ವಿಮೋಚನಾ ಹೋರಾಟಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ಆ ಮೂಲಕ ಸಮಾಜವಾದಿ ವ್ಯವಸ್ಥೆಯ ಹರಿಕಾರರಾಗಿ ಮೂಡಿ ಬಂದಿದ್ದರು ಎಂದು DYFI ಜಿಲ್ಲಾ ನಾಯಕರೂ, ಯುವ ವಕೀಲರಾದ ಮನೋಜ್ ವಾಮಂಜೂರುರವರು ಅಭಿಪ್ರಾಯ ಪಟ್ಟರು.

ಅವರು ಜಾಗತಿಕ ಕಮ್ಯುನಿಸ್ಟ್ ಚಳುವಳಿಯ ನಾಯಕ ಹಾಗೂ ದಾಸ್ಯದ ಸಂಕೋಲೆಯ ಕಿತ್ತೆಸೆದು ನವಸಮಾಜದ ನಿರ್ಮಾಣದ ಅಮರ ಚೇತನ ಲೆನಿನ್ ರವರ 98ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಮಂಗಳೂರಿನ ವಿಕಾಸ ಕಚೇರಿಯಲ್ಲಿ ಜರುಗಿದ ಸಮಾಜವಾದಿ ವ್ಯವಸ್ಥೆಯ ಹರಿಕಾರ ಒಂದು ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ, ಈ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು, ಎಳೆಯ ಪ್ರಾಯದಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಲೆನಿನ್, ಬಂಡವಾಳಶಾಹಿಗಳ ಶೋಷಣೆಯಿಂದ ಆಕ್ರೋಶಿತರಾಗಿ ದುಡಿಯುವ ವರ್ಗದ ಪರವಾಗಿ ಸದಾ ಚಿಂತಿಸುತ್ತಿದ್ದರು.ದುಡಿಯುವ ವರ್ಗದ ಸಿದ್ದಾಂತವಾದ ಮಾರ್ಕ್ಸ್‌ವಾದವನ್ನು ಚೆನ್ನಾಗಿ ಅರ್ಥೈಸಿ ಅದರ ಆಧಾರದಲ್ಲಿ ಸಮಾಜದಲ್ಲಿ ಕ್ರಾಂತಿ ನಡೆಸುವ ಅಗತ್ಯತೆಯನ್ನು ಮನಗಂಡರು. ತನ್ನ ಬರಹಗಳನ್ನು ತೀಕ್ಷಗೊಳಿಸುವ ಮೂಲಕ ಕಾರ್ಮಿಕ ವರ್ಗವನ್ನು ಬಡಿದೆಬ್ಬಿಸಿದರು.ರಷ್ಯಾದ ಝಾರ್ ಆಳ್ವಿಕೆಯಿಂದ ತೀವ್ರ ಸಂಕಷ್ಟಗೊಳಗಾದ ಲೆನಿನ್ ಛಲಬಿಡದೆ ಕಾರ್ಮಿಕರನ್ನು ಒಗ್ಗೂಡಿಸಿ ಕ್ರಾಂತಿಯತ್ತ ಹೆಜ್ಜೆ ಹಾಕಿದರು.1917ರಲ್ಲಿ ಜರುಗಿದ ಸಮಾಜವಾದಿ ವ್ಯವಸ್ಥೆಯ ಅಕ್ಟೋಬರ್ ಕ್ರಾಂತಿ ಜಗತ್ತಿನ ಚರಿತ್ರೆಯಲ್ಲಿ ಹೊಸ ಮೈಲುಗಲ್ಲಾಯಿತು.ಈ ಮೂಲಕ ಕ್ರಾಂತಿಯ ಹರಿಕಾರ ಲೆನಿನ್ ರವರ ಸಂಘಟನಾ ಚಾತುರ್ಯವನ್ನು ಜಗತ್ತೇ ಕೊಂಡಾಡಿತು ಎಂದು ಹೇಳಿದರು.

ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿಯವರು ಮಾತನಾಡುತ್ತಾ, ಮಾರ್ಕ್ಸ್ ವಾದಿ ಸಿದ್ದಾಂತದ ಆಧಾರದಲ್ಲಿ ಕಾರ್ಮಿಕ ವರ್ಗದ ನೇತ್ರತ್ವದಲ್ಲಿ ಸರಕಾರ ರಚಿಸಲು ಸಾಧ್ಯವಿದೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಲೆನಿನ್, ಜಾಗತಿಕ ಬಂಡವಾಳ ಶಾಹಿಗಳ ಕೆಂಗಣ್ಣಿಗೆ ಗುರಿಯಾದರು.ಕ್ರಾಂತಿ ನಡೆದ ಬಳಿಕ ಲೆನಿನ್ ನೇತ್ರತ್ವದಲ್ಲಿ ರಷ್ಯಾದಲ್ಲಿ ನಡೆಸಿದ ಸಾಮಾಜಿಕ ಸುಧಾರಣೆಗಳು ಜಗತ್ಪ್ರಸಿದ್ಧವಾಯಿತು.ಈ ಮೂಲಕ ಜಗತ್ತಿನಾದ್ಯಂತ ಕಮ್ಯುನಿಸ್ಟ್ ಚಿಂತನೆಗಳು ವೇಗವಾಗಿ ಪಸರಿಸಿತು ಎಂದು ಹೇಳಿದರು

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪ್ರಗತಿಪರ ಚಿಂತಕರಾದ ಸಂಜೀವ ಬಳ್ಕೂರುರವರು ಲೆನಿನ್ ರವರ ಬದುಕು ಬರಹಗಳ ಬಗ್ಗೆ ಬೆಳಕು ಚೆಲ್ಲುತ್ತಾ,ಇಂದಿನ ಯುವ ಪೀಳಿಗೆ ಹೆಚ್ಚೆಚ್ಚು ಲೆನಿನ್ ರವರನ್ನು ಅರ್ಥೈಸುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಪ್ರಾರಂಭದಲ್ಲಿ ಸುನಿಲ್ ಕುಮಾರ್ ಬಜಾಲ್ ರವರು ಸ್ವಾಗತಿಸಿದರೆ, ಕೊನೆಯಲ್ಲಿ ಯೋಗೀಶ್ ಜಪ್ಪಿನಮೊಗರುರವರು ವಂದಿಸಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು